ಸಾರಾ ಆಲಿ ಖಾನ್‌ , ಶುಭಮನ್‌ ಗಿಲ್‌ ಸಂಬಂಧ; ಸುಳಿವು ನೀಡಿದ ಸೋನಮ್ ಯಾರು?

First Published | Jan 21, 2023, 3:33 PM IST

ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಶುಭಮನ್ ಗಿಲ್ (Subhman Gill)  ಅವರು ತಮ್ಮ ದ್ವಿಶತಕದ ಹೊರತಾಗಿ ಇನ್ನೊಂದು ವಿಷಯದಿಂದಾಗಿ ಇತ್ತೀಚಿನ ದಿನಗಳಲ್ಲಿ ಮುಖ್ಯಾಂಶಗಳಲ್ಲಿದ್ದಾರೆ. ಶುಬ್ಮಾನ್ ಗಿಲ್ ಅವರ ಹೆಸರನ್ನು ಸೈಫ್ ಅಲಿ ಖಾನ್  (Sara Ali Khan) ಅವರ ಪುತ್ರಿ ಸಾರಾ ಅಲಿ ಖಾನ್ ಜೊತೆ ಕೇಳಿ ಬರುತ್ತಿದೆ. ಈಗ  ಪಂಜಾಬಿ ನಟಿ ಸೋನಂ ಬಾಜ್ವಾ ಈ ಇಬ್ಬರು ಡೇಟ್‌ ಮಾಡುತ್ತಿದ್ದಾರೆ ಎಂಬ ದೊಡ್ಡ  ಹಿಂಟ್‌ ನೀಡಿದ್ದಾರೆ. ಸಾರಾ-ಶುಭ್‌ಮನೆ ಜೊತೆಗೆ ಈ ಸೋನಂ ಸಹಾ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿದ್ದರೆ.

ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಮೊದ ಏಕದಿನ ಪಂದ್ಯದಲ್ಲಿ ಶುಭಮನ್ ದ್ವಿಶತಕ ಬಾರಿಸಿರುವ ವಿಡಿಯೋ ವೈರಲ್ ಆಗಿತ್ತು. ಈ ವೇಳೆ ಕ್ರಿಕೆಟಿಗನ ಅಭಿಮಾನಿಗಳು ಕ್ರೀಡಾಂಗಣದಲ್ಲಿ ‘ಸಾರ, ಸಾರಾ...’ ಎಂದು ಕೂಗುತ್ತಿರುವುದು ಕಂಡು ಬಂತು.

ಶುಬ್ಮನ್ ಗಿಲ್ ಮತ್ತು ಸಾರಾ ಅಲಿ ಖಾನ್ ನಡುವೆ ಏನೋ ನಡೆಯುತ್ತಿದೆ ಎಂದು ಅಭಿಮಾನಿಗಳು ಶಂಕಿಸಿದ್ದಾರೆ. ಪಂಜಾಬಿ ನಟಿ ಸೋನಂ ಬಾಜ್ವಾ ಇದೀಗ ಅಭಿಮಾನಿಗಳ ಈ ಅನುಮಾನವನ್ನು  ಬಲಪಡಿಸಿದ್ದಾರೆ.

Tap to resize

ಸೋನಮ್ ಬಾಜ್ವಾ ಮತ್ತು ಶುಬ್ಮನ್ ಗಿಲ್ ಅವರ ಫೋಟೋ ಟ್ವಿಟರ್‌ನಲ್ಲಿ ಕಾಣಿಸಿಕೊಂಡಿದೆ, ಇದರಲ್ಲಿ ಇಬ್ಬರೂ ಹಸ್ತಲಾಘವ ಮಾಡುತ್ತಿದ್ದಾರೆ. ಈ ಫೋಟೋಗೆ ಸೋನಂ ಬಾಜ್ವಾ 'ಸಾರಾ ಕಾ ಸಾರಾ ಜೂಟ್‌' ಎಂದು ಕ್ಯಾಪ್ಷನ್‌ ನೀಡಿದ್ದಾರೆ. ಇದರೊಂದಿಗೆ ನಗುವ ಎಮೋಜಿಯನ್ನೂ ಸೋನಂ ಹಂಚಿಕೊಂಡಿದ್ದಾರೆ.

