ಟಿ20 ಸರಣಿಗೂ ಮುನ್ನ ಭಾರತಕ್ಕೆ ಬಿಗ್‌ ಶಾಕ್! ಆಸ್ಪತ್ರೆಗೆ ದಾಖಲಾದ ಸ್ಟಾರ್ ಕ್ರಿಕೆಟಿಗ

Published : Oct 26, 2025, 04:38 PM IST

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಸೋಲಿನ ನಂತರ ಟೀಂ ಇಂಡಿಯಾ ಟಿ20 ಸರಣಿಗೆ ಸಜ್ಜಾಗುತ್ತಿದೆ. ಆದರೆ ಇಂತಹ ಸಮಯದಲ್ಲಿ ಟೀಂ ಇಂಡಿಯಾಗೆ ದೊಡ್ಡ ಹಿನ್ನಡೆಯಾಗಿದೆ. ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. 

PREV
16
ಶ್ರೇಯಸ್ ಅಯ್ಯರ್‌ಗೆ ಗಾಯ

ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಪಕ್ಕೆಲುಬಿನ ಗಾಯದಿಂದಾಗಿ ಸದ್ಯ ಆಸ್ಟ್ರೇಲಿಯಾದ ಸಿಡ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈದಾನಕ್ಕೆ ಮರಳಲು ಕೆಲವು ವಾರಗಳು ಬೇಕಾಗಬಹುದು.

26
ಸಿಡ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಶ್ರೇಯಸ್ ಅಯ್ಯರ್ ಸದ್ಯ ಸಿಡ್ನಿಯ ಆಸ್ಪತ್ರೆಯಲ್ಲಿದ್ದಾರೆ. ಬಿಸಿಸಿಐ ಅವರ ಮೇಲ್ವಿಚಾರಣೆಗೆ ವಿಶೇಷ ವೈದ್ಯರನ್ನು ನೇಮಿಸಿದೆ. ಭಾರತಕ್ಕೆ ಬಂದ ನಂತರ ಬೆಂಗಳೂರಿನಲ್ಲಿ ಹೆಚ್ಚಿನ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಬಹುದು.

36
ಗಾಯಕ್ಕೆ ಕಾರಣವೇನು?

ಮೂರನೇ ಏಕದಿನ ಪಂದ್ಯದಲ್ಲಿ ಅಲೆಕ್ಸ್ ಕ್ಯಾರಿ ಕ್ಯಾಚ್ ಹಿಡಿಯುವ ಯತ್ನದಲ್ಲಿ ಅಯ್ಯರ್ ಗಾಯಗೊಂಡರು. ಡೈವ್ ಮಾಡಿ ಅದ್ಭುತ ಕ್ಯಾಚ್ ಹಿಡಿದರೂ, ಪಕ್ಕೆಲುಬಿಗೆ ತೀವ್ರ ನೋವುಂಟಾಯಿತು. ಸದ್ಯ ಅವರು ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾಗಿದ್ದಾರೆ.

46
ದಕ್ಷಿಣ ಆಫ್ರಿಕಾ ಸರಣಿಗೂ ಮುನ್ನ ಚೇತರಿಸಿಕೊಳ್ಳುವ ಸಾಧ್ಯತೆ

ಭಾರತ ತಂಡದ ಮುಂದಿನ ಏಕದಿನ ಪಂದ್ಯ ನವೆಂಬರ್ 30 ರಂದು ನಡೆಯಲಿದೆ. ಅಂದರೆ ಇನ್ನೂ ಒಂದು ತಿಂಗಳ ಸಮಯವಿದೆ. ಅಷ್ಟರಲ್ಲಿ ಅಯ್ಯರ್ ಫಿಟ್ ಆಗಿ ತಂಡಕ್ಕೆ ಮರಳುವ ಸಾಧ್ಯತೆಯಿದೆ ಎಂದು ವೈದ್ಯರು ಅಂದಾಜಿಸಿದ್ದಾರೆ.

56
ಮತ್ತೊಬ್ಬ ಆಟಗಾರನಿಗೂ ಗಾಯ

ಆಸ್ಟ್ರೇಲಿಯಾ ಪ್ರವಾಸದಲ್ಲಿ ಮತ್ತೊಬ್ಬ ಆಟಗಾರ ನಿತೀಶ್ ಕುಮಾರ್ ರೆಡ್ಡಿ ಕೂಡ ಗಾಯಗೊಂಡಿದ್ದಾರೆ. ಎರಡನೇ ಏಕದಿನ ಪಂದ್ಯದಲ್ಲಿ ತೊಡೆಯ ಸ್ನಾಯು ಸೆಳೆತದಿಂದ ಬಳಲುತ್ತಿದ್ದಾರೆ. ಅವರ ಗಾಯ ಗಂಭೀರವಾಗಿಲ್ಲ, ಟಿ20 ಸರಣಿಗೆ ಲಭ್ಯವಿರಲಿದ್ದಾರೆ.

66
ಅಸ್ಟ್ರೇಲಿಯಾ ಎದುರಿನ ಟಿ20 ಸರಣಿಗೆ ಭಾರತ ತಂಡ:

ಸೂರ್ಯಕುಮಾರ್ ಯಾದವ್(ನಾಯಕ), ಶುಭ್‌ಮನ್ ಗಿಲ್(ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್.

Read more Photos on
click me!

Recommended Stories