ಭಾರತ-ಪಾಕ್ ಮ್ಯಾಚ್ ನಿಂತಿದ್ದ ಐಪಿಎಲ್ ಈಗ ವಾಪಸ್ ಶುರುವಾಗ್ತಿದೆ. ಆರ್‌ಸಿಬಿ-ಕೆಕೆಆರ್ ಮ್ಯಾಚ್ ನಾಳೆ ನಡೆಯಲಿದೆ. ವಿದೇಶಿ ಆಟಗಾರರು ವಾಪಸ್ ಬಂದಿದ್ದಾರೆ.
ಫಿಲ್ ಸಾಲ್ಟ್, ಜೇಕಬ್ ಬೆಥೆಲ್, ಲಿಯಾಮ್ ಲಿವಿಂಗ್‌ಸ್ಟೋನ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಲುಂಗಿ ಎನ್‌ಗಿಡಿ ಬೆಂಗಳೂರಿಗೆ ಬಂದು ಪ್ರಾಕ್ಟೀಸ್ ಶುರು ಮಾಡಿದ್ದಾರೆ.
ಫಿಲ್ ಸಾಲ್ಟ್, ಟಿಮ್ ಡೇವಿಡ್ ಫಾರ್ಮ್‌ನಲ್ಲಿದ್ದಾರೆ. ಲುಂಗಿ ಎನ್‌ಗಿಡಿ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಹೋಗ್ತಾರೆ. ಹೇಜಲ್‌ವುಡ್ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.
ರಜತ್ ಪಾಟೀದಾರ್ ಗಾಯದಿಂದ ಚೇತರಿಸಿಕೊಂಡಿದ್ದಾರೆ. ನಾಳಿನ ಪಂದ್ಯದಲ್ಲಿ ಆಡ್ತಾರಾ ಅನ್ನೋದು ಶನಿವಾರ ಬೆಳಗ್ಗೆ ತಿಳಿಯಲಿದೆ ಎಂದು ವರದಿಯಾಗಿದೆ.
Naveen Kodase