ಈ ಮೂಲಕ ಸೋನಂ ತಮ್ಮ ಟ್ವೀಟ್‌ನಲ್ಲಿ ಶುಭ್ಮನ್‌ ಮತ್ತು ಸಾರಾ ಅಲಿ ಖಾನ್ ಸಂಬಂಧದ ಸುಳಿವು ನೀಡಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ಕೂಡ ಸಾರಾ ಅಲಿ ಖಾನ್ ಮತ್ತು ಶುಬ್ಮಾನ್ ಗಿಲ್ ನಡುವೆ ಏನೋ ನಡೆಯುತ್ತಿದೆ ಎಂಬ ಸೂಚನೆ ಸಿಕ್ಕಂತಾಗಿದೆ.
 

ಕೆಲವು ದಿನಗಳ ಹಿಂದೆ ಸೋನಮ್ ಬಾಜ್ವಾ ಅವರ ಟಾಕ್ ಶೋಗೆ ಶುಭನಮ್ ಗಿಲ್ ಆಗಮಿಸಿದ್ದರು  ಈ ಸಮಯದಲ್ಲಿ, ನೀವು ಸಾರಾ ಅಲಿ ಖಾನ್ ಜೊತೆ ಡೇಟಿಂಗ್ ಮಾಡುತ್ತಿದ್ದೀರಾ ಎಂದು ಸೋನಮ್ ಅವರನ್ನು ಕೇಳಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ  ಹೌದು ಆಗಿರಬಹುದು ಎಂದು ಶುಭ್‌ಮನ್‌ ಹೇಳಿದ್ದರು  ಅಂದಿನಿಂದ, ಶುಭಮನ್ ಮತ್ತು ಸಾರಾ ನಡುವಿನ ಸಂಬಂಧದ ಬಗ್ಗೆ ಸುದ್ದಿ ವೈರಲ್ ಆಗುತ್ತಿದೆ.

ಸೋನಮ್ ಬಾಜ್ವಾ ಅವರ ಟಾಕ್ ಶೋನಲ್ಲಿ, ಅವರು ಸಾರಾ ಅಲಿ ಖಾನ್ ಜೊತೆಗಿನ ಕೆಮಿಸ್ಟ್ರಿ ಬಗ್ಗೆ ಶುಬ್ಮಾನ್ ಅವರನ್ನು ಪ್ರಶ್ನಿಸಿದರು. ಬಾಲಿವುಡ್‌ನ ಫಿಟೆಸ್ಟ್ ನಟಿ ಯಾರು ಎಂದು ನೀವು ಭಾವಿಸುತ್ತೀರಿ ಎಂದಾಗ  ಶುಭ್‌ಮನ್ ಸಾರಾ ಅಲಿ ಖಾನ್ ಹೆಸರು ಹೇಳಿದ್ದು ಊಹಾಪೋಹಗಳಿಗ ರೆಕ್ಕೆ ಪುಕ್ಕ ಬರುವಂತಾಯಿತು. 
 

ಇದರ ಜೊತೆ ಸಾರಾ ಆಲಿ ಖಾನ್‌ ಮತ್ತು ಶುಭಮನ್‌ ಗಿಲ್‌ ಒಟ್ಟಿಗೆ ರೆಸ್ಟೊರೆಂಟ್‌ನಲ್ಲಿರುವ ಫೋಟೋ ವೈರಲ್‌ ಆಗಿದ್ದು ಇವರಿಬ್ಬರ ಸಂಬಂಧದ ರೂಮರ್‌ಗಳಿಗೆ ಮತ್ತಷ್ಟು ಪುಷ್ಟಿ ಸಿಕ್ಕಿದಂತಾಯಿತು.

ಸಾರಾ ಅಲಿ ಖಾನ್‌ಗಿಂತ ಮೊದಲು ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್‌ನೊಂದಿಗೆ ಶುಭ್‌ಮಾನ್ ಅವರ ಹೆಸರು ಕೇಳಿಬಂದಿತ್ತು. ಇಬ್ಬರೂ ಪರಸ್ಪರರ ಫೋಟೋಗಳಿಗೆ ಹಲವು ಬಾರಿ ಕಾಮೆಂಟ್ ಮಾಡಿದ್ದಾರೆ. ಮೊನ್ನೆ ಶುಭ್‌ಮಾನ್ ದ್ವಿ ಶತಕ ಬಾರಿಸಿದರೂ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದು ಸಚಿನ್ ತೆಂಡೂಲ್ಕರ್ ಮಗಳು ಸಾರಾ.

Latest Videos

click me!