ಗರ್ಲ್‌ಫ್ರೆಂಡ್‌ ಜೊತೆ ಕ್ಲಿನಿಕ್‌ಗೆ ಬಂದು, ಈಗ ಕರ್ನಾಟಕದಲ್ಲಿ ಪರ್ಮನೆಂಟ್ ಸೆಟಲ್‌ ಆದ Hardik Pandya!

Published : Jun 30, 2026, 06:45 PM IST

Hardik Pandya relocates to Bengaluru: ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಬೆಂಗಳೂರಿಗೆ ಶಿಫ್ಟ್‌ ಆಗಲಿದ್ದಾರೆ. ಹೌದು, ಬಹುತೇಕ ಮುಂಬೈನಲ್ಲಿ ಕ್ರಿಕೆಟ್‌ ಟೀಂ ಸದಸ್ಯರೇ ನೆಲೆಸಿದ್ದಾರೆ. ಆದರೆ ಹಾರ್ದಿಕ್‌ ಮಾತ್ರ ಮುಂಬೈ ಬಿಟ್ಟು, ಸಿಲಿಕಾನ್‌ ಸಿಟಿಗೆ ಬಂದಿದ್ದಾರಂತೆ.

PREV
15
ಬೆಂಗಳೂರಿನಲ್ಲಿ ಸೆಟಲ್‌ ಆದ ಮೊದಲ ಆಕ್ಟಿವ್ ‌ಕ್ರಿಕೆಟರ್

ಬಿಸಿಸಿಐನ (BCCI) 'ಸೆಂಟರ್ ಆಫ್ ಎಕ್ಸಲೆನ್ಸ್' (COE) ಅಲ್ಲಿ ಕ್ರಿಕೆಟ್‌ ಪ್ರಾಕ್ಟೀಸ್‌ ಮಾಡಬೇಕು ಎಂದು ಅವರು ನಿರ್ಧಾರ ಮಾಡಿದ್ದಾರೆ. ಇದನ್ನು ತಮ್ಮ ಖಾಯಂ ತರಬೇತಿ ನೆಲೆಯನ್ನಾಗಿ ಮಾಡಿಕೊಂಡ ಮೊದಲ ಭಾರತೀಯ‌ ಆಕ್ಟಿವ್ ಕ್ರಿಕೆಟಿಗ ಎಂಬ ಹೆಗ್ಗಳಿಕೆ ಕೂಡ ಪಡೆದಿದ್ದಾರೆ.

25
ಬೇರೆಯವರು ಯಾಕೆ ಅಷ್ಟು ಬರೋದಿಲ್ಲ

ಸಾಮಾನ್ಯವಾಗಿ ಬಿಸಿಸಿಐನಿಂದ ಕೇಂದ್ರೀಯ ಗುತ್ತಿಗೆ ಪಡೆದ ಕ್ರಿಕೆಟರ್ಸ್ Rehabilitation, ಫಿಟ್‌ನೆಸ್ ಪರೀಕ್ಷೆ ಅಥವಾ ರಾಷ್ಟ್ರೀಯ ತಂಡದ ಶಿಬಿರಗಳಿಗಾಗಿ ಮಾತ್ರ ಬೆಂಗಳೂರಿನ ಈ ಕೇಂದ್ರಕ್ಕೆ ಭೇಟಿ ನೀಡುತ್ತಾರೆ. ಆದರೆ ಪಾಂಡ್ಯ ಮಾತ್ರ ಇಲ್ಲಿಯೇ ಇರುತ್ತಾರಂತೆ.

35
32 ವರ್ಷ ವಯಸ್ಸು

ಹಾರ್ದಿಕ್‌ ಪಾಂಡ್ಯ ಅವರು ಮೂಲತಃ ಗುಜರಾತ್‌ನ ಬರೋಡಾದವರು. ಇವರಿಗೆ ಈಗ 32 ವರ್ಷ ವಯಸ್ಸು. ಹತ್ತು ವರ್ಷಗಳಿಂದ ಪಾಂಡ್ಯ ಅವರು ಮುಂಬೈನ ಲೋವರ್ ಪರೇಲ್‌ನಲ್ಲಿದ್ದರು. ಜೊತೆಗೆ ಮುಂಬೈ ಇಂಡಿಯನ್ಸ್‌ನ ಘನ್ಸೋಲಿಯಲ್ಲಿ ತರಬೇತಿ ಪಡೆಯುತ್ತಿದ್ದರು. ಮುಂಬೈನ ಲೋವರ್ ಪರೇಲ್ ಮನೆಯಿಂದ ನಿತ್ಯವೂ ಪ್ರಾಕ್ಟೀಸ್‌ಗೆ ಬರೋದು ಕಷ್ಟ ಆಗುತ್ತಿತ್ತು.

45
ಎಲ್ಲ ಸೌಲಭ್ಯ ಸಿಗುತ್ತೆ

ತೊಡೆಯ ಸ್ನಾಯು ಸಮಸ್ಯೆಯಿಂದಾಗಿ ಅವರು ಭಾರತ ಟೀಂ ಯುಕೆ (UK) ಪ್ರವಾಸದಿಂದ ಹೊರಬಿದ್ದಿದ್ದಾರೆ. ಬೆಂಗಳೂರಿನ COE ನಲ್ಲೇ ಅವರು ತರಬೇತಿ ಪಡೆಯುತ್ತಿದ್ದು ಆರು ತಿಂಗಳು ಆಗಿದೆ. ಕೇಂದ್ರ ಸರ್ಕಾರದ ಒಪ್ಪಂದದಡಿ ಇರುವ ಕ್ರಿಕೆಟರ್‌ ಆಗಿದ್ದಕ್ಕೆ, ಅವರಿಗೆ ಎಲ್ಲ ಸೌಲಭ್ಯ ಸಿಗುತ್ತದೆ.

55
ಬಾಡಿಗೆ ಮನೆ ಮಾಡಿದ್ರು

COE ಕೊಡಿಗೇನಹಳ್ಳಿ ಬಳಿಯಿದೆ. ಇದಕ್ಕೆ ಹತ್ತಿರ ಆಗುವಂತೆ ಒಂದು ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದಾರೆ. ಕನಿಷ್ಠ 5 ರಿಂದ 6 ವರ್ಷ ಅವರು ಟೆಸ್ಟ್‌ ಕ್ರಿಕೆಟ್‌ ಆಡಲಿದ್ದಾರೆ. 

ಇಲ್ಲಿ ಹಾರ್ದಿಕ್‌ ಪಾಂಡ್ಯ ಜೊತೆಗೆ ಬಿಸಿಸಿಐ ತರಬೇತುದಾರರು, ವೈಯಕ್ತಿಕ ಫಿಸಿಯೋಥೆರಪಿಸ್ಟ್, ಸ್ಟ್ರೆಂತ್ ಆಂಡ್ ಕಂಡೀಷನಿಂಗ್ (S&C) ಕೋಚ್ ಕೂಡ ಇರುತ್ತಾರೆ. ಬ್ಯಾಟಿಂಗ್ ಅಭ್ಯಾಸಕ್ಕಾಗಿ COE ನೇಮಿಸಿಕೊಳ್ಳುವ ನೆಟ್ ಬೌಲರ್‌ಗಳಿಗೆ ಸ್ವಂತ ಹಣದಿಂದ ಸಂಭಾವನೆ ಕೊಡುತ್ತಿದ್ದಾರಂತೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories