ಆಟವಾಡಲು ಮಗನನ್ನು ಲಂಡನ್ ಸಿಟಿ ಪಾರ್ಕ್‌ಗೆ ಕರೆದೊಯ್ದ ವಿರಾಟ್ ಕೊಹ್ಲಿ, ಫ್ಯಾನ್ಸ್‌ನಿಂದ ವಿಶೇಷ ಮನವಿ

Published : Jun 16, 2026, 07:38 PM IST

ಐಪಿಎಲ್ ಬಳಿಕ ಇಂಜುರಿ ಕಾರಣದಿಂದ ವಿಶ್ರಾಂತಿಯಲ್ಲಿರುವ ವಿರಾಟ್ ಕೊಹ್ಲಿ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಇದೀಗ ಮಗನನ್ನು ಲಂಡನ್ ನಗರದ ಪಾರ್ಕ್‌ಗೆ ಕರೆದೊಯ್ದ ಫೋಟೋಗಳು ಭಾರಿ ಸದ್ದು ಮಾಡುತ್ತಿದೆ.

PREV
16
ಮಗನ ಜೊತೆ ಕೊಹ್ಲಿ ಟೈಂಪಾಸ್

ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಐಪಿಎಲ್ ಟೂರ್ನಿ ಬಳಿಕ ಇಂಜುರಿ ಕಾರಣದಿಂದ ಆಫ್ಘಾನಿಸ್ತಾನ ವಿರುದ್ದದ ಸರಣಿಯಿಂದ ಹೊರಗುಳಿದಿದ್ದಾರೆ. ವಿಶ್ರಾಂತಿಯಲ್ಲಿರುವ ಕೊಹ್ಲಿ ಸದ್ಯ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಇದೀಗ ಮಗ ಅಕಾಯ್ ಜೊತೆ ಲಂಡನ್ ನಗರದ ಪಾರ್ಕ್‌ನಲ್ಲಿ ಕಾಲ ಕಳೆದ ಕೆಲ ಫೋಟೋಗಳು ಭಾರಿ ವೈರಲ್ ಆಗಿದೆ.

26
ಮಗನ ಜೊತೆ ವಿರಾಟ್ ಕೊಹ್ಲಿ

ಲಂಡನ್ ನಗರದ ಪಾರ್ಕ್‌ನಲ್ಲಿ ಮಗನ ಜೊತೆ ಕಾಲ ಕಳೆಯುತ್ತಿರುವ ವಿರಾಟ್ ಕೊಹ್ಲಿ ಫೋಟೋಗಳನ್ನು ಆಶೀಫ್ ಪಟೇಲ್ ಹಂಚಿಕೊಂಡಿದ್ದಾರೆ. ಕೊಹ್ಲಿ ಬ್ಲಾಕ್‌ ಟಿಶರ್ಟ್ ಹಾಗೂ ಬ್ಲಾಕ್ ಜಾಕೆಟ್ ಧರಿಸಿದ್ದರೆ, ಮಗ ಆಕಾಯ್ ಸ್ವೆಟರ್ ಹಾಗೂ ಟ್ರೌಶರ್ ಧರಿಸಿದ್ದಾರೆ. ಕೊಹ್ಲಿ ಭುಜಲ್ಲಿ ಅಕಾಯ್ ವಿಶ್ರಾಂತಿ ಪಡೆಯುತ್ತಿರುವ ಫೋಟೋಗಳು ಇದಾಗಿದೆ.

36
ಅಕಾಯ್ ಮುಖ ತೋರಿಸದೆ ಫೋಟೋ ಕ್ಲಿಕ್

ವಿರಾಟ್ ಕೊಹ್ಲಿ ಪಾರ್ಕ್‌ನಲ್ಲಿ ಮಗನ ಜೊತೆ ಕಾಲ ಕಳೆಯುತ್ತಿರುವ ಹಲವು ಫೋಟೋಗಳು ವೈರಲ್ ಆಗಿದೆ. ಈ ಎಲ್ಲಾ ಫೋಟೋಗಳಲ್ಲಿ ವಿರಾಟ್ ಕೊಹ್ಲಿ ಪುತ್ರ ಅಕಾಯ್ ಮುಖ ಕ್ಯಾಮೆರಾ ಕಣ್ಣಿಗೆ ಬೀಳದಂತೆ ತೆಗೆಯಲಾಗಿದೆ. ಭಾರಿ ಕುತೂಹಲದಲ್ಲಿದ್ದ ಅಭಿಮಾನಿಗಳು ಅಕಾಯ್ ಮುಖ ನೋಡದೆ ನಿರಾಸೆಗೊಂಡಿದ್ದಾರೆ.

46
2024ರಿಂದ ಲಂಡನ್‌ನಲ್ಲಿ ಕೊಹ್ಲಿ ವಾಸ

ವಿರಾಟ್ ಕೊಹ್ಲಿ 2017ರಿಂದ ಮುಂಬೈನಲ್ಲಿ ನೆಲೆಸಿದ್ದರು. ಆದರೆ 2024ರಿಂದ ಲಂಡನ್‌ಗೆ ಶಿಫ್ಟ್ ಆಗಿದ್ದಾರೆ. ಕ್ರಿಕೆಟ್ ಸರಣಿಗಳಿದ್ದರೆ ಮಾತ್ರ ಭಾರತಕ್ಕೆ ಆಗಮಿಸುತ್ತಾರೆ. ಕೊಹ್ಲಿ ಲಂಡನ್‌ಗೆ ಶಿಫ್ಟ್ ಆಗುತ್ತಿದ್ದಾರೆ ಅನ್ನೋ ಸುದ್ದಿ ಭಾರಿ ಕೋಲಾಹಲ ಸೃಷ್ಟಿಸಿತ್ತು. ಸದ್ಯ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಮುಂದುವರಿದಿರುವ ಕೊಹ್ಲಿ ಹೆಚ್ಚಿನ ಸಮಯವನ್ನು ಕುಟುಂಬದ ಜೊತೆ ಕಳೆಯುತ್ತಿದ್ದಾರೆ.

56
ಸಾರ್ವಜನಿಕರಿಂದ ಮಕ್ಕಳು ದೂರ ದೂರ

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ 2017ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 2021ರಲ್ಲಿ ಕೊಹ್ಲಿ ಹಾಗೂ ಅನುಷ್ಕಾ ದಂಪತಿ ಪೋಷಕರಾಗಿ ಬಡ್ತಿ ಪಡೆದಿದ್ದರು. ಮಗಳು ವಮಿಕಾ ಜನಿಸಿದ ಬಳಿಕ 2024ರಲ್ಲಿ ಮಗ ಅಕಾಯ್ ಜನಿಸಿದ್ದಾರೆ. ವಿಶೇಷ ಅಂದರೆ ಇಬ್ಬರು ಮಗ್ಗಳನ್ನು ಸಾರ್ವಜನಿಕರಿಗೆ ದೂರವೇ ಇಟ್ಟಿದ್ದಾರೆ. ಯಾವುದೇ ಫೋಟೋ, ವಿಡಿಯೋಗಳಲ್ಲಿ ಮುಖ ತೋರಿಸದೆ ಮರೆಮಾಚುತ್ತಾರೆ.

66
ಕೊಹ್ಲಿ ಕ್ರಿಕೆಟ್ ಕಮಿಟ್‌ಮೆಂಟ್

ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಸತತ 2ನೇ ಟ್ರೋಫಿ ಗೆಲುವನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದೀಗ ಕೊಹ್ಲಿಯನ್ನು ಟೀಂ ಇಂಡಿಯಾದಲ್ಲಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇತ್ತ 2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಲು ಕೊಹ್ಲಿ ಕೂಡ ಉತ್ಸುಕರಾಗಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories