ರಾಯಚೂರಿನಲ್ಲೂ ಘರ್ಜಿಸಿದ ಆರ್‌ಸಿಬಿ, ಎಡವಟ್ಟು ಮಾಡಿ ತಕ್ಷಣವೇ ತಿದ್ದಿ ಮನಗೆದ್ದ ವಿಜಯ್ ಮಲ್ಯ

Published : May 11, 2026, 09:38 AM IST

ಆರ್‌ಸಿಬಿ ಸಿಂಹಗಳು, ಇದೀಗ ರಾಯಚೂರಿನಲ್ಲೂ ಘರ್ಜಿಸಿದೆ ಎಂದ ಮಾಜಿ ಮಾಲೀಕ ವಿಜಯ್ ಮಲ್ಯ ತಕ್ಷಣವೇ ತಪ್ಪು ಸರಿಪಡಿಸಿ ಎಕ್ಸ್ ಪೋಸ್ಟ್ ಮಾಡಿದ್ದಾರೆ. ಈ ವೇಳೆ ನನ್ನೊಳಗಿನ ಕನ್ನಡಿಗ ಬಿಟ್ಟುಕೊಡುವುದೇ ಎಂದು ತಪ್ಪು ಸರಿ ಮಾಡಿದ್ದಾರೆ.

PREV
15
ಆರ್‌ಸಿಬಿ ಗೆಲುವಿಗೆ ಮಲ್ಯ ಅಭಿನಂದನೆ

ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ ಗೆಲುವು ಕಂಡ ಆರ್‌ಸಿಬಿ ತಂಡಕ್ಕೆ ಮಾಜಿ ಮಾಲೀಕ ವಿಜಯ್ ಮಲ್ಯ ಅಭಿನಂದಿಸಿದ್ದಾರೆ. ಆದರೆ ಮಲ್ಯ ಎಕ್ಸ್ ಪೋಸ್ಟ್ ಮಾಡುವಾಗ ಎಡವಟ್ಟು ಮಾಡಿದ್ದಾರೆ. ಬೆಂಗಳೂರು ತಂಡ ಇದೀಗ ರಾಯಚೂರಿನಲ್ಲಿ ಘರ್ಜಿಸಿದೆ ಎಂದಿದ್ದಾರೆ. ಮಲ್ಯ ಈ ಟ್ವೀಟ್‌ಗೆ ಹಲವು ಗೊಂದಲಕ್ಕೀಡಾಗಿದ್ದಾರೆ. ಕೊನೆಗೆ ವಿಜಯ್ ಮಲ್ಯ ತಪ್ಪು ಸರಿ ಪಡಿಸಿ ಮಾಡಿದ ಪೋಸ್ಟ್ ಹಲವರ ಮನಗೆದ್ದಿದೆ.

25
ವಿಜಯ್ ಮಲ್ಯ ಹೇಳಿದ್ದೇನು?

ಮುಂಬೈ ವಿರುದ್ದ ಅದ್ಭುತ ಗೆಲುವಿಗೆ ವಿಜಯ್ ಮಲ್ಯ ಆರ್‌ಸಿಬಿ ತಂಡವನ್ನು ಅಭಿನಂದಿಸಿದ್ದಾರೆ. ಆರ್‌ಸಿಬಿ ನಮ್ಮ ಸಿಂಹಗಳಿಗೆ ಅಭಿನಂದನೆಗಳು. ಬೆಂಗಳೂರಿನ ಸಿಂಹಗಳು ಇದೀಗ ರಾಯಚೂರಿನ ಸಿಂಹಗಳು. ಸಂಕಷ್ಟಗಳ ನಡುವೆ ಉತ್ತಮ ಪ್ರದರ್ಶನ ನೀಡಿ ಅದ್ಭುತ ಗೆಲುವು ಸಾಧಿಸಿದೆ. ಯಾವುದೇ ಸಂದರ್ಭದಲ್ಲೂ ಬಿಟ್ಟುಕೊಡದೆ ಹೋರಾಟ ಮಾಡುವ ಆರ್‌ಸಿಬಿಯ ಪ್ರಯತ್ನ ಮುಂದುವರಿದಿದೆ ಎಂದು ಮಲ್ಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

35
ರಾಯ್‌ಪುರ ಬದಲು ರಾಯಚೂರು ಎಂದ ಮಲ್ಯ

ಆರ್‌ಸಿಬಿಯ ರಾಯ್‌ಪುರ್ ಹೋಮ್ ಗೇಮ್ ಆರಂಭಗೊಂಡಿದೆ. ಆರ್‌ಸಿಬಿಯ ಎರಡನೇ ತವರು ರಾಯ್‌ಪುರ್. ಆದರೆ ಮಲ್ಯ ಅಭಿನಂದನೆ ವೇಳೆ ರಾಯ್‌ಪುರ್ ಬದಲು ರಾಯಚೂರು ಎಂದು ಪೋಸ್ಟ್ ಮಾಡಿದ್ದಾರೆ. ಸ್ಪಷ್ಟವಾಗಿ ರಾಯಚೂರಿನ ಸಿಂಹಗಳು ಎಂದು ಎಕ್ಸ್‌ನಲ್ಲಿ ಉಲ್ಲೇಖಿಸಿದ್ದರು.

45
ತಪ್ಪು ಸರಿಪಡಿಸಿದ ಮಲ್ಯ ಪೋಸ್ಟ್

ತಕ್ಷಣವೇ ಮತ್ತೊಂದು ಪೋಸ್ಟ್ ಮಾಡಿದ ವಿಜಯ್ ಮಲ್ಯ, ರಾಯಚೂರು ಅಲ್ಲ ಅದು ರಾಯ್‌ಪುರ್. ನನ್ನೊಳಗಿನ ಕನ್ನಡಿಗ ನನ್ನ ಬಿಟ್ಟುಕೊಡುವುದೇ ಎಂದು ವಿಜಯ್ ಮಲ್ಯ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ವಿರೋಧಗಳು ವ್ಯಕ್ತವಾಗಿದೆ.

55
ಉದ್ದೇಶಪೂರ್ವಕವಾಗಿ ಮಾಡಿದ್ರಾ ಮಿಸ್ಟೇಕ್

ವಿಜಯ್ ಮಲ್ಯ ಉದ್ದೇಶಪೂರ್ವಕವಾಗಿ ಮಿಸ್ಟೇಕ್ ಮಾಡಿದ್ದಾರೆ ಎಂದು ಹಲವರು ಟೀಕಿಸಿದ್ದಾರೆ. ಮಲ್ಯ ಒಳಗೆ ಕನ್ನಡಿಗ ಇದ್ದರೆ, ಕರ್ನಾಟಕ ಬಿಟ್ಟಿದ್ದು ಯಾಕೆ ಎಂದು ಹಲವರು ಪ್ರಶ್ನಿಸಿದ್ದಾರೆ. ಇದೀಗ ಮಲ್ಯ ಟ್ವೀಟ್ ಪರ ವಿರೋಧಗಳು ಹೆಚ್ಚಾಗುತ್ತಿದೆ. ಆದರೆ ವಿಜಯ್ ಮಲ್ಯ ಒಂದು ಪೋಸ್ಟ್ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.

ಉದ್ದೇಶಪೂರ್ವಕವಾಗಿ ಮಾಡಿದ್ರಾ ಮಿಸ್ಟೇಕ್

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories