ವರ್ಲ್ಡ್‌ ಕ್ಲಾಸ್‌ ಕ್ರಿಕೆಟರ್‌ ಮಾತ್ರವಲ್ಲ ಬೆಸ್ಟ್‌ ಪತಿ ಕೂಡ ಹೌದು ವಿರಾಟ್‌ ಕೊಹ್ಲಿ!

Published : Nov 05, 2022, 02:07 PM IST

ಭಾರತ ತಂಡದ ಅತ್ಯಂತ ಸ್ಫೋಟಕ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli) ನವೆಂಬರ್ 5 ರಂದು ತಮ್ಮ 34 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ವಿರಾಟ್ ಅವರನ್ನು ಪ್ರೀತಿಯಿಂದ ಚೀಕು ಎಂದು ಕರೆಯುತ್ತಾರೆ. ವಿರಾಟ್ ಮೈದಾನದಲ್ಲಿ  ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಆದರೆ ಮೈದಾನದ ಹೊರಗೆ ತಮ್ಮ ವೈಯಕ್ತಿಕ  ಜೀವನದಲ್ಲಿ ಅವರು ಅದ್ಭುತ ವ್ಯಕ್ತಿಯಾಗಿದ್ದಾರೆ. ವಿರಾಟ್ ಕೊಹ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ಅವರನ್ನು ವಿವಾಹವಾಗಿದ್ದಾರೆ ಮತ್ತು ಇವರು ಬಾಲಿವುಡ್‌ನಲ್ಲಿ ಮಾತ್ರವಲ್ಲದೆ ಕ್ರಿಕೆಟ್ ಜಗತ್ತಿನಲ್ಲಿಯೂ ಅತ್ಯಂತ ಸುಂದರ ಜೋಡಿ ಎಂದು ಪರಿಗಣಿಸಲ್ಪಟ್ಟಿದ್ದಾರೆ.  ಪತಿ-ಪತ್ನಿ ಇಬ್ಬರ ನಡುವೆ ಅದ್ಭುತ ಬಾಂಧವ್ಯವಿದೆ. ಈ ಸುಂದರ ಜೋಡಿಯ ಪೋಟೋಗಳು ಇಲ್ಲಿವೆ

PREV
116
ವರ್ಲ್ಡ್‌ ಕ್ಲಾಸ್‌ ಕ್ರಿಕೆಟರ್‌ ಮಾತ್ರವಲ್ಲ ಬೆಸ್ಟ್‌ ಪತಿ ಕೂಡ ಹೌದು ವಿರಾಟ್‌ ಕೊಹ್ಲಿ!
virat kohli

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿಯು ಬಾಲಿವುಡ್‌ನಲ್ಲಿ ಮಾತ್ರವಲ್ಲದೆ ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ಸುಂದರ ಜೋಡಿ ಎಂದು ಪರಿಗಣಿಸಲಾಗಿದೆ.

216

ಇಬ್ಬರೂ ಸಾಮಾಜಿಕ ಮಾಧ್ಯಮದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕದ ರಾಜ ಮತ್ತು ಅನುಷ್ಕಾ ಶರ್ಮ ಬಾಲಿವುಡ್  ಸೂಪರ್ ಸ್ಟಾರ್. 

316

34 ನೇ ವರ್ಷಕ್ಕೆ ಕಾಲಿಡುತ್ತಿರುವ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಪರಾಕ್ರಮ ಮತ್ತು ಆಟದ ಮೇಲಿನ ಉತ್ಸಾಹದಿಂದ ವಿಶ್ವದಾದ್ಯಂತದ ಕ್ರಿಕೆಟ್ ಭಾರೀ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿದ್ದಾರೆ.

416

ವಿರಾಟ್ ತಮ್ಮ ಪತ್ನಿ ಅನುಷ್ಕಾ ಶರ್ಮಾ ಜೊತೆ ತುಂಬಾ ಸಂತೋಷವಾಗಿ ಕಾಣುತ್ತಾರೆ ಮತ್ತು ಅಭಿಮಾನಿಗಳು ಕೂಡ ಈ ಜೋಡಿಯನ್ನು ತುಂಬಾ ಇಷ್ಟಪಡುತ್ತಾರೆ.

516

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನಿಸ್ಸಂದೇಹವಾಗಿ ಕ್ರಿಕೆಟ್ ಮತ್ತು ಬಾಲಿವುಡ್‌ನ ಅತ್ಯಂತ ಪ್ರೀತಿಪಾತ್ರ ದಂಪತಿಗಳು.

616

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಹೇಳಲು ವಿಭಿನ್ನ ವೃತ್ತಿಗಳಲ್ಲಿದ್ದಾರೆ.  ಆದರೆ  ಅನುಷ್ಕಾ ಅವರ  ಕ್ರಿಕೆಟ್ ಮೇಲಿನ ಅವರ ಪ್ರೀತಿ ಅದ್ಭುತವಾಗಿದೆ.

716

ವಿರಾಟ್ ಕೊಹ್ಲಿ  ಮತ್ತು ಅನುಷ್ಕಾ ಶರ್ಮ ಅವರನ್ನು ಅವರ ಅಭಿಮಾನಿಗಳು ವಿರುಷ್ಕಾ ಎಂದು ಪ್ರೀತಿಯಿಂದ ಕರೆಯುತ್ತಾರೆ. ಈ ಪತಿ-ಪತ್ನಿರ ನಡುವೆ ಅದ್ಭುತ ಬಾಂಧವ್ಯವಿದೆ.

816

ವಿರಾಟ್ ಮತ್ತು ಅನುಷ್ಕಾ ಅವರ ಈ ಬಾಂಧವ್ಯವನ್ನು ಸಾಮಾಜಿಕ ಮಾಧ್ಯಮದಲ್ಲಿಯೂ ಕಾಣಬಹುದು, ಅಲ್ಲಿ ಅವರು ಪರಸ್ಪರ ಬೆಂಬಲಿಸುತ್ತಾರೆ.

916

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ 11 ಡಿಸೆಂಬರ್ 2017 ರಂದು ಇಟಲಿಯಲ್ಲಿ ವಿವಾಹವಾದರು. ಅಲ್ಲಿ ದಂಪತಿಗಳು ಕನಸಿನ ಮದುವೆ ಮತ್ತು ಅನೇಕ ಪ್ರೀತಿ ತುಂಬಿದ ಕ್ಷಣಗಳನ್ನು ಆನಂದಿಸಿದರು.  ಲೈಟ್‌ ಗುಲಾಬಿ ಬಣ್ಣದ ಲೆಹೆಂಗಾದಲ್ಲಿ ಅನುಷ್ಕಾ ಶರ್ಮಾ ಮತ್ತು  ಶೆರ್ವಾನಿ ಧರಿಸಿದ್ದ  ವಿರಾಟ್ ಕೊಹ್ಲಿಯ ಚಿತ್ರಣ ಇಂದಿಗೂ ಎಲ್ಲರೂ ನೆನಪಿಸಿಕೊಳ್ಳುತ್ತಾರೆ.


 

1016

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರೂ ತಮ್ಮ ತಮ್ಮ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಆಗಾಗ್ಗೆ ಫೋಟೋಗಳನ್ನು ಹಂಚಿಕೊಳ್ಳುವುದನ್ನು ಕಾಣಬಹುದು.

1116

ಇವರಿಬ್ಬರೂ ಆಗಾಗ ಶೇರ್‌ ಮಾಡುವ ಫೋಟೋಗಳು ಸಖತ್‌ ಸದ್ದು ಮಾಡುತ್ತವೆ. ಪರಸ್ಪರ ತಮ್ಮ  ಪೋಸ್ಟ್‌ಗಳಲ್ಲಿ ಕಾಮೆಂಟ್ ಮಾಡುವ ಯಾವ ಅವಕಾಶಗಳನ್ನು ಮಿಸ್‌ ಮಾಡುವುದಿಲ್ಲ. 


 

1216

ಇಬ್ಬರೂ ಪರಸ್ಪರ ಹೃದಯದ ಎಮೋಜಿಗಳನ್ನು ಕಳುಹಿಸಲು ಮರೆಯುವುದಿಲ್ಲ. ವಿರಾಟ್ ಕೊಹ್ಲಿ ಅದ್ಭುತ ಇನ್ನಿಂಗ್ಸ್ ಆಡಿದಾಗ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸುತ್ತಾರೆ.

1316

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್ ಮಾಡಿದಾಗ ಅಥವಾ ಪರಸ್ಪರ ಬೆಂಬಲಿಸಿದಾಗ, ಅವರ ಅಭಿಮಾನಿಗಳು ತುಂಬಾ ಆನಂದಿಸುತ್ತಾರೆ. ಈ ಎಲ್ಲಾ ಪೋಸ್ಟ್‌ಗಳನ್ನು ಲಕ್ಷಾಂತರ ಜನರು ಲೈಕ್ ಮಾಡಿದ್ದಾರೆ.

1416

 ಅವರು ನಿರಂತರವಾಗಿ ತಮ್ಮ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾರೆ ಮತ್ತು   ಜಗತ್ತಿಗೆ ತಮ್ಮ ಪ್ರೀತಿಯನ್ನು ಹೇಗೆ  ಎಂದು ತೋರಿಸುತ್ತಾರೆ.


 

1516

ಮಳೆಯಲ್ಲಿನ ಪ್ರಣಯ ಕ್ಷಣಗಳಾಗಲಿ ಅಥವಾ ಸೂರ್ಯಾಸ್ತದ ವೀಕ್ಷಣೆಯಾಗಲಿ ಅಥವಾ ಲಂಚ್‌ ಡೇಟ್‌, ಪಿಕ್‌ನಿಕ್‌  ಈ ಜೋಡಿ ಜೊತೆಯಾಗಿ  ಎಂಜಾಯ್‌ ಮಾಡುವುದು ಅವರ ಫೋಟೋಗಳಲ್ಲಿ ಕಾಣಬಹುದು

1616

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು  ಜೀವನದಲ್ಲಿ ಪರಸ್ಪರರ ದೊಡ್ಡ ಬೆಂಬಲ ವ್ಯವಸ್ಥೆಯಾಗಿದ್ದಾರೆ. ಅನುಷ್ಕಾ ಶರ್ಮಾ ಪ್ರತಿ ಸಂಧರ್ಭದ್ಲಲೂ ಪತಿಯನ್ನು ಬೆಂಬಲಿಸುತ್ತಾರೆ.

Read more Photos on
click me!

Recommended Stories