ಭಾರತ ಇಂಗ್ಲೆಂಡ್ ಲೈವ್‌ನಲ್ಲಿ ಕಾಂಡೋಮ್ ಜಾಹೀರಾತು ಯಾಕೆ? ಪ್ರಶ್ನೆ ಕೇಳಿ ಪೇಚಿಗೆ ಸಿಲುಕಿದ ಮಾಜಿ ಕ್ರಿಕೆಟಿಗ

Published : Jul 06, 2026, 11:46 AM IST

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಪಂದ್ಯದ ನೇರ ಪ್ರಸಾರದಲ್ಲಿ ಬರುವ ಕಾಂಡೋಮ್ ಜಾಹೀರಾತಿಗೆ ಮಾಜಿ ಕ್ರಿಕೆಟಿಗ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಮಾಜಿ ಕ್ರಿಕೆಟಿಗನಿಗೆ ಅಭಿಮಾನಿಗಳು ಹಾಕಿದ ಮರು ಪ್ರಶ್ನೆಗೆ ಸೈಲೆಂಟ್ ಆಗಿದ್ದಾರೆ. 

PREV
16
ಮಾಜಿ ಕ್ರಿಕೆಟಿಗನ ಆಕ್ರೋಶ

ಟೀಂ ಇಂಡಿಯಾದ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸ ಟೀಕೆ, ಆರೋಪಗಳಲ್ಲೇ ಮುಳುಗಿದೆ. ಒಂದೆಡೆ ತಂಡದ ಸೋಲು, ಕಳಪೆ ಪ್ರದರ್ಶನದ ಟೀಕೆ ಜೋರಾಗಿದೆ. ಕೇವಲ ವೈಭವ್ ಸೂರ್ಯವಂಶಿ ಡೆಬ್ಯೂ ಒಂದೇ ಸಮಾಧಾನದ ಸಂಗತಿ. ಇನ್ನು ಸಂಜು ಸ್ಯಾಮ್ಸನ್ ಕೈಬಿಟ್ಟಿದ್ದು ಯಾಕೆ ಅನ್ನೋ ಪ್ರಶ್ನೆಗಳು ಎದುರಾಗಿದೆ. ಇದರ ನಡುವೆ ಇದೀಗ ಪಂದ್ಯದ ನೇರ ಪ್ರಸಾರ ಕುರಿತು ಮಾಜಿ ಕ್ರಿಕೆಟಿಗ, ಟಿಎಂಸಿ ಸಂಸದ ಕೀರ್ತಿ ಆಜಾದ್ ಕೇಳಿದ ಪ್ರಶ್ನೆಗೆ ಪರ ವಿರೋಧಗಳು ವ್ಯಕ್ತವಾಗಿದೆ.

26
ಕೀರ್ತಿ ಅಜಾದ್ ಆಕ್ರೋಶ ಏನು?

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಪಂದ್ಯವನ್ನು ಪುಣಾಣಿ ಮಕ್ಕಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ತಪ್ಪದೆ ನೋಡುತ್ತಾರೆ. ಆದರೆ ಈ ನೇರ ಪ್ರಸಾರದ ನಡುವೆ ಕಾಂಡೋಮ್ ಜಾಹೀರಾತು ನಾಚಿಗೇಡು ಎಂದು ಮಾಜಿ ಕ್ರಿಕೆಟಿಗ ಹಾಗೂ ಸಂಸದ ಕೀರ್ತಿ ಅಜಾದ್ ಪೋಸ್ಟ್ ಮಾಡಿದ್ದಾರೆ. ಈ ಕುರಿತು ಬಿಸಿಸಿಐ ಗಮನಹರಿಸಬೇಕು ಎಂದು ಸೂಚಿಸಿದ್ದಾರೆ.

36
ಕೀರ್ತಿ ಅಜಾದ್ ಕಾಳಜಿಗೆ ಪರ ವಿರೋಧ

ಮಕ್ಕಳು, ಶಾಲಾ ವಿದ್ಯಾರ್ಥಿಗಳು ಪಂದ್ಯ ನೇರ ಪ್ರಸಾರ ವೀಕ್ಷಿಸುವಾಗ ಕಾಂಡೋಮ್ ಜಾಹೀರಾತುಗಳು ಸೂಕ್ತವಲ್ಲ ಎಂದು ಕೀರ್ತಿ ಅಜಾದ್ ಹೇಳಿದ್ದಾರೆ. ಇದಕ್ಕೆ ಹಲವರು ಸಮ್ಮತಿ ಸೂಚಿಸಿದ್ದಾರೆ. ಪಂದ್ಯ ನೋಡಿ ಕ್ರಿಕೆಟಿರಾಗಲು ಹೊರಟ ಮಕ್ಕಳು ಬೇರೆ ದಿಕ್ಕಿನಲ್ಲಿ ಸಾಗುವ ಸಾಧ್ಯತೆ ಇದೆ ಎಂದ ಟಿಎಂಸಿ ಕಾರ್ಯಕರ್ತರು ಸೇರಿದಂತೆ ಹಲವು ಬೆಂಬಲಿಗರು ಕೀರ್ತಿ ಅಜಾದ್‌ಗೆ ಬೆಂಬಲ ಸೂಚಿಸಿದ್ದಾರೆ.

46
ಮಾಜಿ ಕ್ರಿಕೆಟಿಗ ಪೇಚಿಗೆ ಸಿಲುಕಿದ್ದು ಯಾಕೆ?

ನೇರ ಪ್ರಸಾರದಲ್ಲಿ ಕಾಂಡೋಮ್ ಜಾಹೀರಾತು ಪ್ರಶ್ನಿಸಿದ ಕೀರ್ತಿ ಅಜಾದ್‌ಗೆ ಹಲವರು ಮರು ಪ್ರಶ್ನೆ ಹಾಕಿದ್ದಾರೆ. ಸಂಸತ್ತಿನಲ್ಲಿ ಕುಳಿತು ವೇಪಿಂಗ್ ಮಾಡಿದ ನೀವು ಯಾವ ನೈತಿಕತೆಯಿಂದ ಪ್ರಶ್ನೇ ಕೇಳುತ್ತಿದ್ದೀರಿ ಎಂದಿದ್ದಾರೆ. ಸಂಸತ್ತಿನ ನೇರ ಪ್ರಸಾರವನ್ನು ಇಡೀ ದೇಶ, ವಿದೇಶ ನೋಡುತ್ತಿರುವಾಗ ವೇಪಿಂಗ್ (ಧೂಮಪಾನ) ಮಾಡಿ ಸಂಸತ್ತಿನ ಘನತೆ, ಭಾರತದ ಮಾನ ಮೂರು ಕಾಸಿಗೆ ಹರಾಜು ಹಾಕುವಾಗ ಈ ಕಾಳಜಿ ಇರಲಿಲ್ಲವೇ ಎಂದು ಹಲವರು ಪ್ರಶ್ನಿಸಿದ್ದಾರೆ.

56
ಸಂಕಷ್ಟಕ್ಕೆ ಸಿಲುಕಿದ ಕೀರ್ತಿ ಅಜಾದ್

ಸಂಸತ್ತಿನಲ್ಲಿ ವೇಪಿಂಗ್ ಪ್ರಕರಣ ಬಹುತೇಕರಿಂದ ಮಾಸಿ ಹೋಗಿತ್ತು. ಇದೀಗ ಕೀರ್ತಿ ಅಜಾದ್ ಜಾಹೀರಾತು ಪ್ರಶ್ನಿಸಿ ಇದೀಗ ಮತ್ತೆ ವೇಪಿಂಗ್ ಪ್ರಕರಣದ ವಿಡಿಯೋ, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡತೊಡಗಿದೆ. ಈ ಮೂಲಕ ಮತ್ತೆ ಕೋಲಾಹಲ ಮೂಡಿಸಿದೆ.

66
ಬಿಸಿಸಿಐಗೆ ಸಂಕಷ್ಟ

ಬಿಸಿಸಿಐ ನೇರ ಪ್ರಸಾರದ ಹಕ್ಕು ಪಡೆದಿರುವ ಡಿಸ್ನಿ ಸ್ಟಾರ್ ಹಾಗೂ ವಯಾಕಾಮ್ 18 ಜಾಹೀರಾತುಗಳ ಮೇಲೆ ನೇರ ನಿಯಂತ್ರಣ ಹೊಂದಿದೆ. ಬಿಸಿಸಿಐ ಪರೋಕ್ಷ ನಿಯಂತ್ರಣ ಹೊಂದಿದೆ. ಆದರೆ ಬಿಸಿಸಿಐ ಕೆಲ ಜಾಹೀರಾತುಗಳನ್ನು ಈಗಾಗಲೇ ನಿರ್ಬಂಧಿಸಿದೆ. ಇದೀಗ ಕಾಂಡೋಮ್ ಚರ್ಚೆಯಾಗುತ್ತಿರುವ ಕಾರಣ ಶೀಘ್ರದಲ್ಲೇ ಬಿಸಿಸಿಐ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories