ಆಸ್ಟ್ರೇಲಿಯಾ 'ಎ' ಎದುರಿನ ಮ್ಯಾಚ್‌ಗೂ ಮುನ್ನ ದಿಢೀರ್ ಎನ್ನುವಂತೆ ಭಾರತ 'ಎ' ತಂಡ ತೊರೆದ ಶ್ರೇಯಸ್ ಅಯ್ಯರ್!

Published : Sep 23, 2025, 05:06 PM IST

ಬೆಂಗಳೂರು: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಭಾರತ 'ಎ' ತಂಡದ ನಾಯಕ ಶ್ರೇಯಸ್ ಅಯ್ಯರ್, ಆಸ್ಟ್ರೇಲಿಯಾ 'ಎ' ವಿರುದ್ದದ ಪ್ರಥಮ ದರ್ಜೆ ಪಂದ್ಯ ಆರಂಭಕ್ಕೂ ಮೊದಲೇ ದಿಢೀರ್ ಎನ್ನುವಂತೆ ತಂಡ ತೊರೆದಿದ್ದಾರೆ. ಈ ಕುರಿತಾದ ಅಪ್‌ಡೇಟ್ ಇಲ್ಲಿದೆ ನೋಡಿ. 

PREV
16
ಭಾರತ 'ಎ' ತಂಡದಲ್ಲಿ ಅಚ್ಚರಿ ಬೆಳವಣಿಗೆ

ಭಾರತ 'ಎ' ಕ್ರಿಕೆಟ್ ತಂಡದಲ್ಲಿ ಅಚ್ಚರಿ ಬೆಳವಣಿಗೆಯೊಂದು ನಡೆದಿದೆ. ಆಸ್ಟ್ರೇಲಿಯಾ 'ಎ' ಎದುರಿನ ಪ್ರಥಮ ದರ್ಜೆ ಪಂದ್ಯ ಆರಂಭಕ್ಕೂ ಮೊದಲೇ ದಿಢೀರ್ ಎನ್ನುವಂತೆ ಶ್ರೇಯಸ್ ಅಯ್ಯರ್ ಭಾರತ 'ಎ' ತಂಡದ ನಾಯಕತ್ವ ತ್ಯಜಿಸಿದ್ದಾರೆ.

26
ಧ್ರುವ್ ಜುರೆಲ್‌ಗೆ ನಾಯಕ ಪಟ್ಟ

ಶ್ರೇಯಸ್ ಅಯ್ಯರ್ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಈ ತೀರ್ಮಾನ ಮಾಡಿದ್ದರಿಂದ ಟೀಮ್ ಮ್ಯಾನೇಜ್‌ಮೆಂಟ್ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್‌ ಅವರಿಗೆ ಎರಡನೇ ಪಂದ್ಯಕ್ಕೆ ಭಾರತ 'ಎ' ತಂಡದ ನಾಯಕ ಪಟ್ಟ ಕಟ್ಟಲಾಗಿದೆ.

36
ವೈಯುಕ್ತಿಕ ಕಾರಣಗಳಿಂದ ಈ ತೀರ್ಮಾನ?

ಟೀಮ್‌ ಮ್ಯಾನೇಜ್‌ಮೆಂಟ್‌ಗೆ ತಾವು ದಿಢೀರ್ ಆಗಿ ತಂಡ ತೊರೆಯುತ್ತಿರುವುದು ಏಕೆ ಎನ್ನುವುದರ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ವೈಯುಕ್ತಿಕ ಕಾರಣದಿಂದಾಗಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

46
ಮುಂಬೈಗೆ ವಾಪಾಸ್ಸಾಗಿರುವ ಶ್ರೇಯಸ್ ಅಯ್ಯರ್

ಶ್ರೇಯಸ್ ಅಯ್ಯರ್ ಬ್ರೇಕ್ ಪಡೆದುಕೊಂಡು ಮುಂಬೈಗೆ ವಾಪಾಸ್ಸಾಗಿದ್ದಾರೆ. ಆಸ್ಟ್ರೇಲಿಯಾ 'ಎ' ಎದುರಿನ ನಾಲ್ಕು ದಿನಗಳ ಪಂದ್ಯಕ್ಕೆ ತಾವು ಲಭ್ಯವಿಲ್ಲ ಎಂದು ಆಯ್ಕೆಗಾರರಿಗೆ ತಿಳಿಸಿದ್ದಾರೆ. ಆದರೆ ವೆಸ್ಟ್‌ ಇಂಡೀಸ್ ಎದುರಿನ ಸರಣಿಯ ಆಯ್ಕೆಗೆ ಅವರು ಲಭ್ಯವಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

56
ಮೊದಲ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ವೈಫಲ್ಯ

ಆಸ್ಟ್ರೇಲಿಯಾ 'ಎ' ಎದುರಿನ ಮೊದಲ 4 ದಿನಗಳ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನಿರೀಕ್ಷಿತ ಪ್ರದರ್ಶನ ತೋರಿರಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ 8 ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 13 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು.

66
ವೆಸ್ಟ್‌ ಇಂಡೀಸ್ ಸರಣಿಗೆ ಆಯ್ಕೆಯಾಗುವ ವಿಶ್ವಾಸದಲ್ಲಿ ಅಯ್ಯರ್

ಶ್ರೇಯಸ್ ಅಯ್ಯರ್ ಇಂಗ್ಲೆಂಡ್ ಎದುರಿನ ಟೆಸ್ಟ್‌ ಸರಣಿಗೆ ಹಾಗೂ ಏಷ್ಯಾಕಪ್ ಟೂರ್ನಿಗೂ ಭಾರತ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಇದೀಗ ಅಕ್ಟೋಬರ್ 02ರಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್‌ ಸರಣಿಗೆ ಅಯ್ಯರ್ ಆಯ್ಕೆಯಾಗುವ ಸಾಧ್ಯತೆಯಿದೆ.

Read more Photos on
click me!

Recommended Stories