ಸಂಕಷ್ಟದಲ್ಲಿದ್ದ ಪಿವಿ ಸಿಂಧುಗೆ ಕೊಹ್ಲಿ ನೀಡಿದ ಒಂದು ಸಲಹೆ, 2 ವರ್ಷ ಬಳಿಕ ಕಮ್‌ಬ್ಯಾಕ್ ಮಾಡಿ ಪ್ರಶಸ್ತಿ ಗರಿ

Published : Jul 21, 2026, 12:23 PM IST

ಕಳೆದೆರಡು ವರ್ಷಗಳಿಂದ ಪಿವಿ ಸಿಂಧು ಸೋಲು, ಇಂಜುರಿಗಳಿಂದ ಸಂಕಷ್ಟ ಅನುಭವಿಸಿದ್ದಾರೆ. ಮದುವೆಯೊಂದಿಗೆ ಸಿಂಧು ಕರಿಯರ್ ಮುಗೀತು ಎಂದವರೆ ಹೆಚ್ಚು. ಆದರೆ ವಿರಾಟ್ ಕೊಹ್ಲಿ ನೀಡಿದ ಒಂದು ಸಲಹೆಯಿಂದ ಇದೀಗ ಸಿಂಧು ಐತಿಹಾಸಿಕ ಸಾಧನೆ ಮಾಡಿದ್ದಾರೆ

PREV
16
ವಿರಾಟ್ ಕೊಹ್ಲಿ ಸಲಹೆ, ಭರ್ಜರಿ ಕಮ್‌ಬ್ಯಾಕ್ ಮಾಡಿದ ಪಿವಿ ಸಿಂಧು

ಪಿವಿ ಸಿಂಧು ಭಾರತದ ಶ್ರೇಷ್ಠ ಬ್ಯಾಡ್ಮಿಂಟನ್ ತಾರೆ. ಆದರೆ ಪಿವಿ ಸಿಂಧು ಕಳೆದೆರಡು ವರ್ಷ ಗಂಭೀರ ಇಂಜುರಿಯಿಂದ ಬಳಲಿದ್ದರು. ಅದಕ್ಕೂ ಮೊದಲು ಸೋಲು, ಹಿನ್ನಡೆಗಳಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಸರಿಸುಮಾರು ಮೂರು ವರ್ಷಗಳಲ್ಲಿ ಪಿವಿ ಸಿಂಧು ಹಲವು ಹಿನ್ನಡೆ ಅನುಭವಿಸಿದ್ದಾರೆ. ಪರಿಣಾಮ ಪಿವಿ ಸಿಂಧು ಕರಿಯರ್ ಅಂತ್ಯಗೊಂಡಿದೆ ಎಂದು ಚರ್ಚಿಸಿದವರೇ ಹೆಚ್ಚು. ಆದರೆ ಪಿವಿ ಸಿಂಧು ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. ಜಪಾನ್ ಓಪನ್ ಸಿಂಗಲ್ಸ್ ಗೆದ್ದ ಮೊದಲ ಭಾರತೀಯ ಪಟು ದಾಖಲೆ ಬರೆದಿದ್ದಾರೆ. ವಿಶೇಷ ಅಂದರೆ ಮೂರು ತಿಂಗಳ ಹಿಂದೆ ವಿರಾಟ್ ಕೊಹ್ಲಿ ನೀಡಿದ ಒಂದು ಸಲಹೆ ಪಿವಿ ಸಿಂಧೂ ಭರ್ಜರಿ ಕಮ್‌ಬ್ಯಾಕ್‌ಗೆ ನೆರವಾಗಿದೆ.

26
24 ತಿಂಗಳು ಸಂಕಷ್ಟದಲ್ಲಿ ಮುಳುಗಿದ ಪಿವಿ ಸಿಂಧೂ

ಕಾಲಿನ ಗಾಯ, ಲಿಗಮೆಂಟ್ ಸಮಸ್ಯೆಗಳಿಂದ ಕಳೆದ 24 ತಿಂಗಳು ಪಿವಿ ಸಿಂಧು ತೀವ್ರ ಸಮಸ್ಯೆ ಎದುರಿಸಿದ್ದಾರೆ.ಇದರ ನಡುವೆ ಸತತ ಸೋಲು ಪಿವಿ ಸಿಂಧು ಆತ್ಮವಿಶ್ವಾಸವನ್ನೇ ಕುಗ್ಗಿಸಿತ್ತು. ಒಂದೆಡೆ ಇಂಜುರಿ, ಮತ್ತೊಂದೆಡೆ ಸೋಲು ಈ ಎರಡು ಸಂಕಷ್ಟಗಳು ಒಟ್ಟೊಟ್ಟಿಗೆ ಪಿವಿ ಸಿಂಧು ಕಾಡಿತ್ತು. ತಮ್ಮ ಸಂಕಷ್ಟದ ದಿನಗಳಲ್ಲಿ ಪಿವಿ ಸಿಂಧು ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಭೇಟಿಯಾಗಿ ಸಲಹೆ ಕೇಳಿದ್ದಾರೆ. ಕೊಹ್ಲಿ ನೀಡಿದ ಸಲಹೆ ಇದೀಗ ಪಿವಿ ಸಿಂಧೂ ಕರಿಯರ್‌ಗೆ ಹೊಸ ಭಾಷ್ಯ ಬರೆದಿದೆ.

36
ಕೊಹ್ಲಿ ಭೇಟಿಯಾಗಿ ಸಲಹೆ ಕೇಳಿದ್ದೆ

ಜಪಾನ್ ಸಿಂಗಲ್ಸ್ ಗೆದ್ದ ಬಳಿಕ ಮಾತನಾಡಿರುವ ಪಿವಿ ಸಿಂಧು, ನಾನು ತೀವ್ರ ಕಷ್ಟದ ದಿನಗಳನ್ನು ಎದುರಿಸುತ್ತಿದ್ದೆ. ಇದರ ನಡುವೆ ಕೊಹ್ಲಿ ತಮ್ಮ ಕರಿಯರ್‌ನಲ್ಲಿ ಸಾಕಷ್ಟು ಅಡೆ ತಡೆ ಎದುರಿಸಿದ್ದಾರೆ. ಆದರೆ ಎಲ್ಲಾ ಸವಾಲು ಗೆದ್ದ ಕೊಹ್ಲಿ ಅತ್ಯಂತ ಯಶಶ್ವಿ ಕ್ರಿಕೆಟಿಗನಾಗಿದ್ದಾರೆ. ಮೂರು ವರ್ಷ ಶತಕವಿಲ್ಲದೆ ಕೊಹ್ಲಿ ಮತ್ತೆ ಫೀನಿಕ್ಸ್‌ನಂತೆ ಅಬ್ಬರಿಸಿದ್ದಾರೆ. ಕೊಹ್ಲಿ ಬಳಿ ಸಮಯ ಕೇಳಿದಾಗ ಮರುದಿನವೇ ಭೇಟಿಯಾಗಲು ಅವಕಾಶ ನೀಡಿದ್ದರು. ಕೊಹ್ಲಿ ಮಾತು ನನ್ನ ಹಾಗೂ ನನ್ನ ಪತಿ ಮನಸ್ಸಿನಲ್ಲಿ ಆಳವಾಗಿ ಉಳಿದುಕೊಂಡಿತು ಎಂದು ಕೊಹ್ಲಿ ಸಲಹೆ ವಿವರಿಸಿದ್ದಾರೆ.

46
ಕೊಹ್ಲಿ ನೀಡಿದ ಒಂದೇ ಒಂದು ಸಲಹೆ

ಪಿವಿ ಸಿಂಧು ತಮ್ಮ ಸಂಕಷ್ಟ, ಸವಾಲುಗಳನ್ನು ಹೇಳಿಕೊಂಡು ಕಮ್‌ಬ್ಯಾಕ್ ಹೇಗೆ ಎಂದು ಪ್ರಶ್ನಿಸಿದ್ದಾರೆ. ಗೆಲುವು ಹಾಗೂ ಪ್ರಶಸ್ತಿಗಳ ಹಿಂದೆ ಓಡುವುದನ್ನು ನಿಲ್ಲಿಸಿ. ಮೈದಾನಕ್ಕಿಳಿದಾಗ ನಿಮ್ಮ ಆಟವನ್ನು ಅನುಭವಿಸಿ ಹಾಗೂ ಆನಂದಿಸಿ. ನಿಮ್ಮ ಆಟದಲ್ಲಿರುವ ಆನಂದ,ಸಂತೋಷವನ್ನು ಮತ್ತೆ ಅನುಭವಿಸಿ. ಮೈದಾನಕ್ಕಿಳಿದಾಗ ಪಂದ್ಯದ ಬಗ್ಗೆ ಮಾತ್ರ ತಲೆಯಲ್ಲಿದ್ದರೆ ಸಾಕು. ಸಂತೋಷವಾಗಿ ಅನುಭವಿಸಿ ಆಡುವುದು ಅಭ್ಯಾಸ ಮಾಡಿಕೊಳ್ಳಲು ಕೊಹ್ಲಿ ಸಲಹೆ ನೀಡಿದ್ದರು ಎಂದು ಪಿವಿ ಸಿಂಧು ಪತಿ ವೆಂಕಟ ಸಾಯಿ ದತ್ತ ಹೇಳಿದ್ದಾರೆ

56
ಕೊಹ್ಲಿ ಮಾತನ್ನು ಗಂಭೀರವಾಗಿ ಪರಿಗಣಿಸಿದ ಪಿವಿ ಸಿಂಧೂ

ಕೊಹ್ಲಿ ಮಾತಿನಿಂದ ಪ್ರೇರಿತರಾದ ಸಿಂಧು ಹಾಗೂ ಪತಿ ವೆಂಕಟ ದತ್ತ ಸಾಯಿ ತಕ್ಷಣವೇ ಅಮೆರಿಕದ ಅಂಟ್ಲಾಟಾಗೆ ಟಿಕೆಟ್ ಬುಕ್ ಮಾಡಿದ್ದರು. ಒಂದೆಡೆ ತರಬೇತಿ ಮತ್ತೊಂದೆ ಆಕೆಯ ಮುಕ್ತವಾಗಿ ತನ್ನ ಆಟದ ಕುರಿತು ಗಮನ ಕೇಂದ್ರಿಕರಿಸಲು ಈ ಪ್ಲಾನ್ ಮಾಡಿದ್ದರು. ಪರಿಣಾಮ ನಿರಂತರ ಅಭ್ಯಾಸ, ಪುನಶ್ಚೇತನ ಶಿಬರದಲ್ಲಿನ ಅಭ್ಯಾಸಗಳು ಸಿಂಧುಗೆ ನೆರವಾಯಿತು ಎಂದು ಪತಿ ಹೇಳಿದ್ದಾರೆ.

66
ಪ್ರೀತಿ ಹಾಗೂ ಸಂತೋಷದಿಂದ ಆಟ

ಗೆಲುವಿನ ಬಳಿಕ ಮಾತನಾಡಿದ ಸಿಂಧೂ ನಾನು ಪ್ರತಿ ದಿನ 5.30ಕ್ಕೆ ಅಭ್ಯಾಸ ಆರಂಭಿಸುತ್ತೇನೆ. ಈಗ ನಾನು ಎದ್ದು ಅಭ್ಯಾಸ ಆರಂಭಿಸುವುದು ಟ್ರೋಫಿಗಾಗಿ ಅಲ್ಲ. ನನ್ನ ಬ್ಯಾಡ್ಮಿಂಟನ್ ಕ್ರೀಡೆಯನ್ನು ಸಂತೋಷದಿಂದ ಆಡಲು. ಪರಿಣಾಮ ಅಂಗಣದಲ್ಲಿ ನಾನು ಬ್ಯಾಡ್ಮಿಂಟನ್ ಆಟವನ್ನು, ಪ್ರೀತಿಯಿಂದ, ಸಂತೋಷದಿಂದ ಆಡಲು ಸಾಧ್ಯವಾಗುತ್ತಿದೆ ಎಂದಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories