Team India: ಕ್ರಿಕೆಟ್ ಪ್ರಿಯರೇ ಗಮನಿಸಿ! ಭಾರತ-ಜಿಂಬಾಂಬ್ವೆ ಪಂದ್ಯ ಸೋನಿ, ಹಾಟ್‌ಸ್ಟಾರ್‌ನಲ್ಲಿ ಬರಲ್ಲ, ಮತ್ತೆಲ್ಲಿ ನೋಡಬಹುದು?ಶೇ. 99 ಪ್ಯಾನ್ಸ್‌ಗೆ ಗೊತ್ತೇ ಇಲ್ಲ!

Published : Jul 20, 2026, 05:52 PM IST

ಸತತ ಸೋಲುಗಳಿಂದ ಕಂಗೆಟ್ಟಿರುವ ಟೀಂ ಇಂಡಿಯಾ, ಶ್ರೇಯಸ್ ನಾಯಕತ್ವದಲ್ಲಿ ಇದೀಗ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಸಜ್ಜಾಗಿದೆ. ಯುವ ಆಟಗಾರರಿಂದ ಕೂಡಿರುವ ಈ ತಂಡಕ್ಕೆ, ಗೆಲುವಿನ ಹಾದಿಗೆ ಮರಳಲು ಇದೊಂದು ಮಹತ್ವದ ಅವಕಾಶವಾಗಿದ್ದು, ಸರಣಿಯ ವೇಳಾಪಟ್ಟಿ ಮತ್ತು ನೇರಪ್ರಸಾರದ ವಿವರ ಇಲ್ಲಿದೆ.

PREV
16
ಸೋಲಿನ ಸುಳಿಯಲ್ಲಿ ಟೀಂ ಇಂಡಿಯಾ!

ನವದೆಹಲಿ: ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ್ದ ಭಾರತ ಕ್ರಿಕೆಟ್ ತಂಡ, ಆ ಬಳಿಕ ಅತ್ಯಂತ ನಿರಾಶಾದಾಯಕ ಪ್ರದರ್ಶನ ನೀಡುತ್ತಿದೆ. ವಿಶ್ವಕಪ್ ಜಯದ ನಂತರ ಟೀಮ್ ಇಂಡಿಯಾ ಒಂದೇ ಒಂದು ಟಿ20 ಪಂದ್ಯವನ್ನೂ ಗೆಲ್ಲಲು ಸಾಧ್ಯವಾಗಿಲ್ಲ. ಐರ್ಲೆಂಡ್ ಪ್ರವಾಸದಲ್ಲಿ 2-0 ಅಂತರದಿಂದ ಮತ್ತು ಇಂಗ್ಲೆಂಡ್ ಪ್ರವಾಸದಲ್ಲಿ 4-0 ಅಂತರದಿಂದ ಹೀನಾಯವಾಗಿ ಸೋಲನುಭವಿಸಿದೆ.

26
ಹೊಸ ನಾಯಕತ್ವಕ್ಕೆ ಮಣೆ ಹಾಕಿದ ಆಯ್ಕೆ ಮಂಡಳಿ!

ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಭಾರತ ತಂಡದ ನಾಯಕತ್ವದಲ್ಲಿ ದೊಡ್ಡ ಬದಲಾವಣೆ ಮಾಡಲಾಗಿತ್ತು. ಸೂರ್ಯಕುಮಾರ್ ಯಾದವ್ ಅವರಿಂದ ನಾಯಕತ್ವದ ಹೊಣೆಯನ್ನು ಹಿಂಪಡೆದು ಶ್ರೇಯಸ್ ಅಯ್ಯರ್ ಅವರಿಗೆ ನೀಡಲಾಗಿತ್ತು. ಆದರೆ, ಶ್ರೇಯಸ್ ಅಯ್ಯರ್ ನಾಯಕರಾದ ಮೇಲೆಯೂ ತಂಡದ ದೆಸೆ ಬದಲಾಗಿಲ್ಲ. ಭಾರತ ತಂಡ ಸತತವಾಗಿ ಸೋಲುತ್ತಾ ಬಂದಿದೆ. ನಾಯಕರಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಆಡಿದ ಮೊದಲ 7 ಟಿ20 ಪಂದ್ಯಗಳ ಪೈಕಿ ಒಂದೇ ಒಂದು ಪಂದ್ಯವನ್ನೂ ಗೆಲ್ಲದ ಮೊದಲ ಭಾರತೀಯ ನಾಯಕ ಎಂಬ ಬೇಡದ ದಾಖಲೆ ಶ್ರೇಯಸ್ ಅಯ್ಯರ್ ಹೆಸರಿಗೆ ಸೇರಿದೆ.

36
ಭಾರತ vs ಜಿಂಬಾಬ್ವೆ T20 ಸರಣಿ ವೇಳಾಪಟ್ಟಿ!

