ಇಂಡೋ-ಪಾಕ್ ಫೈಟ್‌ಗೆ ಕ್ಷಣಗಣನೆ: ಟೀಂ ಇಂಡಿಯಾ ಪಾಲಿಗೆ ವಿಲನ್ ಆಗ್ತಾರಾ ಈ ಐವರು ಪಾಕ್ ಪ್ಲೇಯರ್ಸ್‌..?

First Published | Jun 8, 2024, 3:29 PM IST

ನ್ಯೂಯಾರ್ಕ್‌: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಬಹುನಿರೀಕ್ಷಿತ ಟಿ20 ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಪಂದ್ಯದಲ್ಲಿ ಭಾರತ ಗೆಲ್ಲುವ ಫೇವರೇಟ್ ಎನಿಸಿದ್ದರೂ, ನೆರೆಯ ಪಾಕಿಸ್ತಾನ, ಟೀಂ ಇಂಡಿಯಾಗೆ ಶಾಕ್ ನೀಡಲು ಎದುರು ನೋಡುತ್ತಿದೆ. ಪಾಕ್ ತಂಡದ ಈ ಐವರು ಬ್ಯಾಟರ್‌ಗಳು ಟೀಂ ಇಂಡಿಯಾ ಗೆಲುವಿನ ಆಸೆಗೆ ಅಡ್ಡಗಾಲು ಹಾಕುವ ಸಾಧ್ಯತೆಯಿದೆ. ಅಷ್ಟಕ್ಕೂ ಯಾರು ಆ ಆಟಗಾರರು ಎನ್ನುವ ನಿಮ್ಮ ಕುತೂಹಲಕಕ್ಕೆ ಇಲ್ಲಿದೆ ನೋಡಿ ಉತ್ತರ.
 

ಇಡೀ ಕ್ರಿಕೆಟ್ ಜಗತ್ತೇ ಜೂನ್ 09ರಂದು ನಡೆಯಲಿರುವ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿವೆ.

ಕಳೆದ ಎಂಟು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಟ್ಟು 7 ಬಾರಿ ಮುಖಾಮುಖಿಯಾಗಿದ್ದು ಭಾರತ 6 ಬಾರಿ ಜಯಿಸಿದ್ದರೆ, ಒಮ್ಮೆ ಮಾತ್ರ ಗೆಲುವು ಪಾಕಿಸ್ತಾನದ ಪಾಲಾಗಿದೆ.

Tap to resize

2021ರಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಬಾಬರ್ ಅಜಂ ನೇತೃತ್ವದ ಪಾಕ್ ತಂಡಕ್ಕೆ 10 ವಿಕೆಟ್‌ಗಳಿಂದ ಶರಣಾಗಿತ್ತು.

ಭಾರತ ತಂಡವು ಯಾವಾಗಲೂ ಪಾಕಿಸ್ತಾನವನ್ನು ಲಘುವಾಗಿ ಪರಿಗಣಿಸಿಲ್ಲ. ಕಳೆದ ಆವೃತ್ತಿಯ ಟಿ20 ವಿಶ್ವಕಪ್ ರನ್ನರ್ ಅಪ್ ಪಾಕಿಸ್ತಾನ, ಈಗಾಗಲೇ ಆತಿಥೇಯ ಯುಎಸ್‌ಎಗೆ ಶರಣಾಗಿದ್ದು, ಇದೀಗ ಭಾರತ ಎದುರಿನ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಭಾರತ ಎದುರು ಪಾಕಿಸ್ತಾನ ತಂಡವು ಗೆಲ್ಲಬೇಕಿದ್ದರೇ, ತಂಡದ ಎಲ್ಲಾ ಆಟಗಾರರು ಶಕ್ತಿಮೀರಿ ಪ್ರದರ್ಶನ ತೋರಬೇಕಿದೆ. ಅದರಲ್ಲೂ ಟೀಂ ಇಂಡಿಯಾ ಗೆಲುವಿನ ಆಸೆಗೆ ತಣ್ಣೀರು ಎರೆಚಲು ಪಾಕಿಸ್ತಾನದ ಈ ಐವರು ಆಟಗಾರರು ಸಜ್ಜಾಗಿದ್ದಾರೆ.

