ವೈಭವ್ ಸೂರ್ಯವಂಶಿಗೆ ಜಾಕ್‌ಪಾಟ್, ನಿಗದಿತ ಮೊತ್ತಕ್ಕಿಂತ ಹೆಚ್ಚು ಸ್ಯಾಲರಿ, ಗಳಿಸಿದ ಒಟ್ಟು ಹಣವೆಷ್ಟು?

Published : Jun 03, 2026, 04:40 PM IST

ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿಯನ್ನು ರಾಜಸ್ಥಾನ 1.1 ಕೋಟಿಗೆ ರಿಟೈನ್ ಮಾಡಿಕೊಂಡಿತ್ತು. ಆದರೆ ಟೂರ್ನಿ ಅಂತ್ಯದಲ್ಲಿ ವೈಭವ್ ನಿಗದಿತ ಸ್ಯಾಲರಿಗಿಂತ ಹೆಚ್ಚು ಸಂಭಾವನೆ ಪಡೆದಿದ್ದಾರೆ. ಜೊತೆಗೆ ಅವಾರ್ಡ್ ಸೇರಿ ಇತರ ಮೂಲಗಳಿಂದ ಪಡೆದ ಹಣವೆಷ್ಟು?

PREV
16
ವೈಭವ್ ಸೂರ್ಯವಂಶಿಗೆ ದುಪ್ಪಟ್ಟು ಸ್ಯಾಲರಿ

ಐಪಿಎಲ್ 2026 ಟೂರ್ನಿ ಅದ್ಧೂರಿಯಾಗಿ ಅಂತ್ಯಗೊಂಡಿದೆ. ಆರ್‌ಸಿಬಿ ಗೆಲುವಿನ ಕೇಕೆ ಹಾಕಿದೆ. ಇತ್ತ ರಾಜಸ್ಥಾನ ಪ್ಲೇ ಆಫ್ ಹಂತದಿಂದ ನಿರ್ಗಮಿಸಿತ್ತು. ಆದರೆ ಸ್ಟಾರ್ ಪ್ಲೇಯರ್, 15ರ ಬಾಲಕ ವೈಭವ್ ಸೂರ್ಯವಂಶಿ ನಿಗದಿತ ಮೊತ್ತಕ್ಕಿಂತ ಹೆಚ್ಚು ಸಂಭಾವನೆ ಪಡೆದಿದ್ದಾರೆ. ವೈಭವ್ ಸೂರ್ಯವಂಶಿ ಒಟ್ಟು ಮೊತ್ತದ ವಿವರ ಇಲ್ಲಿದೆ.

26
1.2 ಕೋಟಿ ರೂಪಾಯಿ ಸ್ಯಾಲರಿ

ರಾಜಸ್ಥಾನ ರಾಯಲ್ಸ್ ತಂಡ 1.1 ಕೋಟಿ ರೂಪಾಯಿ ರಿಟೈನ್‌ ಮಾಡಿಕೊಂಡಿತು. ಇದರ ಪ್ರಕಾರ ಪ್ರತಿ ಪಂದ್ಯಕ್ಕೆ 7.5 ಲಕ್ಷ ರೂಪಾಯಿ. ಈ ಬಾರಿ 14 ಲೀಗ್ ಪಂದ್ಯದ ಜೊತೆಗೆ ಪ್ಲೇ ಆಫ್‌ನಲ್ಲಿ 2 ಪಂದ್ಯವನ್ನು ಆಡಿದ್ದಾರೆ. ಹೀಗಾಗಿ ರಿಟೈನ್ ಮಾಡಿದ್ದು 1.1 ಕೋಟಿ ರೂಪಾಯಿ ಆದರೂ ಇದೀಗ ವೈಭವ್ ಸೂರ್ಯವಂಶಿ 1.2 ಕೋಟಿ ರೂಪಾಯಿ ಒಟ್ಟು ಸ್ಯಾಲರಿ ಪಡೆಯಲಿದ್ದಾರೆ.

36
ಪ್ರಶಸ್ತಿಗಳಿಂದ 55 ಲಕ್ಷ ರೂಪಾಯಿ

ಈ ಬಾರಿ ಅದ್ಭುತ ಪ್ರದರ್ಶನ ನೀಡಿದ ವೈಭವ್ ಸೂರ್ಯವಂಶಿ 776 ರನ್ ಸಿಡಿಸಿದ್ದರು. ಈ ಮೂಲಕ ಆರೇಂಜ್ ಕ್ಯಾಪ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಭರ್ಜರಿ 237.3ರ ಸ್ಟ್ರೈಕ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಪ್ರತಿ ಪಂದ್ಯದಲ್ಲಿ ಅಬ್ಬರಿಸಿದ ವೈಭವ್ ಸೂರ್ಯವಂಶಿ 55 ಲಕ್ಷ ರೂಪಾಯಿ ಪ್ರಶಸ್ತಿ ಮೊತ್ತ ಪಡೆದಿದ್ದಾರೆ.

46
ವೈಭವ್ ಸೂರ್ಯವಂಶಿ ಪ್ರಶಸ್ತಿ ಮೊತ್ತದ ವಿವರ
  • ಮೋಸ್ಟ್ ವ್ಯಾಲ್ಯುಯೇಬಲ್ ಪ್ಲೇಯರ್ : 15 ಲಕ್ಷ ರೂಪಾಯಿ
  • ಆರೇಂಜ್ ಕ್ಯಾಪ್ : 10 ಲಕ್ಷ ರೂಪಾಯಿ
  • ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್ : 10 ಲಕ್ಷ ರೂಪಾಯಿ
  • ಸೂಪರ್ ಸಿಕ್ಸರ್ ಆಫ್ ಸೀಸನ್ : 10 ಲಕ್ಷ ರೂಪಾಯಿ
  • ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್ : 10 ಲಕ್ಷ ರೂಪಾಯಿ
56
ಎಂಡೋರ್ಸ್‌ಮೆಂಟ್ ಮೊತ್ತ ಡಬಲ್

ಐಪಿಎಲ್ 2026 ಟೂರ್ನಿಗೂ ಮೊದಲು ವೈಭವ್ ಸೂರ್ಯವಂಶಿ ಜಾಹೀರಾತು, ಪ್ರಾಯೋಜಕತ್ವ, ಎಂಡೋರ್ಸ್‌ಮೆಂಟ್‌ಗಳಿಗೆ 1 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಿದ್ದರು. ಐಪಿಎಲ್ ಟೂರ್ನಿ ಬಳಿಕ ಇದೀಗ 1.5 ರಿಂದ 2 ಕೋಟಿ ರೂಪಾಯಿ ಏರಿಕೆಗೆ ಮಾಡಲಾಗಿದೆ.

66
ಹಲವು ಎಂಡೋರ್ಸ್‌ಮೆಂಟ್‌ನಲ್ಲಿ ವೈಭವ್

ಚಾರ್ಜ್ ಹೆಚ್ಚಳಕ್ಕೂ ಮೊದಲೇ ವೈಭವ್ ಸೂರ್ಯವಂಶಿ ಹಲವು ಎಂಡೋರ್ಸ್‌ಮೆಂಟ್‌ಗಳಲ್ಲಿ ವೈಭವ್ ಜೊತೆಯಾಗಿದ್ದಾರೆ. ಕಾಂಪ್ಲೇನ್, ರೆಡ್ ಬುಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ತಲಾ ಒಂದೊಂದು ಕೋಟಿ ರೂಪಾಯಿ ಚಾರ್ಜ್ ಮಾಡಿದ್ದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories