ಬೆಂಗಳೂರು: ಭಾರತದ ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮೊದಲ ಬಾರಿಗೆ ತಮ್ಮ ನಿಕ್‌ನೇಮ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಇದಷ್ಟೇ ಅಲ್ಲದೇ ಯಾರಾದರೂ ಅಪರಿಚಿತರು ತಮ್ಮ ನಿಕ್‌ನೇಮ್ ಕರೆದಾಗ ಯಾವ ರೀತಿ ಅನುಭವ ಆಗುತ್ತೆ ಎನ್ನುವುದರ ಬಗ್ಗೆ ಮೌನಮುರಿದಿದ್ದಾರೆ.
ಭಾರತ ಕ್ರಿಕೆಟ್ ಕಂಡ ದಿಗ್ಗಜ ಬ್ಯಾಟರ್ ರಾಹುಲ್ ದ್ರಾವಿಡ್, ಕೆಲದಿನಗಳ ಹಿಂದಷ್ಟೇ ರಾಜಸ್ಥಾನ ರಾಯಲ್ಸ್ ತಂಡದ ಹೆಡ್‌ಕೋಚ್ ಸ್ಥಾನಕ್ಕೆ ಗುಡ್‌ಬೈ ಹೇಳಿದ್ದಾರೆ. ಆದರೆ ದ್ರಾವಿಡ್ ಮುಂದಿನ ನಡೆ ಏನು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.
28
ಐಸಿಸಿ ಟ್ರೋಫಿ ಬರ ನೀಗಿಸಿದ ದ್ರಾವಿಡ್
ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 2024ರ ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ಮೂಲಕ ಬರೋಬ್ಬರಿ 11 ವರ್ಷಗಳ ಬಳಿಕ ಭಾರತ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
38
ನಿಕ್‌ನೇಮ್ ಬಗ್ಗೆ ಮನಬಿಚ್ಚಿ ಮಾತಾಡಿದ ದ್ರಾವಿಡ್
ಇದೀಗ ಕೂಲ್ ಕ್ರಿಕೆಟಿಗ ರಾಹುಲ್ ದ್ರಾವಿಡ್ ಪಾಡ್‌ಕಾಸ್ಟ್‌ವೊಂದರಲ್ಲಿ ನಿಮ್ಮ ನೆಚ್ಚಿನ ನಿಕ್‌ನೇಮ್ ಏನು ಎನ್ನುವ ಪ್ರಶ್ನೆಗೆ ಮನಬಿಚ್ಚಿ ಮಾತನಾಡಿದ್ದು, ಅವರ ಪ್ರತಿಕ್ರಿಯೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ರಾಹುಲ್ ದ್ರಾವಿಡ್ ಅವರಿಗೆ ಜ್ಯಾಮಿ, ದಿ ವಾಲ್ ಹಾಗೂ ಮಿಸ್ಟರ್ ಬ್ಲೂಮ್ ಎನ್ನುವ ನಿಕ್‌ನೇಮ್‌ನಿಂದ ಕರೆಯುವುದನ್ನು ನಾವೆಲ್ಲರೂ ಕೇಳಿದ್ದೇವೆ. ಈ ಪೈಕಿ ನಿಮಗೆ ಯಾವುದು ಇಷ್ಟದ ನಿಕ್‌ನೇಮ್ ಎಂದು ಕೇಳುತ್ತಾರೆ.
58
ಜ್ಯಾಮಿ ಅಂದ್ರೆ ನಂಗಿಷ್ಟವೆಂದು ದ್ರಾವಿಡ್
ಆಗ ದ್ರಾವಿಡ್, ಜ್ಯಾಮಿ ನನಗಿಷ್ಟವಾದ ನಿಕ್‌ನೇಮ್ ಎಂದು ಉತ್ತರಿಸಿದ್ದಾರೆ. ನಾನು ಚಿಕ್ಕವನಿದ್ದಾಗಿನಿಂದಲೂ ಎಲ್ಲರೂ ನನ್ನನ್ನು ಅದೇ ನಿಕ್‌ನೇಮ್‌ನಿಂದ ಕರೆಯುತ್ತಿದ್ದರು ಎಂದು ಹೇಳಿದ್ದಾರೆ.
68
ಜ್ಯಾಮಿ ನಿಕ್‌ನೇಮ್ ಹೇಗೆ ಬಂತು?
ಯಾಕೆಂದರೆ ನನ್ನ ತಂದೆ ಕಿಸಾನ್ ಪ್ರೊಡೆಕ್ಟ್ ಲಿಮಿಟೆಡ್ ಕೆಲಸ ಮಾಡುತ್ತಿದ್ದರು. ಅದು ಜ್ಯಾಮ್ ತಯಾರಿಸುತ್ತಿತ್ತು. ಸ್ನೇಹಿತರು, ಜನರು ಸಿಕ್ಕಾಗ ನಿಮ್ಮ ತಂದೆ ಏನು ಕೆಲಸ ಮಾಡುತ್ತಾರೆ ಎನ್ನುತ್ತಿದ್ದರು. ಆಗ ನಾನು ಜ್ಯೂಸ್ & ಜಾಮ್ ಮಾಡುತ್ತಾರೆ ಎನ್ನುತ್ತಿದ್ದೆ.
78
ಜ್ಯಾಮಿ ನೇಮ್ ಸೀಕ್ರೇಟ್
ಇದೇ ಕ್ರಮೇಣ ನನ್ನ ನಿಕ್‌ನೇಮ್ ಜ್ಯಾಮಿ ಎಂದು ಕರೆಯಲು ಕಾರಣವಾಯಿತು ಎಂದು ದ್ರಾವಿಡ್ ಹೇಳಿದ್ದಾರೆ.
88
ಅಪರಿಚಿತರು ನಿಕ್‌ನೇಮ್ ಕರೆದಾಗ
ಸ್ನೇಹಿತರು, ತೀರಾ ಆತ್ಮೀಯರು ನನ್ನ ನಿಕ್‌ನೇಮ್ ಕರೆದರೇ ನನಗೆ ಏನೂ ಅನಿಸುತ್ತಿರಲಿಲ್ಲ. ನನ್ನ ಬಗ್ಗೆ ಏನೂ ಗೊತ್ತಿರದವರು, ಏರ್‌ಪೋರ್ಟ್‌ನಲ್ಲಿ ನಿಕ್‌ನೇಮ್ ಹಿಡಿದು ಕರೆದಾಗ ನಾನಷ್ಟು ಅವರಿಗೆ ಆತ್ಮೀಯನಾ ಎಂದು ಅನಿಸುತ್ತಿತ್ತು ಎಂದು ದ್ರಾವಿಡ್ ಹೇಳಿದ್ದಾರೆ.