1. ಬಾಬರ್ ಅಜಂ:

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ, ಎಂತಹದ್ದೇ ಬಲಿಷ್ಠ ಬೌಲಿಂಗ್ ಪಡೆಯಿದ್ದರೂ ಅನಾಯಾಸವಾಗಿ ರನ್ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಟೀಂ ಇಂಡಿಯಾ ಗೆಲುವು ಸಾಧಿಸಬೇಕಿದ್ದರೇ, ಬಾಬರ್ ಅವರನ್ನು ಆದಷ್ಟು ಬೇಗ ವಿಕೆಟ್ ಕಬಳಿಸಬೇಕು. ಹೀಗಾಗಿ ಬಾಬರ್ ಅಜಂ ಟೀಂ ಇಂಡಿಯಾಗೆ ವಿಲನ್ ಆಗಿ ಕಾಡುವ ಸಾಧ್ಯತೆಯಿದೆ.

2. ಶಾಹಿನ್ ಅಫ್ರಿದಿ:

ಪಾಕಿಸ್ತಾನದ ಎಡಗೈ ವೇಗಿ ಶಾಹಿನ್ ಅಫ್ರಿದಿ, ತಮ್ಮ ಕರಾರುವಕ್ಕಾದ ವೇಗ ಹಾಗೂ ಸ್ವಿಂಗ್ ಮೂಲಕ ಎದುರಾಳಿ ಬ್ಯಾಟರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸುವ ಸಾಮರ್ಥ್ಯ ಹೊಂದಿದ್ದಾರೆ. ಐಸಿಸಿ ಟೂರ್ನಿಯಲ್ಲಿ ಶಾಹಿನ್‌, ಭಾರತದ ಎದುರು ಮತ್ತಷ್ಟು ಅಪಾಯಕಾರಿ ಬೌಲರ್ ಎನ್ನುವುದನ್ನು ಕ್ರಿಕೆಟ್ ಅಭಿಮಾನಿಗಳಿಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ.

3. ಮೊಹಮ್ಮದ್ ರಿಜ್ವಾನ್:

ಸ್ಪೋಟಕ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್, ಚುರುಕಾಗಿ ರನ್ ಗಳಿಸುವುದರಲ್ಲಿ ನಿಸ್ಸೀಮ. ಭಾರತ ತಂಡವು ರಿಜ್ವಾನ್ ಅವರನ್ನು ಆದಷ್ಟು ಬೇಗ ಕಟ್ಟಿಹಾಕದಿದ್ದರೇ ಅಪಾಯ ಕಟ್ಟಿಟ್ಟ ಬುತ್ತಿ.

4. ನಸೀಂ ಶಾ:

ಪಾಕ್ ಯುವ ಮಾರಕ ವೇಗಿ ನಸೀಂ ಶಾ ಹೊಸ ಚೆಂಡೇ ಇರಲಿ ಹಾಗೂ ಹಳೆಯ ಚೆಂಡೇ ಆಗಲಿ ಡೇಂಜರರ್ಸ್ ಬೌಲರ್. ಈ ವೇಗಿಯ ಎದುರು ಟೀಂ ಇಂಡಿಯಾ ಬ್ಯಾಟರ್‌ಗಳು ಎಚ್ಚರವಾಗಿ ಆಡಬೇಕು. ಕೊಂಚ ಮೈ ಮರೆತರೂ ಪೆವಿಲಿಯನ್‌ ಸೇರಬೇಕಾಗುತ್ತದೆ.

5. ಶಾದಾಬ್ ಖಾನ್:

ಶಾದಾಬ್ ಖಾನ್ ಪಾಕ್ ತಂಡದ ಸ್ಟಾರ್ ಆಲ್ರೌಂಡರ್. ಶಾದಾಬ್ ಖಾನ್ ಸದ್ಯ ಉತ್ತಮ ಫಾರ್ಮ್‌ನಲ್ಲಿದ್ದು, ಟೀಂ ಇಂಡಿಯಾ ಪಾಲಿಗೆ ವಿಲನ್ ಅಗುವ ಸಾಧ್ಯತೆಯಿದೆ. ಹೀಗಾಗಿ ರೋಹಿತ್ ಪಡೆ ಈ ಪಾಕ್ ಆಲ್ರೌಂಡರ್ ಮೇಲೆ ಒಂದು ಕಣ್ಣಿಡುವುದು ಉತ್ತಮ.

Latest Videos

click me!