nashpreet
ನಶ್ಪ್ರೀತ್ ಸಿಂಗ್ ಮೆಲ್ಬೋರ್ನ್ ವಿಶ್ವವಿದ್ಯಾಲಯದಲ್ಲಿ ಬಯೋಮೆಡಿಸಿನ್ ಅಧ್ಯಯನ ಮಾಡಿದರು. ಅವರು 2020 ರಲ್ಲಿ IPL ಆಂಕರ್ ಆದರು ಮತ್ತು ಋತುವಿನ ಉದ್ದಕ್ಕೂ ನಶ್ಪ್ರೀತ್ ತನ್ನ ಅದ್ಭುತವಾದ ಫ್ಯಾಷನ್ ಮತ್ತು ಆಂಕರ್ ಮಾಡುವ ಕೌಶಲ್ಯದಿಂದ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದರು
ನಶ್‌ಪ್ರೀತ್ ಸಿಂಗ್ ಆಸ್ಟ್ರೇಲಿಯಾದ ಭಾರತೀಯ ಮೂಲದ ಮಾಡೆಲ್ ಮತ್ತು ಆಂಕರ್. ಭಾರತ ಮತ್ತು ನೆದರ್ಲೆಂಡ್ಸ್ ನಡುವಿನ T20 ವಿಶ್ವಕಪ್ 2022 ಸೂಪರ್ 12 ಪಂದ್ಯದ ಸಮಯದಲ್ಲಿ ನಶ್ಪ್ರೀತ್ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಂಕರ್ ಮಾಡಿದರು.
ನಶ್‌ಪ್ರೀತ್ ಸಿಂಗ್ ಅವರ ಮಾಡೆಲಿಂಗ್ ವೃತ್ತಿಜೀವನವು ತಾನ್ಯಾ ಪೊವೆಲ್ ಮಾಡೆಲ್ ಏಜೆನ್ಸಿಯೊಂದಿಗೆ ಪ್ರಾರಂಭವಾಯಿತು. ಅಲ್ಲಿ ಅವರು ಕ್ಯಾಟ್‌ವಾಕ್‌ಗಳು ಮತ್ತು ಎಡಿಟಿಂಗ್ ಶೂಟ್‌ಗಳಲ್ಲಿ ತರಬೇತಿ ಪಡೆದರು. ಅಲ್ಲಿಂದ ಪ್ರಾರಂಭವಾದ ನಶ್‌ಪ್ರೀತ್ ಅವರ ಪ್ರಯಾಣವು ಐಪಿಎಲ್ 2020 ರ ನಂತರ ಬೆಳಕಿಗೆ ಬಂದಿತು.
ನಶ್‌ಪ್ರೀತ್ ಸಿಂಗ್ 2013 ರಲ್ಲಿ ಕಾಸ್ಮೋಪಾಲಿಟನ್ ಮಾಡೆಲ್ ಸರ್ಚ್ ಸ್ಪರ್ಧೆಯಲ್ಲಿ ಭಾಗವಹಿಸಿದರು ಮತ್ತು ಮೆಲ್ಬೋರ್ನ್‌ನಲ್ಲಿ ನಡೆದ ರಾಷ್ಟ್ರೀಯ ಫೈನಲ್‌ನ ಟಾಪ್ 5 ಮಾಡೆಲ್‌ಗಳಲ್ಲಿ ಆಯ್ಕೆಯಾದರು.
ನಶ್‌ಪ್ರೀತ್ ಸಿಂಗ್ ಟೋಬ್ ಟ್ಯಾಲೆಂಟ್ ಸೇರಿದಂತೆ ಪ್ರೆಟಿ ಸೀಕ್ರೆಟ್ಸ್ ಮತ್ತು ರನ್‌ವೇ ಲೈಫ್‌ಸ್ಟೈಲ್‌ನಂತಹ ಏಜೆನ್ಸಿಗಳಿಗೆ ಮಾಡೆಲ್ ಆಗಿದ್ದಾರೆ. ‘ಸ್ಟ್ರಿಂಗ್ಸ್’ ಎಂಬ ಕಿರುಚಿತ್ರದಲ್ಲೂ ಕಾಣಿಸಿಕೊಂಡಿದ್ದರು.
ಆಸ್ಟ್ರೇಲಿಯನ್ ಮಾಡೆಲ್ ಮತ್ತು ಆಂಕರ್ ನಶ್ಪ್ರೀತ್ ಸಿಂಗ್ ಸಂಗೀತ ಕೇಳುವುದು, ಗಿಟಾರ್ ನುಡಿಸುವುದು, ಅಡುಗೆ ಮಾಡುವುದು, ವರ್ಕೌಟ್ ಮಾಡುವುದು ಮತ್ತು ನೃತ್ಯ ಮಾಡುವುದನ್ನು ಆನಂದಿಸುತ್ತಾರೆ. ಈ ಹವ್ಯಾಸವೂ ಅವರ ವೃತ್ತಿಯೊಂದಿಗೆ ಹೊಂದಿಕೆಯಾಗುತ್ತದೆ.
ಭಾರತ ಮತ್ತು ನೆದರ್ಲೆಂಡ್ಸ್ ಪಂದ್ಯದ ವೇಳೆ ನಶ್ಪ್ರೀತ್ ಸಿಂಗ್ ತಮ್ಮ ಗ್ಲಾಮರ್ ಮತ್ತು ಟ್ಯಾಲೆಂಟ್ ಮೂಲಕ ಎಲ್ಲರ ಗಮನ ಸೆಳೆದರು. ಈ ಪಂದ್ಯವನ್ನು ಭಾರತ 56 ರನ್‌ಗಳಿಂದ ಗೆದ್ದುಕೊಂಡಿತು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಸ್ಫೋಟಕ ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದರು.
ನಶ್‌ಪ್ರೀತ್ ಸಿಂಗ್ ಅವರು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಅನೇಕ ಅನುಯಾಯಿಗಳನ್ನು ಹೊಂದಿದ್ದಾರೆ.