ಕ್ರಿಕೆಟರ್‌ಗಳಾದ ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಆಯ್ಯರ್ ಇತ್ತೀಚೆಗೆ ಕಾಮಿಡಿಯನ್ ಕಪಿಲ್ ಶರ್ಮಾ ನಿರೂಪಣೆಯ ದಿ ಗ್ರೇಟ್ ಇಂಡಿಯಾ ಕಪಿಲ್ ಶೋಗೆ ಆಗಮಿಸಿದ್ದರು.
ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುವ ಈ ಶೋದಲ್ಲಿ ಭಾಗವಹಿಸಿದ ಈ ಕ್ರಿಕೆಟಿಗರು ಹಲವು ಸ್ವಾರಸ್ಯಕರ ಘಟನೆಗಳನ್ನು ಶೋದಲ್ಲಿ ಹಂಚಿಕೊಂಡಿದ್ದಾರೆ. ಈ ಶೋದಲ್ಲಿ ಕಪಿಲ್ ಶರ್ಮಾ ಈ ಕ್ರಿಕೆಟಿಗರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಜೊತೆಗೆ ಮ್ಯಾಚ್ ವೇಳೆ ಶ್ರೇಯಸ್ ಅಯ್ಯರ್ ಅವರತ್ತ ಮಹಿಳಾಮಣಿಗಳು ತಲೆದೂಗುವ ಬಗ್ಗೆಯೂ ಕೇಳಿದ್ದು, ಶ್ರೇಯಸ್ ಸ್ವಾರಸ್ಯಕರವಾದ ಉತ್ತರ ನೀಡಿದ್ದಾರೆ.
ಕ್ರಿಕೆಟ್ ಮ್ಯಾಚ್‌ಗಳ ವೇಳೆ ಶ್ರೇಯಸ್ ಅಯ್ಯರ್ ಸಿಕ್ಸ್, ಫೋರ್ ಬಾರಿಸಿದಾಗಲೆಲ್ಲಾ ಸ್ಟೇಡಿಯಂನಲ್ಲಿರುವ ಕ್ಯಾಮರಾಗಳೆಲ್ಲವೂ 'ಶ್ರೇಯಸ್ ನನ್ನ ಮದ್ವೆಯಾಗು' ಎಂದು ಹೋಲ್ಡಿಂಗ್ಸ್‌ಗಳನ್ನು ಹಿಡಿದು ಸ್ಟೇಡಿಯಂನಲ್ಲಿ ನಿಂತಿರುವ ಹೆಣ್ಣು ಮಕ್ಕಳತ್ತ ಪೋಕಸ್ ಮಾಡುತ್ತವೆ.
ಮ್ಯಾಚ್ ನೋಡುತ್ತಿರುವವರೆಲ್ಲಾ ಇದನ್ನು ಗಮನಿಸಿರಬಹುದು. ಇದೇ ವಿಚಾರವನ್ನು ಕಪಿಲ್ ಶರ್ಮಾ ಅವರು ಈ ಶೋದಲ್ಲಿ ಪ್ರಸ್ತಾಪಿಸಿದ್ದು, ಈ ಬಗ್ಗೆ ಶ್ರೇಯಸ್ ಅಯ್ಯರ್ ಬಗ್ಗೆ ಕೇಳಿದ್ದಾರೆ.
ಮೈದಾನದಲ್ಲಿ ಶ್ರೇಯಸ್ ಅಯ್ಯರ್ ಬೌಂಡರಿ ಬಾರಿಸಿದಾಗಲೆಲ್ಲಾ ಕ್ಯಾಮರಾ ಮ್ಯಾನ್‌ಗಳು, ಸ್ಟೇಡಿಯಂನ ಗ್ಯಾಲರಿಯಲ್ಲಿ 'ಶ್ರೇಯಸ್ ಮ್ಯಾರಿ ಮೀ' ಎಂದು ಪೋಸ್ಟರ್‌ಗಳನ್ನು ಹಿಡಿದುಕೊಂಡಿರುವ ಹುಡುಗಿಯರತ್ತ ಕ್ಯಾಮರಾ ಪೋಕಸ್ ಮಾಡುತ್ತಾರೆ.
ಅವರು (ಶ್ರೇಯಸ್ ಅಯ್ಯರ್) ಬ್ಯಾಚುಲರ್ ಬೇರೆ, ಹೀಗಿರುವಾಗ ನೀವು ಯಾವತ್ತಾದರೂ ಹೀಗೆ ಪೋಸ್ಟರ್ ಹಿಡಿದ ಹುಡುಗಿಯರು ಇರುವ ಜಾಗವನ್ನು ಹುಡುಕುವ ಪ್ರಯತ್ನ ಮಾಡಿದ್ದೀರಾ? ಅಥವಾ ಕ್ಯಾಮರಾ ಮ್ಯಾನ್‌ಗಳ ಬಳಿ ಅವರ ಬಗ್ಗೆ ತಿಳಿಯಲು ಪ್ರಯತ್ನಪಟ್ಟಿದ್ದೀರಾ ಎಂದು ಶ್ರೇಯಸ್ ಅಯ್ಯರ್ ಅವರನ್ನು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಶ್ರೇಯಸ್ ಅಯ್ಯರ್, ನಾನು ಮೊದಲ ಬಾರಿ ಐಪಿಎಲ್ ಆಟ ಆಡುತ್ತಿದ್ದಾಗ, ಒಬ್ಬಳು ಸುಂದರವಾದ ಹುಡುಗಿ ಸ್ಟೇಡಿಯಂನ ಸ್ಟ್ಯಾಂಡಿಂಗ್‌ನಲ್ಲಿ ಕುಳಿತಿದ್ದು, ನಾನು ಅವಳತ್ತ ಹೆಲೋ ಅಂತ ಕೈ ಬೀಸಿದ್ದೆ,
ಇದು ವರ್ಷಗಳ ಹಿಂದೆ, ಮ್ಯಾಚ್‌ನ ನಂತರ ಆಕೆ ಫೇಸ್‌ಬುಕ್‌ನಲ್ಲಿ ಮೆಸೇಜ್ ಮಾಡಬಹುದು ಎಂದು ನಾನು ಕಾಯುತ್ತಿದ್ದೆ, ಮತ್ತು ಅದಕ್ಕಾಗಿಯೇ ಆಗಾಗ ಫೇಸ್‌ಬುಕ್ ಚೆಕ್ ಮಾಡ್ತಾನೆ ಇರ್ತಿದ್ದೆ. ಸ್ಟೇಡಿಯಂನಲ್ಲಿ ಹುಡುಗಿರ ವಿಷಯದಲ್ಲಿ ಅದೊಂದೇ ಘಟನೆ ಸಂಭವಿಸಿದ್ದು ಎಂದು ಶ್ರೇಯಸ್ ಅಯ್ಯರ್ ಹೇಳಿಕೊಂಡಿದ್ದಾರೆ.
ಇದೇ ಶೋದಲ್ಲಿ ಶ್ರೇಯಸ್ ಅಯ್ಯರ್ ಕಾರ್ಡ್ ಟ್ರಿಕ್ ಆಟವಾಡಿದ್ದು, ಕಾರ್ಡ್‌ಗಳನ್ನು ಮಿಕ್ಸ್ ಮಾಡಿ ಅದರಲ್ಲಿ ಒಂದು ಕಾರ್ಡ್ ಅನ್ನು ಆಯ್ಕೆ ಮಾಡುವಂತೆ ಕಪಿಲ್ ಶರ್ಮಾಗೆ ಹೇಳಿದ್ದಾರೆ. ಹಾಗೆಯೇ ಕೊನೆಯಲ್ಲಿ ಕಪಿಲ್ ಶರ್ಮಾ ಆಯ್ಕೆ ಮಾಡಿದ ಕಾರ್ಡ್ ಅನ್ನು ಮೊದಲೇ ಶ್ರೇಯಸ್ ಅಯ್ಯರ್ ಕೈಯಲ್ಲಿ ಹಿಡಿದು ಅಚ್ಚರಿ ಮೂಡಿಸಿದ್ದರು. ಪ್ರಸ್ತುತ ಐಪಿಎಲ್‌ನಲ್ಲಿ ಶ್ರೇಯಸ್ ಅಯ್ಯರ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.