ವಿಶ್ವಕಪ್ ಗೆದ್ದುಕೊಟ್ಟ ನಾಯಕ ಈಗ ವಾಟರ್‌ ಬಾಯ್..! ಆಸೀಸ್ ಸಕ್ಸಸ್‌ಗೆ ಇದೇ ರೀಸನ್ ಎಂದ ನೆಟ್ಟಿಗರು

Published : Jun 06, 2024, 07:05 PM IST

ಬಾರ್ಬಡಾಸ್: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭರ್ಜರಿಯಾಗಿಯೇ ಚಾಲನೆ ಸಿಕ್ಕಿದೆ. ಇದೀಗ ಆಸ್ಟ್ರೇಲಿಯಾ ಹಾಗೂ ಓಮನ್ ನಡುವಿನ ಪಂದ್ಯದ ವೇಳೆಯಲ್ಲಿ ಆಸೀಸ್‌ಗೆ ವಿಶ್ವಕಪ್ ಗೆದ್ದುಕೊಟ್ಟ ನಾಯಕ ವಾಟರ್‌ ಬಾಯ್ ಆಗಿ ಕಾಣಿಸಿಕೊಂಡಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್‌

PREV
16
ವಿಶ್ವಕಪ್ ಗೆದ್ದುಕೊಟ್ಟ ನಾಯಕ ಈಗ ವಾಟರ್‌ ಬಾಯ್..! ಆಸೀಸ್ ಸಕ್ಸಸ್‌ಗೆ ಇದೇ ರೀಸನ್ ಎಂದ ನೆಟ್ಟಿಗರು

2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮಿಚೆಲ್ ಮಾರ್ಷ್ ನೇತೃತ್ವದ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಶುಭಾರಂಭ ಮಾಡಿದೆ. ಚುಟುಕು ವಿಶ್ವಕಪ್‌ನ 10ನೇ ಪಂದ್ಯದಲ್ಲಿ ಓಮನ್ ಎದುರು 39 ರನ್ ಭರ್ಜರಿ ಗೆಲುವು ದಾಖಲಿಸಿದೆ.

26

ಇನ್ನು ಓಮನ್ ಎದುರಿನ ಪಂದ್ಯದ ಟಾಸ್ ವೇಳೆ ತಂಡವನ್ನು ಹೆಸರಿಸುವಾಗ ಆಸೀಸ್ ನಾಯಕ ಮಿಚೆಲ್ ಮಾರ್ಷ್ ತಮ್ಮ ಆಡುವ ಹನ್ನೊಂದರ ಬಳಗದಲ್ಲಿ ಪ್ಯಾಟ್ ಕಮಿನ್ಸ್ ಇಲ್ಲ ಎನ್ನುವುದನ್ನು ಖಚಿತಪಡಿಸಿದ್ದರು.

36

ಪ್ಯಾಟ್ ಕಮಿನ್ಸ್‌, ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಕಂಡಂತಹ ಯಶಸ್ವಿ ನಾಯಕರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಕಳೆದ ವರ್ಷ ಪ್ಯಾಟ್ ಕಮಿನ್ಸ್ ನೇತೃತ್ವದಲ್ಲಿ ಆಸ್ಟ್ರೇಲಿಯಾ ತಂಡವು ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಹಾಗೂ ಐಸಿಸಿ ಏಕದಿನ ವಿಶ್ವಕಪ್ ಜಯಿಸುವಲ್ಲಿ ಯಶಸ್ವಿಯಾಗಿತ್ತು.

46

ಹೀಗಿದ್ದೂ ಈ ಬಾರಿಯ ಅಂದರೆ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಕಮಿನ್ಸ್ ಬದಲಿಗೆ ಮಿಚೆಲ್ ಮಾರ್ಷ್‌ಗೆ ಆಸೀಸ್ ತಂಡದ ನಾಯಕ ಪಟ್ಟ ಕಟ್ಟುವ ಮೂಲಕ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ದಿಟ್ಟ ನಿರ್ಧಾರವನ್ನು ಪ್ರಕಟಿಸಿತ್ತು.

56

ಇದೀಗ ಆಸೀಸ್ ತಾನಾಡಿದ ಮೊದಲ ಟಿ20 ಪಂದ್ಯದಲ್ಲಿ ತನ್ನ ತಂಡದ ಯಶಸ್ವಿ ವೇಗಿ ಹಾಗೂ ನಾಯಕನಾಗಿದ್ದ ಪ್ಯಾಟ್ ಕಮಿನ್ಸ್ ಅವರನ್ನು ಹೊರಗಿಟ್ಟು ಕಣಕ್ಕಿಳಿದು ಅಚ್ಚರಿ ಮೂಡಿಸಿತು. ಮಾತ್ರವಲ್ಲದೇ ಬ್ರೇಕ್ ವೇಳೆ ಪ್ಯಾಟ್ ಕಮಿನ್ಸ್ ತನ್ನ ಆಟಗಾರರಿಗೆ ವಾಟರ್ ಬಾಯ್ ಆಗಿ ಮೈದಾನಕ್ಕಿಳಿದು ಗಮನ ಸೆಳೆದರು.

66
Australia Cricket Team

ಆಸ್ಟ್ರೇಲಿಯಾ ತಂಡದಲ್ಲಿ ನೀವೆಷ್ಟೇ ದೊಡ್ಡ ಸಾಧನೆ ಮಾಡಿದರೂ, ಎಲ್ಲಾ ಆಟಗಾರರನ್ನು ಸಮಾನವಾಗಿ ಕಾಣುತ್ತದೆ ಎನ್ನುವುದಕ್ಕೆ ಇದು ಸಾಕ್ಷಾತ್ ಉದಾಹರಣೆ. ಕಾಂಗರೂ ಪಡೆಯಲ್ಲಿ ತಾರತಮ್ಯ ಇಲ್ಲದಿರುವುದರಿಂದಲೇ ಐಸಿಸಿ ಟೂರ್ನಿಯಲ್ಲಿ ಆಸೀಸ್ ಹಲವು ಟ್ರೋಫಿ ಗೆದ್ದಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

click me!

Recommended Stories