2025ರ ಐಪಿಎಲ್ ಸೀಸನ್ ಚೆನ್ನೈ ಸೂಪರ್ ಕಿಂಗ್ಸ್‌ಗೆ ದುಃಸ್ವಪ್ನವಾಗಿತ್ತು. ಈ ಬಾರಿಯ ಐಪಿಎಲ್ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದ ಮೊದಲ ತಂಡ ಎನ್ನುವ ಕುಖ್ಯಾತಿಗೆ ಧೋನಿ ಪಡೆ ಪಾತ್ರವಾಗಿತ್ತು. ಹೀಗಿದ್ದು ಸಿಎಸ್‌ಕೆ ಪರ ಉತ್ತಮ ಪ್ರದರ್ಶನ ತೋರಿರುವ ಕೆಲವು ಆಟಗಾರರನ್ನು ಫ್ರಾಂಚೈಸಿ ರೀಟೈನ್ ಮಾಡಿಕೊಳ್ಳುವ ಸಾಧ್ಯತೆಯಿದೆ.
5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದ ಮೊದಲ ತಂಡ ಎನ್ನುವ ಕುಖ್ಯಾತಿಗೆ ಪಾತ್ರವಾಗಿದೆ. ಸ್ವತಃ ಧೋನಿ ನಾಯಕತ್ವ ವಹಿಸಿಕೊಂಡರೂ ಪರಿಸ್ಥಿತಿ ಬದಲಾಗಲಿಲ್ಲ.
27
ಸೋಲುಗಳ ಪ್ರಪಾತಕ್ಕೆ ಬಿದ್ದರೂ ಚೆನ್ನೈ ಕಮ್‌ಬ್ಯಾಕ್ ಮಾಡುವ ಸೂಚನೆಯನ್ನು ಕೊನೆಯ ಪಂದ್ಯಗಳು ನೀಡಿವೆ. ಮುಂದಿನ ಋತುವಿನಲ್ಲಿ ಚೆನ್ನೈ ಉಳಿಸಿಕೊಳ್ಳಬಹುದಾದ ಕೆಲವು ಆಟಗಾರರನ್ನು ತಿಳಿದುಕೊಳ್ಳೋಣ.
37
1. ಋತುರಾಜ್ ಗಾಯಕ್ವಾಡ್
ಗಾಯದಿಂದಾಗಿ ಈ ಐಪಿಎಲ್ ಸೀಸನ್‌ನಿಂದ ಹೊರಬಿದ್ದ ಋತುರಾಜ್ ಗಾಯಕ್ವಾಡ್ ಯಾವುದೇ ಸಂದರ್ಭದಲ್ಲಿ ಬೇಕಿದ್ದರೂ ಸಿಎಸ್‌ಕೆ ಆಸ್ತಿಯಾಗಬಲ್ಲ. ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಗಾಯಕ್ವಾಡ್ ಅವರನ್ನು ಫ್ರಾಂಚೈಸಿ ತನ್ನಲ್ಲೇ ಉಳಿಸಿಕೊಳ್ಳಲಿದೆ.
ಋತುರಾಜ್ ಗಾಯಕ್ವಾಡ್ ಅವರಿಗೆ ಬದಲಿಯಾಗಿ ತಂಡಕ್ಕೆ ಬಂದ ಆಟಗಾರ. ಈ ಋತುವಿನಲ್ಲಿ ಚೆನ್ನೈಗೆ ಉತ್ತಮ ಆರಂಭ ಒದಗಿಸಿದ ಈ ಹದಿನೇಳು ವರ್ಷದ ಆಟಗಾರ ಬೆಂಗಳೂರಿನ ವಿರುದ್ಧದ ಇನ್ನಿಂಗ್ಸ್ ಉದಾಹರಣೆ. ಹೀಗಾಗಿ ಆಯುಷ್ ಕೂಡಾ ಸಿಎಸ್‌ಕೆ ಫ್ರಾಂಚೈಸಿ ರೀಟೈನ್ ಮಾಡುವ ಸಾಧ್ಯತೆ ಹೆಚ್ಚಿದೆ.
57
3. ನೂರ್ ಅಹ್ಮದ್
16 ವಿಕೆಟ್‌ಗಳೊಂದಿಗೆ ಈ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಸ್ಪಿನ್ನರ್. ಬೌಲಿಂಗ್‌ನಲ್ಲಿ ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ಅವರಿಗಿಂತ ಶ್ರೇಷ್ಠ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
67
4. ಡೆವಾಲ್ಡ್ ಬ್ರೆವಿಸ್
ಋತುವಿನ ಮಧ್ಯದಲ್ಲಿ ಚೆನ್ನೈಗೆ ಸೇರಿದ ಆಟಗಾರ. ಬ್ರೆವಿಸ್ ಮಧ್ಯಮ ಕ್ರಮಾಂಕಕ್ಕೆ ಬಂದ ನಂತರ ಚೆನ್ನೈನ ಬ್ಯಾಟಿಂಗ್ ಬಲಿಷ್ಠವಾಯಿತು. ಹೀಗಾಗಿ ಸಿಎಸ್‌ಕೆ ಫ್ರಾಂಚೈಸಿ ಬ್ರೆವಿಸ್ ಅವರನ್ನು ರೀಟೈನ್ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
77
5. ಖಲೀಲ್ ಅಹ್ಮದ್
ಈ ಋತುವಿನಲ್ಲಿ ಚೆನ್ನೈನ ವೇಗದ ಬೌಲಿಂಗ್ ಅಸ್ತ್ರವಾಗಿ ಹೊರಹೊಮ್ಮಿದ ಬೌಲರ್ ಎಂದರೆ ಅದು ಖಲೀಲ್ ಅಹ್ಮದ್. ಇದುವರೆಗೂ ಖಲೀಲ್ 14 ವಿಕೆಟ್ ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಪವರ್‌ಪ್ಲೇಯಲ್ಲಿನ ಸ್ಥಿರ ಪ್ರದರ್ಶನ ಎದುರಾಳಿಗಳನ್ನು ಒತ್ತಡಕ್ಕೆ ಸಿಲುಕಿಸಿತು.