ರೋಹಿತ್ ಶರ್ಮಾ ವಿದಾಯ ಪಂದ್ಯದ ಡೇಟ್ ಫಿಕ್ಸ್? ಚಿಪಕ್ ಪಂದ್ಯದ ವೈರಲ್ ಪೋಸ್ಟ್ ಸತ್ಯ ಬಹಿರಂಗ

Published : Jun 17, 2026, 04:21 PM IST

ಆಫ್ಘಾನಿಸ್ತಾನ ವಿರುದ್ಧದ ಚಿಪಕ್ ಏಕದಿನ ಪಂದ್ಯ ರೋಹಿತ್ ಶರ್ಮಾ ಅವರ ವಿದಾಯದ ಪಂದ್ಯವೇ? ಈ ಕುರಿತ ಪೋಸ್ಟ್ ಭಾರಿ ವೈರಲ್ ಆಗಿದೆ. ಏನಿದು ವೈರಲ್ ಪೋಸ್ಟ್, ಇದರ ಅಸಲಿಯತ್ತೇನು? ರೋಹಿತ್ ಏಕದಿನದಿಂದಲೂ ವಿದಾಯ ಹೇಳುತ್ತಿದ್ದಾರಾ?

PREV
16
ವೈರಲ್ ಪೋಸ್ಟ್, ಫ್ಯಾನ್ಸ್ ಆತಂಕ

ಟಿ20, ಟೆಸ್ಟ್ ಕ್ರಿಕೆಟ್‌ನಿಂದ ವಿದಾಯ ಹೇಳಿರುವ ರೋಹಿತ್ ಶರ್ಮಾ ಸದ್ಯ ಏಕದಿನ ಮಾದರಿಯಲ್ಲಿ ಮಾತ್ರ ಮುಂದುವರಿದಿದ್ದಾರೆ. ಆಫ್ಘಾನಿಸ್ತಾನ ವಿರುದ್ದ ಪಂದ್ಯದಲ್ಲಿ ರೋಹಿತ್ ಶರ್ಮಾ ಆಡುತ್ತಿದ್ದಾರೆ. ಆದರೆ ಆಫ್ಘಾನಿಸ್ತಾನ ವಿರುದ್ದ ಚೆನ್ನೈ ಚಿಪಕ್ ಮೈದಾನದಲ್ಲಿ ನಡೆಯಲಿರುವ ಪಂದ್ಯವೇ ರೋಹಿತ್ ಶರ್ಮಾ ಕೊನೆಯ ಪಂದ್ಯ ಅನ್ನೋ ಮಾತುಗಳು, ಪೋಸ್ಟರ್‌ಗಳು ಹರಿದಾಡುತ್ತಿದೆ. ಇದರ ಅಸಲಿಯತ್ತು ಬಹಿರಂಗವಾಗಿದೆ.

26
ರೋಹಿತ್ ವಿದಾಯ ಇಲ್ಲ, ಸುಳ್ಳು ಪೋಸ್ಟರ್ ವೈರಲ್

ರೋಹಿತ್ ಶರ್ಮಾ ಯಾವುದೇ ವಿದಾಯ ಘೋಷಣೆ ಮಾಡಿಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ರೋಹಿತ್ ವಿದಾಯದ ಪೋಸ್ಟರ್ ನಕಲಿಯಾಗಿದೆ. ಈ ಕುರಿತು ಯಾವುದೇ ಘೋಷಣೆಯಾಗಲಿ, ಬಿಸಿಸಿಐಗೆ ಯಾವುದೇ ವಿದಾಯ ಪತ್ರವನ್ನು, ಸುಳಿವನ್ನು ನೀಡಿಲ್ಲ. ನಕಲಿ ಸುದ್ದಿ ಹರಡಲಾಗುತ್ತಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದೆ.

