ಆಸ್ಟ್ರೇಲಿಯಾ 'ಎ'ವಿರುದ್ದದ ಸರಣಿಯಿಂದ ಶ್ರೇಯಾಂಕ ಪಾಟೀಲ್ ಔಟ್; ಏಕದಿನ ವಿಶ್ವಕಪ್ ಕನಸು ನುಚ್ಚುನೂರು?

Published : Jul 25, 2025, 03:59 PM IST

ನವದೆಹಲಿ: ಭಾರತದ ಭರವಸೆಯ ಆಲ್ರೌಂಡರ್ ಎಂದೇ ಗುರುತಿಸಿಕೊಂಡಿದ್ದ ಶ್ರೇಯಾಂಕ ಪಾಟೀಲ್ ಫಿಟ್ನೆಸ್ ಕಾರಣದಿಂದಾಗಿ ಆಸ್ಟ್ರೇಲಿಯಾ 'ಎ' ವಿರುದ್ದದ ಸರಣಿಯಿಂದ ಹೊರಬಿದ್ದಿದ್ದಾರೆ. ಇದು ಶ್ರೇಯಾಂಕ ಪಾಟೀಲ್ ಅವರನ್ನು ವಿಶ್ವಕಪ್ ಕನಸನ್ನು ನುಚ್ಚುನೂರು ಮಾಡುವ ಸಾಧ್ಯತೆಯಿದೆ.

PREV
18

ಗಾಯದಿಂದ ಇನ್ನಷ್ಟೇ ಸಂಪೂರ್ಣವಾಗಿ ಚೇತರಿಸಿಕೊಳ್ಳಬೇಕಿರುವ ತಾರಾ ಆಟಗಾರ್ತಿ, ಕರ್ನಾಟಕದ ಶ್ರೇಯಾಂಕ ಪಾಟೀಲ್‌ ಮುಂಬರುವ ಆಸ್ಟ್ರೇಲಿಯಾ ‘ಎ’ ವಿರುದ್ಧ ಸರಣಿಯಿಂದ ಹೊರಬಿದ್ದಿದ್ದಾರೆ.

28

ಶ್ರೇಯಾಂಕ ಹಾಗೂ ಪ್ರಿಯಾ ಮಿಶ್ರಾರನ್ನು ಇತ್ತೀಚೆಗೆ ಭಾರತ ‘ಎ’ ತಂಡಕ್ಕೆ ಆಯ್ಕೆಮಾಡಲಾಗಿತ್ತು. ಆದರೆ ಇನ್ನೂ ಫಿಟ್ನೆಸ್‌ ಸಾಬೀತುಪಡಿಸದ ಕಾರಣ ಅವರು ಸರಣಿಗೆ ಗೈರಾಗಲಿದ್ದಾರೆ.

38

ಇದು ಶ್ರೇಯಾಂಕ ಪಾಟೀಲ್, ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಹಾದಿಯನ್ನು ಮತ್ತಷ್ಟು ದುರ್ಗಮಗೊಳಿಸಿದೆ.

48

ಇದು ಶ್ರೇಯಾಂಕ ಪಾಟೀಲ್, ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಹಾದಿಯನ್ನು ಮತ್ತಷ್ಟು ದುರ್ಗಮಗೊಳಿಸಿದೆ.

58

ಬಹುನಿರೀಕ್ಷಿತ 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಿದ್ದು, ಮುಂಬರುವ ಸೆಪ್ಟೆಂಬರ್ 30ರಿಂದ ನವೆಂಬರ್ 02ರ ವರೆಗೆ ಕ್ರಿಕೆಟ್ ಮಹಾಯುದ್ದ ನಡೆಯಲಿದೆ.

68

ಭಾರತ ‘ಎ’ ತಂಡ ಆಗಸ್ಟ್‌ ಮೊದಲ ವಾರ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಆಸ್ಟ್ರೇಲಿಯಾ ಎ ವಿರುದ್ದ 3 ಏಕದಿನ, 3 ಟಿ20 ಹಾಗೂ 4 ದಿನಗಳ ಒಂದು ಪಂದ್ಯವನ್ನಾಡಲಿದೆ.

78

ಶ್ರೇಯಾಂಕ ಪಾಟೀಲ್, ಪ್ರಿಯಾ ಮಿಶ್ರಾ ಬದಲು ಧಾರಾ ಗುಜ್ಜರ್‌, ಪ್ರೇಮಾ ರಾವತ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

88

IND A ತಂಡ

ಭಾರತ ಎ: ರಾಧಾ ಯಾದವ್ (ನಾಯಕಿ), ಮಿನ್ನು ಮಣಿ (ಉಪನಾಯಕಿ), ಶಫಾಲಿ ವರ್ಮಾ, ಡಿ. ವೃಂದಾ, ಸಜನಾ ಸಜೀವನ್, ಉಮಾ ಚೆಟ್ರಿ (ವಿಕೆಟ್ ಕೀಪರ್), ರಾಘ್ವಿ ಬಿಸ್ಟ್, ಪ್ರೇಮಾ ರಾವತ್, ನಂದಿನಿ ಕಶ್ಯಪ್ (ವಿಕೆಟ್ ಕೀಪರ್), ತನುಜಾ ಕನ್ವರ್, ಜೋಶಿತಾ ವಿಜೆ, ಶಬ್ನಮ್ ಶಕೀಲ್, ಸೈಮಾ ಠಾಕೂರ್, ತಿತಾಸ್ ಸಾಧು, ಧಾರಾ ಗುಜ್ಜಾರ್.

Read more Photos on
click me!

Recommended Stories