WPL ಆಟಗಾರ್ತಿಯರ ರೀಟೈನ್‌ಗೆ ಡೆಡ್‌ಲೈನ್ ಫಿಕ್ಸ್; ಆರ್‌ಸಿಬಿ ಯಾರನ್ನೆಲ್ಲಾ ಉಳಿಸಿಕೊಳ್ಳುತ್ತೆ?

Published : Oct 10, 2025, 12:37 PM IST

ಮುಂಬೈ: ನಾಲ್ಕನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಗೂ ಮುನ್ನ ಆಟಗಾರ್ತಿಯರ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕೂ ಮೊದಲು ಆಟಗಾರ್ತಿಯರ ರೀಟೈನ್‌ ಮಾಡಿಕೊಳ್ಳಲು ಡೆಡ್‌ಲೈನ್ ನೀಡಲಾಗಿದೆ. ಆರ್‌ಸಿಬಿ ಯಾರನ್ನು ಯಾರನ್ನು ರೀಟೈನ್ ಮಾಡಿಕೊಳ್ಳಲಿದೆ ಎನ್ನುವ ಕುತೂಹಲ ಜೋರಾಗಿದೆ.

PREV
17
ನವೆಂಬರ್ ಕೊನೆಯ ವಾರ ಡಬ್ಲ್ಯುಪಿಎಲ್ ಹರಾಜು?

ಮಹಿಳಾ ಐಪಿಎಲ್ ಖ್ಯಾತಿಯ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್)ನ ಆಟಗಾರ್ತಿಯರ ಮೆಗಾ ಹರಾಜು ಪ್ರಕ್ರಿಯೆ ನವೆಂಬರ್ ಕೊನೆ ವಾರದಲ್ಲಿ ನಡೆಯುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.

27
ರೀಟೈನ್ ಮಾಡಿಕೊಳ್ಳಲು ಡೆಡ್‌ಲೈನ್ ಫಿಕ್ಸ್

ಇದಕ್ಕೂ ಮುನ್ನ ಪ್ರತಿ ತಂಡಗಳಿಗೆ ಗರಿಷ್ಠ ಐವರು ಆಟಗಾರ್ತಿಯರನ್ನು ರಿಟೈನ್ ಮಾಡಿಕೊಳ್ಳಲು, ಅಂದರೆ ತಂಡದಲ್ಲೇ ಉಳಿಸಿಕೊಳ್ಳುವ ಅವಕಾಶ ನೀಡಲಾಗಿದೆ. ರಿಟೈನ್ ಪಟ್ಟಿ ಸಲ್ಲಿಕೆಗೆ ನ.5ರ ಗಡುವು ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

37
ಗರಿಷ್ಠ ಮೂವರು ಭಾರತೀಯ ಆಟಗಾರ್ತಿಯರನ್ನು ಉಳಿಸಿಕೊಳ್ಳಲು ಅವಕಾಶ

ವರದಿಗಳ ಪ್ರಕಾರ, ಪ್ರತಿ ತಂಡ ಗರಿಷ್ಠ ಮೂವರು ಭಾರತೀಯ ಆಟಗಾರ್ತಿಯರು, ಇಬ್ಬರು ವಿದೇಶಿಗರು, ಗರಿಷ್ಠ 2 ಅನ್‌ಕ್ಯಾಪ್ (ಅಂತಾರಾಷ್ಟ್ರೀಯ ಪಂದ್ಯವಾಡದ ಆಟಗಾರ್ತಿಯರನ್ನು ರಿಟೈನ್ ಮಾಡಬಹುದಾಗಿದೆ.

47
ಪ್ರತಿ ತಂಡಕ್ಕೆ 15 ಕೋಟಿ ಹರಾಜಿಗೆ ಬಳಸಲು ಅವಕಾಶ

ಒಂದು ವೇಳೆ ತಂಡ ಐವರನ್ನು ರಿಟೈನ್ ಮಾಡಿದರೆ, ಅದರಲ್ಲಿ ಕನಿಷ್ಠ ಒಬ್ಬರು ಅನ್‌ಕ್ಯಾಪ್ಡ್‌ ಆಟಗಾರ್ತಿ ಇರಬೇಕು. ಹರಾಜಿನಲ್ಲಿ ಪ್ರತಿ ತಂಡಕ್ಕೆ 15 ಕೋಟಿ ಬಳಸಬಹುದಾಗಿದೆ.

57
ರಿಟೈನ್‌ಗೆ ಐದು ಸ್ಪ್ಯಾಬ್ ನಿಗದಿ

ಆಟಗಾರ್ತಿಯರ ರಿಟೈನ್‌ಗೆ ಐದು ಸ್ಪ್ಯಾಬ್ ನಿಗದಿಪಡಿಸಲಾಗಿದೆ. ರಿಟೈನ್ ಮಾಡಿಕೊಳ್ಳುವ ಮೊದಲ ಆಟಗಾರ್ತಿಗೆ 3.5 ಕೋಟಿ, 2ನೇ ಆಟಗಾರ್ತಿಗೆ 2.5 ಕೋಟಿ, 3ನೇ ಆಟಗಾರ್ತಿಗೆ 1.75 ಕೋಟಿ, 4ನೇ ಆಟಗಾರ್ತಿಗೆ 1 ಕೋಟಿ, 5ನೇ ಆಟಗಾರ್ತಿಗೆ 50 ಲಕ್ಷ ನೀಡಬೇಕಾಗುತ್ತದೆ.

67
ರೀಟೈನ್‌ಗೆ ಗರಿಷ್ಠ 9.25 ಕೋಟಿ ಬಳಸಲು ಅವಕಾಶ

ರಿಟೈನ್‌ಗೆ ಗರಿಷ್ಠ 9.25 ಕೋಟಿ ರುಪಾಯಿ ಬಳಸಲು ಅವಕಾಶವಿದೆ. ಅನ್‌ಕ್ಯಾಪ್ಡ್ ಅಲ್ಲದೆ, ಇದೇ ಮೊದಲ ಬಾರಿ ರೈಟ್ ಟು ಮ್ಯಾಚ್ (ಆರ್‌ಟಿಎಂ) ಆಯ್ಕೆಯನ್ನೂ ನೀಡಲಾಗಿದೆ.

77
RCB ಯಾರನ್ನೂ ರೀಟೈನ್ ಮಾಡಿಕೊಳ್ಳಲಿದೆ?

ಇನ್ನು ಆರ್‌ಸಿಬಿ ತಂಡವು ಯಾರನ್ನೂ ರೀಟೈನ್ ಮಾಡಿಕೊಳ್ಳಲಿದೆ ಎನ್ನುವ ಕುತೂಹಲ ಜೋರಾಗಿದೆ. ಕೆಲ ಮಾಧ್ಯಮಗಳ ವರದಿ ಪ್ರಕಾರ ಆರ್‌ಸಿಬಿ ಫ್ರಾಂಚೈಸಿಯು ಸ್ಮೃತಿ ಮಂಧನಾ, ಎಲೈಸಿ ಪೆರ್ರಿ, ರಿಚಾ ಘೋಷ್, ಶ್ರೇಯಾಂಕ ಪಾಟೀಲ್ ಹಾಗೂ ಸೋಫಿ ಡಿವೈನ್ ರೀಟೈನ್ ಮಾಡಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Read more Photos on
click me!

Recommended Stories