15 ಎಸೆತದಲ್ಲಿ ಫಿಫ್ಟಿ, 36ಕ್ಕೆ ಶತಕ, ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ವೈಭವ್ ಸೂರ್ಯವಂಶಿ, ಮೊದಲ ಓವರ್‌ನಲ್ಲಿ 4 ಸಿಕ್ಸರ್ ಸಿಡಿಸಿ ಮತ್ತೊಂದು ಇತಿಹಾಸ ನಿರ್ಮಿಸಿದ್ದಾರೆ. ಸೆಂಚುರಿ ಅಬ್ಬರದಲ್ಲಿ ಹಲವು ದಾಖಲೆ ನಿರ್ಮಾಣವಾಗಿದೆ.
ರಾಜಸ್ಥಾನ್ ರಾಯಲ್ಸ್ ತಂಡದ 15ರ ಪೋರ ವೈಭವ್ ಸೂರ್ಯವಂಶಿ, ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಜಗತ್ತನ್ನೇ ಬೆರಗುಗೊಳಿಸಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ವೈಭವ್ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಅಷ್ಟೇ ಅಲ್ಲ, ಕೇವಲ 36 ಎಸೆತಗಳಲ್ಲಿ ತಮ್ಮ ಐಪಿಎಲ್ ವೃತ್ತಿಜೀವನದ ಎರಡನೇ ಶತಕವನ್ನೂ ಪೂರೈಸಿ ದಾಖಲೆ ಬರೆದಿದ್ದಾರೆ.
26
ವೈಭವ್ ದಾಖಲೆ
ಟಿ20 ಕ್ರಿಕೆಟ್‌ನಲ್ಲಿ 15 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಮೂರು ಬಾರಿ ಅರ್ಧಶತಕ ಬಾರಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ವಿಶ್ವದಾಖಲೆಯನ್ನು ವೈಭವ್ ತಮ್ಮದಾಗಿಸಿಕೊಂಡರು. ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಎರಡು ಬಾರಿ ಈ ಸಾಧನೆ ಮಾಡಿದ್ದರು. ಈಗ ವೈಭವ್ ಆ ದಾಖಲೆಯನ್ನು ಮುರಿದಿದ್ದಾರೆ.
36
ಮೂರನೇ ಅತೀ ವೇಗದ ಶತಕ
ವೈಭವ್ ಈ ಶತಕದೊಂದಿಗೆ ಐಪಿಎಲ್‌ನ ಮೂರನೇ ವೇಗದ ಶತಕದ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡರು. ಕಳೆದ ಐಪಿಎಲ್ ಸೀಸನ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 35 ಎಸೆತಗಳಲ್ಲಿ ಶತಕ ಸಿಡಿಸಿ, ಐಪಿಎಲ್‌ನಲ್ಲಿ ಭಾರತೀಯ ಆಟಗಾರನೊಬ್ಬ ಬಾರಿಸಿದ ಅತಿ ವೇಗದ ಶತಕ ಎಂಬ ದಾಖಲೆ ನಿರ್ಮಿಸಿದ್ದರು.
ಈ ಭರ್ಜರಿ ಶತಕದೊಂದಿಗೆ, ಟಿ20 ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 1000 ರನ್ ಪೂರೈಸಿದ ಬ್ಯಾಟರ್ ಎಂಬ ದಾಖಲೆಯನ್ನೂ ವೈಭವ್ ಸೃಷ್ಟಿಸಿದರು. ಅವರು ಕೇವಲ 473 ಎಸೆತಗಳಲ್ಲಿ 1000 ರನ್ ಗಡಿ ದಾಟಿದರು. ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್‌ನಲ್ಲಿ 480 ಎಸೆತಗಳಲ್ಲಿ 1000 ರನ್ ಗಳಿಸಿದ್ದ ಮಿಚೆಲ್ ಓವನ್ ಮತ್ತು 520 ಎಸೆತಗಳಲ್ಲಿ 1000 ರನ್ ಗಳಿಸಿದ್ದ ಆಂಡ್ರ್ಯೂ ಸೈಮಂಡ್ಸ್ ಅವರನ್ನು ವೈಭವ್ ಹಿಂದಿಕ್ಕಿದರು.
56
ಮೊದಲ ಎಸೆತದಲ್ಲಿ 4 ಸಿಕ್ಸರ್
ಕಳೆದ ಪಂದ್ಯದಲ್ಲಿ ತನ್ನನ್ನು ಸೊನ್ನೆಗೆ ಔಟ್ ಮಾಡಿದ್ದ ಪ್ರಫುಲ್ ಹಿಂಗೆ ಅವರ ಮೊದಲ ಓವರ್‌ನಲ್ಲೇ ಸತತ 4 ಸಿಕ್ಸರ್‌ಗಳನ್ನು ಬಾರಿಸಿ ವೈಭವ್ ಸೇಡು ತೀರಿಸಿಕೊಂಡರು. ಆ ಓವರ್‌ನಲ್ಲಿ ಬರೋಬ್ಬರಿ 24 ರನ್ ಬಂದವು. ಗಾಯದಿಂದ ಚೇತರಿಸಿಕೊಂಡು ಹೈದರಾಬಾದ್ ತಂಡಕ್ಕೆ ಮರಳಿದ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಇಶಾನ್ ಮಲಿಂಗ ಅವರಿಗೂ ಸಿಕ್ಸರ್ ಬಾರಿಸಿ ವೈಭವ್ ತಮ್ಮ ಆರ್ಭಟ ಮುಂದುವರೆಸಿದರು.
66
ಸಿಕ್ಸರ್ ಸುರಿಮಳೆ
ಕೇವಲ 15 ಎಸೆತಗಳಲ್ಲಿ 7 ಸಿಕ್ಸರ್ ಮತ್ತು ಒಂದು ಬೌಂಡರಿ ನೆರವಿನಿಂದ ಅವರು ಅರ್ಧಶತಕ ಪೂರೈಸಿದರು. ಸಾಕಿಬ್ ಹೊಸೈನ್ ಓವರ್‌ನಲ್ಲಿ ಸಿಕ್ಸ್, ಫೋರ್, ಸಿಕ್ಸ್ ಬಾರಿಸಿ ಶತಕ ಪೂರ್ಣಗೊಳಿಸಿದ ವೈಭವ್, ಮುಂದಿನ ಎಸೆತದಲ್ಲೇ ಔಟಾದರು. ವೈಭವ್ ಅವರ ಈ ಸ್ಪೋಟಕ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಮತ್ತು 12 ಸಿಕ್ಸರ್‌ಗಳು ಸೇರಿದ್ದವು. ವಿಶೇಷ ಅಂದ್ರೆ, ಅವರು ಗಳಿಸಿದ 103 ರನ್‌ಗಳಲ್ಲಿ 92 ರನ್‌ಗಳು ಬೌಂಡರಿಗಳಿಂದಲೇ ಬಂದಿದ್ದವು.
ಸಿಕ್ಸರ್ ಸುರಿಮಳೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.