'ಏಕ್ ಬಿಹಾರಿ....' ವೈಭವ್ ಸೂರ್ಯವಂಶಿಗೆ ವಿರಾಟ್ ಕೊಹ್ಲಿ ಹೇಳಿದ್ದೇನು? ಇಲ್ಲಿದೆ ಇನ್‌ಸೈಡ್ ಡೀಟೈಲ್ಸ್

Published : Jun 03, 2026, 06:10 PM IST

ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇನ್ನು ಈ ವೇಳೆ ವಿರಾಟ್ ಕೊಹ್ಲಿ, 15 ವರ್ಷದ ವೈಭವ್ ಸೂರ್ಯವಂಶಿ ಭೇಟಿಯಾಗಿದ್ದರು. ಆಗ ಏನು ಮಾತುಕತೆ ನಡೆಯಿತು ಎನ್ನುವ ವಿಚಾರ ಬಹಿರಂಗವಾಗಿದೆ. 

PREV
16
ಐಪಿಎಲ್‌ನಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ

2026ರ ಐಪಿಎಲ್‌ ಟೂರ್ನಿಯಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇದರ ಜತೆಗೆ ಮೋಸ್ಟ್ ವ್ಯಾಲ್ಯೂಯೇಬಲ್ ಪ್ಲೇಯರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

26
ಐಪಿಎಲ್ ಫೈನಲ್ ಬೆನ್ನಲ್ಲೇ ಕೊಹ್ಲಿ ಭೇಟಿಯಾದ ವೈಭವ್

ಕೇವಲ 15 ವರ್ಷ ವಯಸ್ಸಿನ ಬಿಹಾರ ಮೂಲದ ವೈಭವ್ ಸೂರ್ಯವಂಶಿ, ಟೂರ್ನಿಯುದ್ದಕ್ಕೂ ಮೈಚಳಿ ಬಿಟ್ಟು ಬ್ಯಾಟ್ ಬೀಸುವ ಮೂಲಕ, ಎದುರಾಳಿ ವಿಶ್ವದರ್ಜೆಯ ಬೌಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸುವಂತೆ ಮಾಡಿದರು. ಇನ್ನು ಐಪಿಎಲ್ ಫೈನಲ್‌ ಮುಕ್ತಾಯವಾದ ಬಳಿಕ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕ್ರಿಕೆಟ್‌ ದಂತಕಥೆ ವಿರಾಟ್ ಕೊಹ್ಲಿಯನ್ನು ವೈಭವ್ ಸೂರ್ಯವಂಶಿ ಭೇಟಿ ಮಾಡಿದರು.

36
ಕೊಹ್ಲಿ-ವೈಭವ್ ಮಾತುಕತೆ ರಹಸ್ಯ ಬಹಿರಂಗ

ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ, ವೈಭವ್ ಹೆಗಲ ಮೇಲೆ ಕೈಹಾಕಿಕೊಂಡು ಆತ್ಮೀಯವಾಗಿ ಮಾತುಕತೆ ನಡೆಸಿದ್ದರು. ಅಷ್ಟಕ್ಕೂ ಆ ಸಂದರ್ಭದಲ್ಲಿ ಕೊಹ್ಲಿ, ವೈಭವ್ ಅವರ ಬಳಿ ಏನಂದ್ರು ಎನ್ನುವ ಬಗ್ಗೆ ಕುತೂಹಲ ಜೋರಾಗಿತ್ತು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ.

46
ಏಕ್ ಬಿಹಾರಿ ಸಬ್‌ ಪರ್ ಭಾರಿ

ವೈಭವ್ ಅವರನ್ನು ಉದ್ದೇಶಿಸಿ ಕೊಹ್ಲಿ, ತುಂಬಾ ಚೆನ್ನಾಗಿ ಆಡಿದೆ ಯಂಗ್‌ಮ್ಯಾನ್. ಇಲ್ಲಿಂದ ನೀನು ಮುಂದೆ ಹೆಜ್ಜೆ ಹಾಕಬೇಕು. ಯಾರು ಏನು ಹೇಳುತ್ತಾರೆ ಎನ್ನುವುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡ. ಏಕ್ ಬಿಹಾರಿ ಸಬ್‌ ಪರ್ ಭಾರಿ(ಒಬ್ಬ ಬಿಹಾರಿ ಎಲ್ಲರ ಮೇಲೆ ಸವಾರಿ) ಎಂದು ಹೇಳಿ ಕೊಹ್ಲಿ ಯುವ ಆಟಗಾರನನ್ನು ಹುರಿದುಂಬಿಸಿದ್ದಾರೆ.

56
ಭಾರತ 'ಎ' ತಂಡ ಪ್ರತಿನಿಧಿಸಲಿರುವ ವೈಭವ್

19ನೇ ಸೀಸನ್‌ ಐಪಿಎಲ್‌ನಲ್ಲಿ ಗರಿಷ್ಠ ರನ್ ಸರದಾರರಾಗಿ ಹೊರಹೊಮ್ಮಿರುವ ವೈಭವ್ ಸೂರ್ಯವಂಶಿ, ಇದೀಗ ಜೂನ್ 09ರಿಂದ ಭಾರತ 'ಎ' ತಂಡದ ಪರವಾಗಿ ಶ್ರೀಲಂಕಾದಲ್ಲಿ ನಡೆಯಲಿರುವ ಟ್ರೈ ಸೀರಿಸ್‌ನಲ್ಲಿ ಮೈದಾನಕ್ಕಿಳಿಯಲಿದ್ದು, ಎಲ್ಲರ ಕಣ್ಣು ಬಿಹಾರದ ಈ ಯುವ ಆಟಗಾರನ ಮೇಲಿದೆ.

66
ಟೀಂ ಇಂಡಿಯಾ ಪರ ಕಣಕ್ಕಿಳಿಯಲು ರೆಡಿಯಾದ ವಿರಾಟ್ ಕೊಹ್ಲಿ

ಇನ್ನೊಂದೆಡೆ ಆರ್‌ಸಿಬಿ ತಂಡವನ್ನು ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸಿರುವ ವಿರಾಟ್ ಕೊಹ್ಲಿ, ಜೂನ್ 13ರಿಂದ ಆರಂಭವಾಗಲಿರುವ ಆಫ್ಘಾನಿಸ್ತಾನ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಪರ ಮೈದಾನಕ್ಕಿಳಿಯಲಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories