ಕೊಹ್ಲಿ- ರೋಹಿತ್ 2027ರ ವಿಶ್ವಕಪ್ ಆಡ್ತಾರಾ? ಖಡಕ್ ಉತ್ತರ ಕೊಟ್ಟ ಶುಭ್‌ಮನ್ ಗಿಲ್

Published : Oct 10, 2025, 06:09 PM IST

ನವದೆಹಲಿ: ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಗೆ ರೋಹಿತ್ ಶರ್ಮಾ ಕೆಳಗಿಳಿಸಿ ಶುಭ್‌ಮನ್ ಗಿಲ್‌ಗೆ ಭಾರತ ಏಕದಿನ ತಂಡದ ನಾಯಕತ್ವ ಪಟ್ಟ ಕಟ್ಟಲಾಗಿದೆ. ಇದರ ಬೆನ್ನಲ್ಲೇ ರೋಹಿತ್-ಕೊಹ್ಲಿ ಕ್ರಿಕೆಟ್ ಬದುಕು ಮುಗಿಯಿತಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ. ಈ ಬಗ್ಗೆ ಗಿಲ್ ಖಡಕ್ ಉತ್ತರ ನೀಡಿದ್ದಾರೆ. 

PREV
16
ಗಿಲ್ ಭಾರತ ಏಕದಿನ ತಂಡದ ನೂತನ ನಾಯಕ

2027ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ತಂಡದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿದ್ದು, ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಟ್ಟ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಶುಭ್‌ಮನ್ ಗಿಲ್‌ಗೆ ಭಾರತ ಏಕದಿನ ತಂಡದ ನಾಯಕತ್ವ ಪಟ್ಟ ಕಟ್ಟಲಾಗಿದೆ.

26
ರೋಹಿತ್-ಕೊಹ್ಲಿ ನಿವೃತ್ತಿ ಗಾಸಿಫ್

ಇನ್ನು ಈಗಾಗಲೇ ಟೆಸ್ಟ್ ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿದಾಯ ಘೋಷಿಸಿದ್ದಾರೆ. ಇದೀಗ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ದಿಢೀರ್ ಕೆಳಗಿಳಿಸಿದ್ದರಿಂದ, ಆಸ್ಟ್ರೇಲಿಯಾ ಎದುರಿನ ಸರಣಿಯೇ ಈ ಇಬ್ಬರ ಪಾಲಿಗೆ ಕೊನೆಯ ಅಂತಾರಾಷ್ಟ್ರೀಯ ಸರಣಿ ಎನಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

36
ಗಾಳಿ ಸುದ್ದಿಗೆ ತೆರೆ ಎಳೆದ ಶುಭ್‌ಮನ್ ಗಿಲ್

ಇದೆಲ್ಲದರ ಹೊರತಾಗಿ ಭಾರತ ಏಕದಿನ ತಂಡದ ನಾಯಕ ಶುಭ್‌ಮನ್ ಗಿಲ್ ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದು, ರೋಹಿತ್ ಹಾಗೂ ಕೊಹ್ಲಿ ಫ್ಯಾನ್ಸ್‌ಗೆ ಗುಡ್‌ ನ್ಯೂಸ್ ನೀಡಿದ್ದಾರೆ.

46
ಕೊಹ್ಲಿ-ರೋಹಿತ್ 2027ರ ವಿಶ್ವಕಪ್ ಪ್ಲಾನ್‌ನಲ್ಲಿದ್ದಾರೆ

'2027ರ ಏಕದಿನ ವಿಶ್ವಕಪ್ ತಂಡದ ಯೋಜನೆಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಕೂಡ ಇದ್ದಾರೆ. ಅವರ ಅನುಭವ, ಕೌಶಲ್ಯವನ್ನು ನಿರ್ಲಕ್ಷಿಸುವುದಕ್ಕೆ ಸಾಧ್ಯವಿಲ್ಲ' ಎಂದು ಟೀಂ ಇಂಡಿಯಾ ಏಕದಿನ ತಂಡದ ನೂತನ ನಾಯಕ ಶುಭಮನ್ ಗಿಲ್ ಹೇಳಿದ್ದಾರೆ.

56
ಶುಭ್‌ಮನ್ ಗಿಲ್‌ಗೆ ಎದುರಾಯ್ತು ಮಿಲಿಯನ್ ಡಾಲರ್ ಪ್ರಶ್ನೆ

ಶುಭ್‌ಮನ್ ಗಿಲ್‌ ಅವರಿಗೆ, 2027ರ ವಿಶ್ವಕಪ್ ತಂಡದಲ್ಲಿ ಕೊಹ್ಲಿ ಮತ್ತು ರೋಹಿತ್ ಸ್ಥಾನ ಪಡೆಯಲಿದ್ದಾರೆಯೇ ಎಂಬ ಪ್ರಶ್ನೆಯೊಂದು ಮಾಧ್ಯಮದವರಿಂದ ಎದುರಾಯಿತು.

66
ಕೊಹ್ಲಿ-ರೋಹಿತ್ ಕೊಂಡಾಡಿದ ಗಿಲ್

ಇದಕ್ಕೆ ಉತ್ತರಿಸಿದ ಗಿಲ್, 'ಖಂಡಿತವಾಗಿಯೂ ಇರುತ್ತಾರೆ. ಅವರಿಬ್ಬರ ಅನುಭವ ಮತ್ತು ಅವರು ಭಾರತದ ಪರ ಆಡಿ ಗೆದ್ದ ಪಂದ್ಯಗಳ ಸಂಖ್ಯೆ ದೊಡ್ಡದು. ವಿಶ್ವದಲ್ಲೇ ಅಂತಹ ಕೌಶಲ್ಯ, ಗುಣಮಟ್ಟ, ಅನುಭವಿ ಆಟಗಾರರಿರುವುದು ತೀರಾ ಕಡಿಮೆ' ಎಂದಿದ್ದಾರೆ.

Read more Photos on
click me!

Recommended Stories