Published : Aug 06, 2025, 05:46 PM ISTUpdated : Aug 06, 2025, 05:47 PM IST
ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್‌ಗಳ ಸರಣಿಯನ್ನು ಭಾರತ ಸಮಬಲಗೊಳಿಸುವಲ್ಲಿ ಬ್ಯಾಟರ್‌ಗಳ ಜೊತೆಗೆ ಬೌಲರ್‌ಗಳಾದ ಸಿರಾಜ್, ಬುಮ್ರಾ, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ವಾಷಿಂಗ್ಟನ್ ಸುಂದರ್ ಪ್ರಮುಖ ಪಾತ್ರ ವಹಿಸಿದ್ದಾರೆ.
ಇಂಗ್ಲೆಂಡ್ ನೆಲದಲ್ಲಿ ನಡೆದ ಐದು ಟೆಸ್ಟ್‌ಗಳ ಸರಣಿಯನ್ನು 2-2 ಅಂತರದಲ್ಲಿ ಸಮಬಲಗೊಳಿಸಿ ಯುವ ಭಾರತ ತಂಡ ಇತಿಹಾಸ ನಿರ್ಮಿಸಿದೆ. ಬ್ಯಾಟಿಂಗ್‌ನಲ್ಲಿ ಶುಭ್‌ಮನ್ ಗಿಲ್, ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್ ಮಿಂಚಿದರು. ಬೌಲಿಂಗ್‌ನಲ್ಲಿ ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜಾ ಮುಂತಾದವರು ಉತ್ತಮ ಪ್ರದರ್ಶನ ನೀಡಿದರು. ಸರಣಿಯನ್ನು ಸಮಬಲಗೊಳಿಸುವಲ್ಲಿ ಹೆಚ್ಚು ಗಮನಕ್ಕೆ ಬಾರದ ಆಟಗಾರರು ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ. ಟೀಂ ಇಂಡಿಯಾ ಪ್ರದರ್ಶನದಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್ ಮತ್ತು ವಾಷಿಂಗ್ಟನ್ ಸುಂದರ್.
25
ಮೂರು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಪ್ರಸಿದ್ಧ್ ಕೃಷ್ಣ 14 ವಿಕೆಟ್‌ಗಳನ್ನು ಪಡೆದು ಬುಮ್ರಾ ಅವರಷ್ಟೇ ವಿಕೆಟ್ ಕಬಳಿಸಿದ ಸಾಧನೆ ಮಾಡಿದರು. ಬುಮ್ರಾ ಇಲ್ಲದ ಸಮಯದಲ್ಲಿ ಪ್ರತಿಸ್ಪರ್ಧಿಗಳನ್ನು ಕಟ್ಟಿಹಾಕುವಲ್ಲಿ ಪ್ರಸಿದ್ದ್ ಕೃಷ್ಣ ಮುಂಚೂಣಿಯಲ್ಲಿದ್ದರು. ಭಾರತ ತಂಡದ ಉತ್ತಮ ಬೌಲಿಂಗ್ ಪ್ರದರ್ಶನದಲ್ಲಿ ಪ್ರಸಿದ್ಧ್ ಪಾತ್ರ ಅಪೂರ್ವವಾದುದು.
35
ಈ ಸರಣಿಯಲ್ಲಿ ಮೂರು ಟೆಸ್ಟ್ ಪಂದ್ಯಗಳನ್ನು ಆಡಿರುವ ಆಕಾಶ್ ದೀಪ್ 13 ವಿಕೆಟ್‌ಗಳನ್ನು ಪಡೆದು ತಮ್ಮ ಬೌಲಿಂಗ್ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಐದನೇ ಟೆಸ್ಟ್‌ನಲ್ಲಿ ನೈಟ್ ವಾಚ್‌ಮನ್ ಆಗಿ ಬಂದ ಅವರು ಬ್ಯಾಟಿಂಗ್‌ನಲ್ಲೂ ಮಿಂಚಿದರು. 93 ಎಸೆತಗಳಲ್ಲಿ 66 ರನ್ ಗಳಿಸಿ ಭಾರತದ ಗೆಲುವಿಗೆ ಬುನಾದಿ ಹಾಕಿದರು.
ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿರುವ ವಾಷಿಂಗ್ಟನ್ ಸುಂದರ್ 7 ವಿಕೆಟ್‌ಗಳನ್ನು ಪಡೆದಿದ್ದಾರೆ. ನಾಲ್ಕನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 101 ರನ್ ಗಳಿಸಿ ಪಂದ್ಯವನ್ನು ಡ್ರಾ ಮಾಡಲು ಪ್ರಮುಖ ಪಾತ್ರ ವಹಿಸಿದರು.
55
ಪ್ರಸಿದ್ಧ್ ಬೌಲಿಂಗ್, ಆಕಾಶ್ ಆಕ್ರಮಣಕಾರಿ ಆಟ ಮತ್ತು ವಾಷಿಂಗ್ಟನ್ ಆಲ್‌ರೌಂಡ್ ಪ್ರದರ್ಶನ ಭಾರತವನ್ನು ಗೆಲುವಿನತ್ತ ಕೊಂಡೊಯ್ದವು. ಹೆಚ್ಚು ಪ್ರಚಾರ ಪಡೆಯದ ಈ ಮೂವರು ಅನ್‌ಸಂಗ್ ಆಟಗಾರರು ಟೀಂ ಇಂಡಿಯಾ ಹೆಮ್ಮೆಪಡುವಂತ ಸಾಧನೆ ಮಾಡಿದ್ದಾರೆ. ಈ ಮೂವರು ಆಟಗಾರರ ಅಸಾಧಾರಣ ಪ್ರದರ್ಶನವಿಲ್ಲದೆ ಅದು ಸಾಧ್ಯವಾಗುತ್ತಿರಲಿಲ್ಲ.