ಬೆಂಗಳೂರು: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಮುಕ್ತಾಯವಾಗಿದ್ದು, ಇದೀಗ ಎಲ್ಲರ ಚಿತ್ತ ಟಿ20 ಸರಣಿಯ ಮೇಲೆ ನೆಟ್ಟಿದೆ. ಈ ಸರಣಿಯ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.
ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ಕಳೆದ ತಿಂಗಳಷ್ಟೇ ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ ಸೂರ್ಯ ಪಡೆಗೆ ಕಾಂಗರೂ ನಾಡಿನಲ್ಲಿ ಅಗ್ನಿಪರೀಕ್ಷೆ ಎದುರಾಗುತ್ತಿದೆ.
28
ಏಕದಿನ ಸರಣಿ ಕೈಚೆಲ್ಲಿದ ಭಾರತ
ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ, ಆಸ್ಟ್ರೇಲಿಯಾ ಎದುರು 3 ಪಂದ್ಯಗಳ ಏಕದಿನ ಸರಣಿಯನ್ನು 1-2 ಅಂತರದಲ್ಲಿ ಕೈಚೆಲ್ಲಿತ್ತು.
38
ಟಿ20 ಸರಣಿ ಗೆಲ್ಲಲು ಭಾರತ ಪ್ಲಾನ್
ಹೀಗಾಗಿ ಭಾರತ ತಂಡವು ಇದೀಗ 5 ಪಂದ್ಯಗಳ ಟಿ20 ಸರಣಿಯನ್ನು ಗೆಲ್ಲಲು ರಣತಂತ್ರ ಹೆಣೆಯುತ್ತಿದೆ.
5 ಪಂದ್ಯಗಳ ಟಿ20 ಸರಣಿಯು ಇದೇ ಅಕ್ಟೋಬರ್ 29ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯಕ್ಕೆ ಕೆನ್‌ಬೆರಾ ಆತಿಥ್ಯ ವಹಿಸಿದೆ.
58
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ಸರಣಿ
ಈ ಚುಟುಕು ಕ್ರಿಕೆಟ್ ಸರಣಿಯು ಕಾಂಗರೂ ನಾಡಿನಲ್ಲಿ ನಡೆಯುತ್ತಿರುವುದರಿಂದ ಸಹಜವಾಗಿಯೇ ವೇಳಾಪಟ್ಟಿಯಲ್ಲೂ ಮಹತ್ವದ ಬದಲಾವಣೆಗಳಾಗಿವೆ.
68
ಟಿ20 ಪಂದ್ಯ ಆರಂಭದ ವೇಳಾಪಟ್ಟಿ ಬದಲು
ಹೌದು, ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯು ಬೆಳಗ್ಗೆ 9 ಗಂಟೆಗೆ ಆರಂಭವಾಗುತ್ತಿತ್ತು. ಆದರೆ ಇದೀಗ ಟಿ20 ಪಂದ್ಯಗಳ ಆರಂಭದ ಸಮಯದಲ್ಲಿ ಬದಲಾವಣೆಗಳಾಗಿವೆ.
78
ಮಧ್ಯಾಹ್ನ 1.45ರಿಂದ ಪಂದ್ಯ ಆರಂಭ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ಪಂದ್ಯಗಳು ಆಸ್ಟ್ರೇಲಿಯಾದಲ್ಲಿ ಸಂಜೆ 7.15ಕ್ಕೆ ಆರಂಭವಾಗಲಿವೆ. ಅಂದರೆ ಭಾರತೀಯ ಕಾಲಮಾನ ಮಧ್ಯಾಹ್ನ 1.45ಕ್ಕೆ ಟಿ20 ಪಂದ್ಯಗಳು ಭಾರತದಲ್ಲಿ ನೇರ ಪ್ರಸಾರವಾಗಲಿದೆ.
88
T20 ಸರಣಿ ಗೆಲ್ಲಲು ಟೀಂ ಇಂಡಿಯಾ ರೆಡಿ
ಹಾಲಿ ಟಿ20 ಚಾಂಪಿಯನ್ ಭಾರತ ತಂಡವು ಸತತವಾಗಿ ಚುಟುಕು ಕ್ರಿಕೆಟ್‌ನಲ್ಲಿ ಜಯಭೇರಿ ಬಾರಿಸುತ್ತಾ ಮುನ್ನುಗ್ಗುತ್ತಿದ್ದು, ಇದೀಗ ಕಾಂಗರೂ ನಾಡಿನಲ್ಲಿ ಬಲಿಷ್ಠ ಆಸ್ಟ್ರೇಲಿಯಾಗೆ ಶಾಕ್ ನೀಡಲು ತುದಿಗಾಲಿನಲ್ಲಿ ನಿಂತಿದೆ.