ವರ್ಕ್‌ಲೋಡ್ ನೆಪ ಹೇಳಿ ಇಂಗ್ಲೆಂಡ್ ಎದುರು ಕೇವಲ ಮೂರು ಟೆಸ್ಟ್ ಪಂದ್ಯಗಳನ್ನಾಡಿದ್ದ ಜಸ್ಪ್ರೀತ್ ಬುಮ್ರಾಗೆ ಬಿಸಿ ಮುಟ್ಟಿಸಲು ಬಿಸಿಸಿಐ ಮುಂದಾಗಿದೆ. ಈ ನಿಯಮ ಜಾರಿಗೆ ಬಂದರೆ ಬುಮ್ರಾಗೆ ತಲೆನೋವು ಹೆಚ್ಚಾಗಲಿದೆ.
ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ ತಂಡ 5 ಪಂದ್ಯಗಳ ಟೆಸ್ಟ್ ಸರಣಿಯನ್ನ 2-2 ಅಂತರದಲ್ಲಿ ಸಮಬಲಗೊಳಿಸಿತು. ಬುಮ್ರಾ ಈ ಸರಣಿಯ ಮೊದಲ, ಮೂರನೇ ಮತ್ತು ನಾಲ್ಕನೇ ಟೆಸ್ಟ್ ಪಂದ್ಯಗಳಲ್ಲಿ ಆಡಿದ್ರು. ಎರಡನೇ ಮತ್ತು ಐದನೇ ಟೆಸ್ಟ್ ಪಂದ್ಯಗಳಲ್ಲಿ ಆಡದೆ ವಿಶ್ರಾಂತಿ ಪಡೆದರು. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಗಾಯಗೊಂಡು ಚೇತರಿಸಿಕೊಂಡ ಬುಮ್ರಾ, “ಇಂಗ್ಲೆಂಡ್ ಸರಣಿ ಶುರುವಾಗೋ ಮೊದ್ಲೇ 3 ಪಂದ್ಯಗಳಲ್ಲಿ ಮಾತ್ರ ಆಡ್ತೀನಿ” ಅಂತ ಬಿಸಿಸಿಐಗೆ ಮೊದಲೇ ಹೇಳಿದ್ರಂತೆ.
24
ಅದರಂತೆ ಬುಮ್ರಾ ಆರೋಗ್ಯ ಮತ್ತು ಕೆಲಸದ ಹೊರೆ ನೋಡಿ 2 ಟೆಸ್ಟ್ ಪಂದ್ಯಗಳಲ್ಲಿ ವಿಶ್ರಾಂತಿ ಕೊಡಲಾಯ್ತು. 5ನೇ ಟೆಸ್ಟ್ ಮುಗಿಯೋ ಮೊದ್ಲೇ ಬುಮ್ರಾ ತಂಡದಿಂದ ಬಿಡುಗಡೆ ಪಡೆದು ವಾಪಸ್ ಬಂದ್ರು. ಇದರ ಬೆನ್ನಲ್ಲೇ ಇಂಗ್ಲೆಂಡ್ ಸರಣಿಯಲ್ಲಿ ಬುಮ್ರಾ ಪೂರ್ತಿ ಆಡದೇ ಇದ್ದಿದ್ದಕ್ಕೆ ಟೀಕೆಗಳು ಬಂದವು.
34
ಇಂಗ್ಲೆಂಡ್ ಸರಣಿಯಲ್ಲಿ 3 ಪಂದ್ಯ ಮಾತ್ರ ಆಡ್ತೀನಿ ಅಂತ ಬುಮ್ರಾ ಹೇಳಿದ್ದರಿಂದ ಬಿಸಿಸಿಐ ಸಿಟ್ಟಾಗಿದೆ ಅಂತ ಗೊತ್ತಾಗಿದೆ. ಹೀಗಾಗಿ ಸ್ಟಾರ್ ಆಟಗಾರರು ತಮಗೆ ಇಷ್ಟ ಬಂದ ಪಂದ್ಯ ಆಡೋಕೆ ಆಗಲ್ಲ, ಒಂದು ಟೆಸ್ಟ್ ಸರಣಿಯಲ್ಲಿ ಆಯ್ಕೆ ಆದ್ರೆ ಎಲ್ಲಾ ಪಂದ್ಯ ಆಡ್ಬೇಕು ಅಂತ ಬಿಸಿಸಿಐ ಹೊಸ ನಿಯಮ ತರೋ ಯೋಚನೆಯಲ್ಲಿದೆ.
ಬುಮ್ರಾ ನಡೆಯಿಂದ ಬೇಸತ್ತ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದೆ ಅಂತ ಹೇಳಲಾಗ್ತಿದೆ. ಒಂದು ಟೆಸ್ಟ್ ಸರಣಿಯಲ್ಲಿ ಆಟಗಾರ ಆಯ್ಕೆ ಆದ್ರೆ, ಆ ಸರಣಿಯ ಎಲ್ಲಾ ಪಂದ್ಯಗಳಿಗೂ ಆಡೋಕೆ ಸಿದ್ಧ ಇರಬೇಕು. ಕೆಲವು ಪಂದ್ಯಗಳಲ್ಲಿ ಮಾತ್ರ ಆಡ್ತೀನಿ ಅಂದ್ರೆ, ಆ ಸರಣಿಯಲ್ಲೇ ಅವಕಾಶ ಸಿಗಲ್ಲ ಅನ್ನೋದು ಬಿಸಿಸಿಐ ನಿಲುವು. ಈ ನಿರ್ಧಾರಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.