ಭಾರತ ಟೆಸ್ಟ್ ತಂಡದ ಉಪನಾಯಕ, ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್‌ನಲ್ಲಿ ರಿಷಭ್ ಪಂತ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. 38 ಪಂದ್ಯಗಳಲ್ಲಿ 2,717 ರನ್. ರೋಹಿತ್ ಶರ್ಮಾ 40 ಪಂದ್ಯಗಳಲ್ಲಿ ಇದೇ ರನ್ ಗಳಿಸಿದ್ದರು. ಕಾಲಿಗೆ ಗಾಯವಾಗಿದ್ದರೂ ಪಂತ್ ಈ ಸಾಧನೆ ಮಾಡಿದ್ದು ವಿಶೇಷ.
24
4ನೇ ಟೆಸ್ಟ್‌ನ ಮೊದಲ ದಿನ ಪಂತ್ ಗಾಯಗೊಂಡರು. 37 ರನ್ ಗಳಿಸಿದ್ದಾಗ ಕ್ರಿಸ್ ವೋಕ್ಸ್ ಎಸೆತದಲ್ಲಿ ರಿವರ್ಸ್ ಶಾಟ್ ಹೊಡೆಯಲು ಹೋಗಿ ಬಲಗಾಲಿಗೆ ಪೆಟ್ಟಾಯಿತು. ನೋವಿನಿಂದ ಒದ್ದಾಡಿದರು.
34
ಪಂತ್‌ರನ್ನು ಗಾಲ್ಫ್ ಕಾರ್ಟ್‌ನಲ್ಲಿ ಕರೆದೊಯ್ಯಲಾಯಿತು. ಎರಡನೇ ದಿನ ಆಡ್ತಾರಾ ಅನ್ನೋ ಅನುಮಾನವಿತ್ತು. ಆದ್ರೆ ಅಚ್ಚರಿ ಎಂಬಂತೆ ಬ್ಯಾಟಿಂಗ್‌ಗೆ ಇಳಿದರು. ಶಾರ್ದೂಲ್ ಔಟಾದ ನಂತರ ಕ್ರೀಸ್‌ಗೆ ಬಂದ ಪಂತ್, ಮೊದಲು ನಿಧಾನವಾಗಿ ಆಡಿ ವಾಷಿಂಗ್ಟನ್ ಸುಂದರ್‌ಗೆ ಸಾಥ್ ನೀಡಲು ಪ್ರಯತ್ನಿಸಿದರು. ನಂತರ ಸಿಕ್ಸರ್, ಫೋರ್‌ಗಳ ಸುರಿಮಳೆಗೈದು ಅರ್ಧಶತಕ ಪೂರ್ಣಗೊಳಿಸಿದರು.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 46 ಪಂದ್ಯಗಳಲ್ಲಿ 2,617 ರನ್ ಗಳಿಸಿ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಶುಭ್‌ಮನ್ ಗಿಲ್ (36 ಪಂದ್ಯಗಳಲ್ಲಿ 2512), ರವೀಂದ್ರ ಜಡೇಜಾ (43 ಪಂದ್ಯಗಳಲ್ಲಿ 2232), ಯಶಸ್ವಿ ಜೈಸ್ವಾಲ್ (23 ಪಂದ್ಯಗಳಲ್ಲಿ 2089), ಕೆ.ಎಲ್. ರಾಹುಲ್ (28 ಪಂದ್ಯಗಳಲ್ಲಿ 1773) ಮುಂದಿನ ಸ್ಥಾನಗಳಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ್ದ ಪಂತ್, ಎರಡನೇ ಮತ್ತು ಮೂರನೇ ಟೆಸ್ಟ್‌ಗಳಲ್ಲಿ ಅರ್ಧಶತಕ ಗಳಿಸಿದ್ದರು.