Mukul Chaudhary Family Debt Repaid 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತೊಮ್ಮೆ ಯುವ ಪ್ರತಿಭೆಗಳ ಅನಾವರಣಕ್ಕೆ ಸಾಕ್ಷಿಯಾಗಿದೆ. ಈ ಪೈಕಿ ಲಖನೌ ಸೂಪರ್ ಜೈಂಟ್ಸ್ ತಂಡದ ಆಟಗಾರನೊಬ್ಬ, ತಮ್ಮ ಕುಟುಂಬ ತನಗಾಗಿ ಮಾಡಿದ ತ್ಯಾಗಕ್ಕೆ ಪ್ರತಿಯಾಗಿ ಕುಟುಂಬದ ಸಾಲ ಚುಕ್ತಾ ಮಾಡಿದ್ದಾರೆ.
ಅದೆಷ್ಟೋ ಪ್ರತಿಭಾನ್ವಿತ ಕ್ರಿಕೆಟಿಗರ ಪಾಲಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಅದೃಷ್ಟದ ಬಾಗಿಲು ತೆರೆಯುವಂತೆ ಮಾಡಿದೆ. ಇದೀಗ ಲಖನೌ ಸೂಪರ್ ಜೈಂಟ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಮುಕುಲ್ ಚೌಧರಿ ಕೂಡಾ ಸಂಕಷ್ಟದಲ್ಲಿದ್ದ ತಮ್ಮ ಕುಟುಂಬದ ಬೆನ್ನಿಗೆ ನಿಂತಿದ್ದಾರೆ. ಐಪಿಎಲ್ ಮಿನಿ ಹರಾಜಿನಲ್ಲಿ ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಮುಕುಲ್ ಚೌಧರಿಯನ್ನು 2.60 ಕೋಟಿ ರುಪಾಯಿಗೆ ಖರೀದಿಸಿತ್ತು.
26
ಮುಕುಲ್ ಚೌಧರಿ ಕ್ರಿಕೆಟಿಗರನ್ನಾಗಿ ಮಾಡಲು ತ್ಯಾಗ ಮಾಡಿದ ಕುಟುಂಬ
ಮುಕುಲ್ ಚೌಧರಿಯನ್ನು ಶತಾಯಗತಾಯ ಕ್ರಿಕೆಟಿಗರನ್ನಾಗಿ ಮಾಡಲೇಬೇಕೆಂದು ಅವರ ಕುಟುಂಬದವರು ಇದ್ದ ಸ್ವಂತ ಮನೆಯನ್ನು ಮಾರಾಟ ಮಾಡಿದರು. ಇನ್ನು ಮುಕುಲ್ ಕ್ರಿಕೆಟ್ ಬೆಳವಣಿಗೆಗೆ ಅವರ ತಾತಾ ಕೂಡಾ ದೊಡ್ಡ ಮಟ್ಟದ ಹಣಕಾಸಿನ ಸಹಾಯ ಮಾಡಿದ್ದರು. ಇದಷ್ಟು ಸಾಕಾಗದಿದ್ದಾಗ ಅವರ ಚಿಕ್ಕಪ್ಪನಿಂದಲೂ ಸಾಲವನ್ನು ಪಡೆದಿದ್ದರು. ಇದಷ್ಟೇ ಅಲ್ಲದೇ ಕ್ರಿಕೆಟ್ ತರಬೇತಿ ಇನ್ನಿತರ ಖರ್ಚುಗಳಿಗಾಗಿ ಮುಕುಲ್ ಚೌಧರಿ ಬ್ಯಾಂಕ್‌ನಲ್ಲಿಯೂ ಸಾಲ ಮಾಡಿದ್ದರು.
36
ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮುಕುಲ್ ಚೌಧರಿ ಕುಟುಂಬ
ಹೀಗಾಗಿ ಮುಕುಲ್ ಚೌಧರಿ ಕುಟುಂಬದವರು ಒಂದು ರೀತಿ ಬೀದಿಗೆ ಬಂದಂತೆ ಆಗಿದ್ದರು. ಪ್ರತಿಬಾರಿಯು ಒಂದು ಬಾಡಿಗೆ ಮನೆಯಿಂದ ಮತ್ತೊಂದು ಬಾಡಿಗೆ ಮನೆಗೆ ಶಿಫ್ಟ್ ಆಗಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದರು. ಇಷ್ಟೆಲ್ಲ ಸಂಕಷ್ಟದ ಹೊರತಾಗಿಯೂ ಮುಕುಲ್ ಚೌಧರಿ, ಕ್ರಿಕೆಟಿಗನಾಗುವ ಸಂಕಲ್ಪದಿಂದ ಕದಲಲಿಲ್ಲ.
ಕಡೆಗೂ ಕಳೆದ ವರ್ಷ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ 30 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ಮುಕುಲ್ ಚೌಧರಿಯವರನ್ನು ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಬರೋಬ್ಬರಿ 2.60 ಕೋಟಿ ರುಪಾಯಿ ಖರೀದಿಸಿತು. ಇದು ಮುಕುಲ್ ಚೌಧರಿಯ ಬದುಕು ಬದಲಿಸುವಂತೆ ಮಾಡಿತು.
56
ಕೆಕೆಆರ್ ಎದುರು ಅಬ್ಬರದ ಪ್ರದರ್ಶನ ತೋರಿ ಲಖನೌ ತಂಡ ಗೆಲ್ಲಿಸಿದ ಮುಕುಲ್ ಚೌಧರಿ
ಮುಕುಲ್ ಚೌಧರಿ ಕೆಕೆಆರ್ ಎದುರಿನ ಪಾದಾರ್ಪಣೆ ಪಂದ್ಯದಲ್ಲಿ ಲಖನೌ ಕೊನೆಯ 3 ಓವರ್‌ಗಳಲ್ಲಿ ಗೆಲ್ಲಲು ಬರೋಬ್ಬರಿ 43 ರನ್‌ಗಳ ಅಗತ್ಯವಿತ್ತು. ಈ ವೇಳೆ ಬ್ಯಾಟಿಂಗ್ ಮಾಡಲಿಳಿದ ಮುಕುಲ್ ಚೌಧರಿ ಕೊನೆಯ ಓವರ್‌ನಲ್ಲಿ ಸಿಕ್ಸರ್ ಹಾಗೂ ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು. ಜತೆಗೆ ಫ್ರಾಂಚೈಸಿ ತಮ್ಮ ಮೇಲೆ ಇಟ್ಟ ನಂಬಿಕೆ ಉಳಿಸಿಕೊಳ್ಳುವಲ್ಲೂ ಯಶಸ್ವಿಯಾಗಿದ್ದರು. ಆ ಪಂದ್ಯದಲ್ಲಿ ಮುಕುಲ್ 27 ಎಸೆತಗಳಲ್ಲಿ 57 ರನ್ ಚಚ್ಚಿದ್ದರು.
66
ಕುಟುಂಬದ ಸಾಲ ತೀರಿಸಿದ ಮುಕುಲ್ ಚೌಧರಿ
ಇದೀಗ ಐಪಿಎಲ್ ಮುಕ್ತಾಯದ ಬಳಿಕ ತಮ್ಮ ಕುಟುಂಬದ ಆರ್ಥಿಕ ಸಂಕಷ್ಟದ ಬಗ್ಗೆ ಮಾತನಾಡಿರುವ ಮುಕುಲ್, 'ಈಗ ನಮ್ಮ ಎಲ್ಲಾ ಸಾಲವೂ ತೀರಿಸಿದ್ದೇನೆ. ನಾನು ನನ್ನ ಕುಟುಂಬಕ್ಕೆ ನೆರವಾಗಿದ್ದರ ಬಗ್ಗೆ ಖುಷಿಯಿದೆ. ಐಪಿಎಲ್ ಹಾಗೂ ಲಖನೌ ಸೂಪರ್ ಜೈಂಟ್ಸ್‌ಗೆ ಧನ್ಯವಾದಗಳು' ಎಂದು ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.