36
ಜೂನ್ 20ಕ್ಕೆ ಲಾಸ್ಟ್ ಗೇಮ್ ಪೋಸ್ಟ್

ರೋಹಿತ್ ಶರ್ಮಾ ವಯಸ್ಸಿನ ಕಾರಣದಿಂದ ಬಿಸಿಸಿಐ 2027ರ ಏಕದಿನ ವಿಶ್ವಕಪ್ ಟೂರ್ನಿಗೆ ಪರಿಗಣಿಸುತ್ತಿಲ್ಲ ಅನ್ನೋ ಮಾತುಗಳು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಜೂನ್ 20ಕ್ಕೆ ರೋಹಿತ್ ಶರ್ಮಾ ವಿದಾಯ ಹೇಳುತ್ತಿದ್ದಾರೆ. ಚಿಪಕ್ ಪಂದ್ಯದ ಬಳಿಕ ರೋಹಿತ್ ಏಕದಿನ ಮಾದರಿಯಿಂದಲೂ ನಿವೃತ್ತಿಯಾಗುತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್, ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ.

46
ಯೂಟ್ಯೂಬ್ ವಿಡಿಯೋಗಳಿಂದ ವೈರಲ್

ಯೂಟ್ಯೂಬ್‌ನಲ್ಲಿ ಹಲವು ವಿಡಿಯೋಗಳು ಈ ಕುರಿತು ಸುದ್ದಿ ನೀಡಲಾಗಿದೆ. 2027ರ ಅಕ್ಟೋಬರ್ ತಿಂಗಳಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ಇನ್ನೂ ಒಂದೂವರೆ ವರ್ಷ ಸಮಯವಿದೆ. ಹೀಗಾಗಿ ರೋಹಿತ್ ಶರ್ಮಾ ಫಿಟ್ನೆಸ್, ಫಾರ್ಮ್ ಹಾಗೂ ವಯಸ್ಸಿನ ಕಾರಣ ಬಿಸಿಸಿಐ ಏಕದಿನ ವಿಶ್ವಕಪ್‌ಗೆ ಪರಿಗಣಿಸುವುದಿಲ್ಲ ಎಂದು ಯೂಟ್ಯೂಬ್ ವಿಡಿಯೋಗಳಲ್ಲಿ ಹೇಳಲಾಗಿದೆ.ಆದರೆ ಈ ಸುದ್ದಿ ಸುಳ್ಳು ಅನ್ನೋದು ಖಚಿತವಾಗಿದೆ.

56
2ನೇ ಪಂದ್ಯದಲ್ಲಿ ಅಬ್ಬರಿಸಿದ ರೋಹಿತ್

ಆಫ್ಘಾನಿಸ್ತಾನ ವಿರುದ್ದ ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿಸಿದ ರೋಹಿತ್ ಶರ್ಮಾ 2ನೇ ಪಂದ್ಯದಲ್ಲಿ ಅಬ್ಬರಿಸಿದ್ದಾರೆ. 39 ಎಸೆತದಲ್ಲಿ 48 ರನ್ ಸಿಡಿಸಿದ್ದಾರೆ. ಏಕದಿನದಲ್ಲಿ ಉತ್ತಮ ಫಾರ್ಮ್ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ.

66
ರೋಹಿತ್ ಶರ್ಮಾ ಫಾರ್ಮ್

ಐಪಿಎಲ್ ಟೂರ್ನಿಯಲ್ಲೂ ಮುಂಬೈ ಇಂಡಿಯನ್ಸ್ ಪರ ನಿರೀಕ್ಷಿತ ಹೋರಾಟ ನೀಡಿರಲಿಲ್ಲ. ಹೀಗಾಗಿ ರೋಹಿತ್ ಶರ್ಮಾ ಫಾರ್ಮ್ ಕುರಿತು ಹಲವು ಅನುಮಾನ ಮೂಡಿತ್ತು. ಇದರ ಬೆನ್ನಲ್ಲೇ ಆಫ್ಘಾನಿಸ್ತಾನ ವಿರುದ್ಧ ಮೊದಲ ಪಂದ್ಯದಲ್ಲಿ 16 ರನ್ ಸಿಡಿಸಿದ್ದರು. ಆದರೆ 2ನೇ ಪಂದ್ಯದಲ್ಲಿ 48 ರನ್ ಕಾಣಿಕೆ ನೀಡಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories