ಏಕದಿನ ವಿಶ್ವಕಪ್ ಟೂರ್ನಿಗೆ ಒಂದೂವರೆ ವರ್ಷ ಬಾಕಿ ಇದೆ. ಆದರೆ ಐಸಿಸಿ ಇದೀಗ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಟಿ20 ಜನಪ್ರಿಯತೆಯಿಂದ ಇದೀಗ ಏಕದಿನ ಮಾದರಿಗೆ ಅಂತ್ಯ ಹಾಡಿ, ವರ್ಲ್ ಟಿ20 ಕ್ಲಬ್ ಚಾಂಪಿಯನ್‌ಶಿಪ್ ಟಿ20 ಟೂರ್ನಿಗೆ ಐಸಿಸಿ ಪ್ಲಾನ್ ಹಾಕಿದೆ.
ಕ್ರಿಕೆಟ್ ತನ್ನ ಜನಪ್ರಿಯತೆ ಹೆಚ್ಚಿಸಿಕೊಂಡಿದೆ. ಹಲವು ದೇಶಗಳು ಕ್ರಿಕೆಟ್ ತಂಡ ಕಟ್ಟಿಕೊಂಡಿದೆ. ಒಲಿಂಪಿಕ್ಸ್ ವರೆಗೂ ಕ್ರಿಕೆಟ್ ವಿಸ್ತಾರಗೊಂಡಿದೆ. ಆದರೆ ಸದ್ಯ ಟಿ20 ಮಾದರಿ ಕ್ರಿಕೆಟ್ ಭಾರಿ ಜನಪ್ರಿಯತೆ ಪಡೆದುಕೊಂಡಿದೆ. ಇದರಿಂದ ಏಕದಿನ ಕ್ರಿಕೆಟ್ ಮೇಲೆ ಕರಿನೆರಳು ಬಿದ್ದಿದೆ. ಇದೀಗ ಐಸಿಸಿ ಹಂತ ಹಂತವಾಗಿ ಏಕದಿನ ಕ್ರಿಕೆಟ್ ಸರಣಿಗಳ ಸಂಖ್ಯೆ, ಪಂದ್ಯಗಳ ಸಂಖ್ಯೆ ಕಡಿತಗೊಳಿಸಿ ಗುಡ್ ಬೈ ಹೇಳಲು ಮುಂದಾಗಿದೆ.
26
ಲೀಗ್ ಟೂರ್ನಿ ಆಯೋಜಿಸಲು ಐಸಿಸಿ ಪ್ಲಾನ್
ಐಸಸಿ ಟೆಸ್ಟ್, ಏಕದಿನ ಹಾಗೂ ಟಿ20 ಮಾದರಿಯಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯುತ್ತಿದೆ. ಆದರೆ ಟಿ20 ಕ್ರಿಕೆಟ್ ಜನಪ್ರಿಯತೆ ಹೆಚ್ಚಿರುವ ಕಾರಣ ಹಾಗೂ ಏಕದಿನಕ್ಕೆ ಅಭಿಮಾನಿಗಳು ನಿರಾಸಕ್ತಿ ತೋರುತ್ತಿರುವ ಕಾರಣ ಏಕದಿನ ಪಂದ್ಯವನ್ನು ಸ್ಥಗಿತಗೊಳಿಸಲು ಪ್ಲಾನ್ ಮಾಡಿದೆ. ಇಷ್ಟೇ ಅಲ್ಲ ಪ್ರತಿ ಕ್ರಿಕೆಟ್ ದೇಶಗಳು ತಮ್ಮದೇ ಆದ ಲೀಗ್ ಟೂರ್ನಿ ಆಯೋಜಿಸುತ್ತಿದೆ. ಇದೀಗ ಐಸಿಸಿ ಕೂಡ ವಿಶ್ವ ಕ್ಲಬ್ ಟಿ20 ಚಾಂಪಿಯನ್‌ಶಿಪ್ ಆಯೋಜನೆಗೆ ಮುಂದಾಗಿದೆ.
36
CLT20 ವಿಂಡೋದಲ್ಲಿ ಕ್ಲಬ್ ಟಿ20 ಟೂರ್ನಿ
12 ಐಸಿಸಿ ತಂಡಗಳ ಟಿ20 ವಿಶ್ವ ಚಾಂಪಿಯನ್‌ಶಿಪ್ ಟೂರ್ನಿ ಆಯೋಜಿಸಲು ಐಸಿಸಿ ಪ್ಲಾನ್ ಮಾಡುತ್ತಿದೆ.ಇದು ಫ್ರಾಂಚೈಸಿ ಆಧಾರಿತ ಲೀಗ್ ಮಾದರಿಯಲ್ಲೇ ಇರಲಿದೆ. ಸದ್ಯ ಚಾಂಪಿಯನ್ಸ್ ಲೀಗ್ (CLT20) ಟೂರ್ನಿ ಸ್ಥಗಿತಗೊಂಡಿರುವ ಕಾರಣ ಈ ವಿಂಡೋ ಲಭ್ಯವಿದೆ. ಇದರ ಹಕ್ಕು ಬಿಸಿಸಿಐ ಬಳಿ ಇದ್ದರೂ ಇದೇ ಅವಧಿಯಲ್ಲಿ ಐಸಿಸಿ ಚಾಂಪಿಯನ್ಸ್ ಕ್ಲಬ್ ಟಿ20 ಟೂರ್ನಿ ಆಯೋಜಿಸಲು ಮುಂದಾಗುತ್ತಿದೆ. ಬಿಸಿಸಿಐಗೆ ಸಿಂಹಪಾಲು ಸಿಗಲಿದೆ.
ಐಸಿಸಿ ವಾರ್ಷಿಕ ಸಾಮಾನ್ಯ ಸಭೆ ಜುಲೈ 8 ರಂದು ದುಬೈನಲ್ಲಿ ನಡೆಯಲಿದೆ.ಈ ಸಭೆಯಲ್ಲಿ ಭವಿಷ್ಯದ ಕ್ರಿಕೆಟ್ ಮಾದರಿ, ಟೂರ್ನಿ ಕುರಿತು ಸಂಪೂರ್ಣ ವರದಿ ಚರ್ಚೆಯಾಗಲಿದೆ. ಈ ಚರ್ಚೆಯಲ್ಲಿ ಏಕದಿನ ಮಾದರಿಗೆ ಹಂತ ಹಂತವಾಗಿ ಅಂತ್ಯಹಾಡಿ ಟಿ20 ಲೀಗ್ ಟೂರ್ನಿ ರೀತಿಯ ಸರಣಿ ಆಯೋಸುವ ಕುರಿತು ಐಸಿಸಿ ಚರ್ಚಿಸಲಿದೆ.
56
2031ರಿಂದ ಜಾರಿಗೆ ಬರವು ಸಾಧ್ಯತೆ
ಸದ್ಯ ಐಸಿಸಿಯ ಹಲವು ಟೂರ್ನಿಗಳು, ಇನ್ನು ದ್ವಿಪಕ್ಷೀಯ ಏಕದಿನ ಸರಣಿಗಳು 2031ರ ವರೆಗೆ ಆಯೋಜನೆಗೊಂಡಿದೆ. ಹೀಗಾಗಿ 2031ರ ಬಳಿಕ ಏಕದಿನ ಪಂದ್ಯ ನಡೆಯಲಿದೆ. ಆದರೆ ಏಕದಿನ ಸರಣಿಯಲ್ಲಿ ಪಂದ್ಯಗಳ ಸಂಖ್ಯೆ ಕಡಿತಗೊಳ್ಳುವ ಸಾಧ್ಯತೆ ಇದೆ. ಬಳಿಕ ನಿಧಾನವಾಗಿ ಮಾಯವಾಗಲಿದೆ.
66
ಆರ್ ಅಶ್ವಿನ್ ತೀವ್ರ ವಿರೋಧ
ಏಕದಿನ ಮಾದರಿಗೆ ಅಂತ್ಯ ಹಾಡುವ ನಿರ್ಧಾರ, ಚರ್ಚೆಗಳಿಗೆ ಮಾಜಿ ಕ್ರಿಕೆಟಿಗ ಆರ್ ಅಶ್ವಿನ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.. ಫೀಫಾ ವಿಶ್ವಕಪ್ ಫುಟ್ಬಾಲ್ ರೀತಿ, ನಾಲ್ಕು ವರ್ಷಗಳಿಗೊಮ್ಮೆ ಬರುವ ಐಸಿಸಿ ಏಕದಿನ ವಿಶ್ವಕಪ್ ಜನಪ್ರಿಯವಾಗಿದೆ. ಏಕದಿನ ಮಾದರಿ ಅಂತ್ಯಗೊಳಿಸಿದರೆ ಜನಪ್ರಿಯತೆ ಮಾತ್ರವಲ್ಲ ಕ್ರಿಕೆಟ್ ಕುಸಿಯಲಿದೆ ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.