ಈ ಸಾಲು ಸಾಲು ಹಿನ್ನಡೆಗಳಿಗೆ ಬ್ರೇಕ್ ಹಾಕಲು ಟೀಮ್ ಇಂಡಿಯಾ ಈಗ ಜಿಂಬಾಬ್ವೆ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ಸಜ್ಜಾಗಿದೆ. ಈ ಸರಣಿಯ ಮೂರೂ ಪಂದ್ಯಗಳು ಜಿಂಬಾಬ್ವೆಯ ಹರಾರೆಯಲ್ಲಿ ನಡೆಯಲಿವೆ. ಮೊದಲ ಟಿ20 ಪಂದ್ಯ: ಜುಲೈ 23 (ಗುರುವಾರ), ಎರಡನೇ ಟಿ20 ಪಂದ್ಯ ಜುಲೈ 25 ಮೂರನೇ ಟಿ20 ಪಂದ್ಯ ಜುಲೈ 26 (ಭಾನುವಾರ) ರಂದು ನಡೆಯಲಿದೆ.

46
ಸಂಜೆ 4ಕ್ಕೆ ಟಾಸ್!

ಸಮಯ; ಈ ಮೂರೂ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 4:30ಕ್ಕೆ ಪ್ರಾರಂಭವಾಗಲಿದ್ದು, ಪಂದ್ಯಕ್ಕೂ ಅರ್ಧ ಗಂಟೆ ಮುಂಚಿತವಾಗಿ ಅಂದರೆ ಸಂಜೆ 4:00 ಗಂಟೆಗೆ ಟಾಸ್ ನಡೆಯಲಿದೆ. ಇತ್ತೀಚೆಗೆ ನಡೆದ ಐರ್ಲೆಂಡ್ ಸರಣಿಯ ಪಂದ್ಯಗಳನ್ನು ಸೋನಿ ಸ್ಪೋರ್ಟ್ಸ್‌ನಲ್ಲಿ ಮತ್ತು ಇಂಗ್ಲೆಂಡ್ ಸರಣಿಯನ್ನು ಸೋನಿ ಹಾಗೂ ಜಿಯೋ ಹಾಟ್‌ಸ್ಟಾರ್‌ಗಳಲ್ಲಿ ನೇರಪ್ರಸಾರ ಮಾಡಲಾಗಿತ್ತು. ಆದರೆ ಜಿಂಬಾಬ್ವೆ ವಿರುದ್ಧದ ಈ T20 ಸರಣಿಯ ಪ್ರಸಾರ ಹಕ್ಕುಗಳು ಸಂಪೂರ್ಣವಾಗಿ ಭಿನ್ನವಾಗಿವೆ.

56
ಯಾವ ಚಾನೆಲ್‌ ಲೈವ್‌ ಸ್ಟ್ರೀಮ್!

ಪಂದ್ಯಗಳನ್ನು ಟಿವಿಯಲ್ಲಿ ನೋಡಲು ಬಯಸುವ ಅಭಿಮಾನಿಗಳು Unite8 ಚಾನೆಲ್‌ನಲ್ಲಿ ಲೈವ್ ವೀಕ್ಷಿಸಬಹುದು. ಮೊಬೈಲ್ ಲೈವ್ ಸ್ಟ್ರೀಮಿಂಗ್: ಮೊಬೈಲ್ ಬಳಕೆದಾರರು ಫ್ಯಾನ್‌ಕೋಡ್ ಆಪ್ ಮೂಲಕ ಪಂದ್ಯಗಳ ನೇರಪ್ರಸಾರ ನೋಡಬಹುದು. ಇದಕ್ಕಾಗಿ ಫ್ಯಾನ್‌ಕೋಡ್‌ನಲ್ಲಿ ಇಡೀ ಸರಣಿಯ ಪಾಸ್ ಅಥವಾ ಪ್ರತ್ಯೇಕವಾಗಿ ಒಂದೊಂದು ಪಂದ್ಯದ ಪಾಸ್ ಖರೀದಿಸುವ ಅವಕಾಶವಿದೆ.ಈ ಸರಣಿಗಾಗಿ ಯುವ ಮತ್ತು ಹೊಸ ಆಟಗಾರರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಶ್ರೇಯಸ್ ಅಯ್ಯರ್ ತಂಡವನ್ನು ಮುನ್ನಡೆಸಲಿದ್ದಾರೆ.

66
ಇದು ಸುವರ್ಣಾವಕಾಶ!

ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಇಶಾನ್ ಕಿಶನ್, ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ರವಿ ಬಿಷ್ಣೋಯ್, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮಾ, ಮಯಾಂಕ್ ಯಾದವ್ ಮತ್ತು ಪ್ರಭ್‌ಸಿಮ್ರನ್ ಸಿಂಗ್. ಸತತ ಸೋಲುಗಳಿಂದ ಕಂಗೆಟ್ಟಿರುವ ನಾಯಕ ಶ್ರೇಯಸ್ ಅಯ್ಯರ್ ಮತ್ತು ಯುವ ಪಡೆಗೆ ಈ ಜಿಂಬಾಬ್ವೆ ಸರಣಿಯು ಮತ್ತೆ ಗೆಲುವಿನ ಹಾದಿಗೆ ಮರಳಲು ಸುವರ್ಣ ಅವಕಾಶವಾಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories