ಐಪಿಎಲ್ 2026ರಲ್ಲಿ ಒಂದೇ ದಿನ 2 ತಂಡ ಟೂರ್ನಿಯಿಂದ ಔಟ್, ಪ್ಲೇ ಆಫ್ ರೇಸ್‌ನಲ್ಲಿ 7+1 ತಂಡ

Published : May 11, 2026, 09:03 AM IST

ಐಪಿಎಲ್ ಟೂರ್ನಿಯಲ್ಲಿ ಒಂದೇ ದಿನ 2 ತಂಡ ಟೂರ್ನಿಯಿಂದ ಹೊರಬಿದ್ದಿದೆ. ಇದೀಗ 8 ತಂಡಗಳ ಪೈಕಿ 7 ತಂಡಕ್ಕೆ ಪ್ಲೇ ಆಫ್ ಅವಕಾಶವಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅದೃಷ್ಠವೇ ಕೈಹಿಡಿಯಬೇಕು. 

PREV
15
ಐಪಿಎಲ್ ಟೂರ್ನಿಯಲ್ಲಿ 2 ತಂಡ ಔಟ್

ಐಪಿಎಲ್ ಟೂರ್ನಿಯ ಹೋರಾಟ ತೀವ್ರಗೊಳ್ಳುತ್ತಿದೆ. ಲೀಗ್ ಅಂತಿಮ ಹಂತ ತಲುಪುತ್ತಿದೆ. ವಿಶೇಷ ಅಂದರೆ ಮೇ.10 ರಂದು ಪಂದ್ಯ ಆಡಿ ಸೋತ 2 ತಂಡಗಳು ಟೂರ್ನಿಯಿಂದ ಹೊರಬಿದ್ದಿದೆ. ಇದೀಗ ಪ್ಲೇ ಆಫ್ ರೇಸ್‌ನಲ್ಲಿ ಕೇವಲ 8 ತಂಡದಗಳು ಮಾತ್ರ ಉಳಿದುಕೊಂಡಿದೆ. ಈ ಪೈಕಿ ಅಂಕಪಟ್ಟಿಯಲ್ಲಿರುವ ಒಂದು ತಂಡಕ್ಕೆ ಅವಕಾಶದ ಜೊತೆಗೆ ಅತಿಯಾದ ಅದೃಷ್ಠವೂ ಕೈಹಿಜಿಯಬೇಕು.

25
ಯಾವ ಎರಡು ತಂಡ ಟೂರ್ನಿಯಿಂದ ಔಟ್

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಟೂರ್ನಿಯಿಂದ ಹೊರಬಿದ್ದ ಮೊದಲ ತಂಡ ಲಖನೌ ಸೂಪರ್‌ ಜೈಂಟ್ಸ್. ಸಿಎಸ್‌ಕೆ ವಿರುದ್ಧ ಸೋಲು ಕಂಡ ಎಲ್‌ಎಸ್‌ಜಿ ಟೂರ್ನಿಯಿಂದ ಹೊರಬಿದ್ದಿದೆ. ಇದಾದ ಬಳಿಕ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಲು ಕಂಡ ಮುಂಬೈ ಇಂಡಿಯನ್ಸ್ ಕೂಡ ಟೂರ್ನಿಯಿಂದ ಹೊರಬಿದ್ದಿದೆ.

35
ಪ್ಲೇ ಆಫ್ ರೇಸ್‌ನಲ್ಲಿ 8 ತಂಡ, ಡಿಸಿಗೆ ಅದೃಷ್ಠ ಬೇಕು

ಪ್ಲೇ ಆಫ್ ರೇಸ್‌ನಲ್ಲಿ 8 ತಂಡಗಳಿವೆ. ಈ ಪೈಕಿ ಡೆಲ್ಲಿ ಕ್ಯಾಪಿಟಲ್ಸ್ 8ನೇ ಸ್ಥಾನದಲ್ಲಿದೆ. 11 ಪಂದ್ಯದಿಂದ 4 ಗೆಲುವಿನ ಮೂಲಕ 8 ಅಂಕ ಸಂಪಾದಿಸಿದೆ. ಇನ್ನುಳಿದ ಎಲ್ಲಾ ಪಂದ್ಯ ಗೆದ್ದರೂ ಒಟ್ಟು 14 ಅಂಕಗಳಿಸಲಿದೆ. ಆದರೆ ಇದು ಪ್ಲೇ ಆಫ್ ಖಚಿತಪಡಿಸುವ ಸಾಧ್ಯತೆ ಕಡಿಮೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಬಹುತೇಕ ಟೂರ್ನಿಯಿಂದ ಹೊರಬಿದ್ದಂತೆ.

45
ಆರ್‌ಸಿಬಿಗೆ ಉತ್ತಮ ಅವಕಾಶ

ಕಳೆದ ಬಾರಿ ಟ್ರೋಫಿ ಗೆದ್ದು ದಾಖಲೆ ಬರೆದ ಆರ್‌ಸಿಬಿ ತಂಡಕ್ಕೆ ಈ ಬಾರಿ ಟೇಬಲ್ ಟಾಪರ್ ಆಗಿ ಪ್ಲೇ ಆಫ್ ಪ್ರವೇಶಕ್ಕೆ ಅವಕಾಶವಿದೆ. ಸದ್ಯ ಅಂಕಪಟ್ಟಿಯಲ್ಲಿ ಆರ್‌ಸಿಬಿ 11 ಪಂದ್ಯದಿಂದ 14 ಅಂಕಗಳಿಸಿ ಮೊದಲ ಸ್ಥಾನದಲ್ಲಿದೆ. ಇನ್ನು 2 ಮತ್ತು ಮೂರನೇ ಸ್ಥಾನದಲ್ಲಿರುವ ಎಸ್‌ಆರ್‌ಎಚ್ ಹಾಗೂ ಗುಜರಾತ್ ಟೈಟಾನ್ಸ್ ಕೂಡ 14 ಅಂಕಗಳಿಸಿದೆ. ನಾಲ್ಕನೇ ಸ್ಥಾನದಲ್ಲಿರುವ ಪಂಜಾಬ್ 10 ಪಂದ್ಯದಿಂದ 13 ಅಂಕಗಳಿಸಿದೆ.

55
ಐಪಿಎಲ್ ಲೀಗ್ ಕುತೂಹಲ

ಸಿಎಸ್‌ಕೆ, ರಾಜಸ್ಥಾನ ಹಾಗೂ ಕೆಕೆಆರ್ ಅಂಕಪಟ್ಟಿಯಲ್ಲಿ 5, 6 ಹಾಗೂ 7ನೇ ಸ್ಥಾನದಲ್ಲಿದೆ. ಈ ಮೂರು ತಂಡಕ್ಕೂ ಪ್ಲೇ ಆಫ್ ಖಚಿತಪಡಿಸಲು ಅವಕಾಶವಿದೆ. ಹೀಗಾಗಿ ಲೀಗ್ ಕೊನೆಯ ಪಂದ್ಯದ ವರೆಗೆ ಪ್ಲೇ ಆಫ್ ಕುತೂಹಲ ಉಳಿಯುವ ಸಾಧ್ಯತೆ ಇದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories