ಧೋನಿ, ಕೊಹ್ಲಿ ಹೇರ್‌ಕಟ್‌ ಗೆ ಇಷ್ಟು ರೇಟಾ? ಆಲಿಮ್ ಹಕೀಂ ಹೇಳ್ತಾರೆ ಕೇಳಿ

First Published | Apr 6, 2024, 6:45 PM IST

ಸೆಲಿಬ್ರಿಟಿ ಸ್ಪೆಷಲಿಷ್ಟ್ ಆಲಿಮ್ ಹಕೀಂ, ಹಲವು ದಿಗ್ಗಜ ಕ್ರಿಕೆಟಿಗರು ಹಾಗೂ ಬಾಲಿವುಡ್ ಹೀರೋಗಳ ಹೆರ್‌ಸ್ಟೈಲ್ ಮಾಡುವುದರಲ್ಲಿ ಎತ್ತಿದ ಕೈ. ಇದೀಗ ಆಲಿಮ್ ಹಕೀಂ, ಒಂದು ಹೇರ್‌ಕಟ್‌ಗೆ ಎಷ್ಟು ಚಾರ್ಜ್ ಮಾಡುತ್ತಾರೆ ಎನ್ನುವುದರ ಸೀಕ್ರೇಟ್ ಬಿಚ್ಚಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
 

ಸದ್ಯ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಭರ್ಜರಿಯಾಗಿ ಸಾಗುತ್ತಿದೆ. ಹೀಗಿರುವಾಗಲೇ ಕ್ರಿಕೆಟ್ ದಂತಥೆಗಳೆನಿಸಿರುವ ಎಂ ಎಸ್ ಧೋನಿ, ವಿರಾಟ್ ಕೊಹ್ಲಿ ಹೊಸ ಹೇರ್‌ಸ್ಟೈಲ್‌ನಲ್ಲಿ ಕಣಕ್ಕಿಳಿಯುವ ಮೂಲಕ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಹುತೇಕ ಕ್ರಿಕೆಟಿಗರು ಹಾಗೂ ಬಾಲಿವುಡ್ ತಾರೆಗಳು ಪ್ರಖ್ಯಾತ ಹೇರ್‌ಸ್ಟೈಲ್ ಸ್ಪೆಷಲಿಷ್ಟ್ ಆಲಿಮ್ ಹಕೀಂ ಅವರ ಬಳಿಯೇ ತಮ್ಮ ಕೇಶವಿನ್ಯಾಸವನ್ನು ಮಾಡಿಸುತ್ತಾರೆ ಎನ್ನುವುದು ಈಗ ಗುಟ್ಟಾಗಿಯೇನೂ ಉಳಿದಿಲ್ಲ.

Tap to resize

Brut ಎನ್ನುವ ವೆಬ್‌ಸೈಟ್‌ವೊಂದರ ಸಂದರ್ಶನದಲ್ಲಿ ಆಲಿಮ್ ಹಕೀಂ, ತಾವೊಬ್ಬ ಸೆಲಿಬ್ರಿಟಿ ಹೇರ್‌ಸ್ಟೈಲಿಷ್ಟ್ ಆಗಿ ಬೆಳೆದುಬಂದಿದ್ದು ಹೇಗೆ? ಅವರಿಗೆ ಎಷ್ಟು ಚಾರ್ಜ್ ಮಾಡುತ್ತೇನೆ ಎನ್ನುವ ವಿಚಾರ ಬಾಯ್ಬಿಟ್ಟಿದ್ದಾರೆ.

ಆಲಿಮ್ ಹಕೀಂ ಬಾಲಿವುಡ್ ಸ್ಟಾರ್ ರಣ್ಬೀರ್ ಕಪೂರ್ ಅವರಿಂದ ಹಿಡಿದು ಖ್ಯಾತ ಕ್ರಿಕೆಟಿಗರಾದ ಎಂ ಎಸ್ ಧೋನಿ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಹಾಗೂ ರೋಹಿತ್ ಶರ್ಮಾ ಅವರಂತಹ ಕ್ರಿಕೆಟಿಗರಿಗೆ ಹೇರ್‌ಸ್ಟೈಲ್ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಇನ್ನು ಶಾಹೀದ್ ಕಪೂರ್ ಹಾಗೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ಹಾರ್ದಿಕ್ ಪಾಂಡ್ಯ ಕೂಡಾ ಆಲಿಮ್ ಹಕೀಂ ಅವರ ಹೇರ್‌ಸ್ಟೈಲ್ ಮಾಡುವ ರೀತಿಗೆ ಮಾರು ಹೋಗಿದ್ದಾರೆ. ಜತೆಗೆ ಹಲವು ಬಾರಿ ಸೋಷಿಯಲ್ ಮೀಡಿಯಾದಲ್ಲೂ ಈ ಖುಷಿ ಹಂಚಿಕೊಂಡಿದ್ದಾರೆ.

"ನಾನು ಮಾಡುವ ಹೇರ್‌ಸ್ಟೈಲ್ ಚಾರ್ಜ್ ತುಂಬಾ ಸಿಂಪಲ್. ಹಾಗೆಯೇ ನಾನು ಎಷ್ಟು ಚಾರ್ಜ್ ಮಾಡುತ್ತೇನೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ನಾನು ಮಾಡುವ ಹೇರ್‌ಕಟ್‌ನ ಮಿನಿಮಮ್ ಚಾರ್ಜ್ ಒಂದು ಲಕ್ಷ ರುಪಾಯಿಗಳಿಂದ ಆರಂಭವಾಗುತ್ತದೆ" ಎಂದು ಆಲಿಮ್ ಹಕೀಂ ಹೇಳಿದ್ದಾರೆ.

Latest Videos

click me!