ಇಂಡೋ-ಪಾಕ್ ಪಂದ್ಯದ ವೇಳೆ ಸಿಕ್ಕಿಬಿದ್ದ ಸರ್ಫರಾಜ್, ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಈ ಘಟನೆ ನಡೆದಿದೆ. ಪಾಕಿಸ್ತಾನ ಟೀಂ ಮೆಂಟರ್ ಫೋನ್ ಬಳಕೆ ಮಾಡಿ ವಿವಾದಕ್ಕೆ ಗುರಿಯಾಗಿದ್ದಾರೆ.
ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ ಬಗ್ಗು ಬಡಿದಿದೆ. ಭಾರತ ವಿರುದ್ದಧ ಸೋಲನ್ನೇ ಅರಗಿಸಿಕೊಳ್ಳಲು ಸಾಧ್ಯವಾಗದ ಪಾಕಿಸ್ತಾನಕ್ಕೆ ಇದೀಗ ವಿವಾದವೂ ಸುತ್ತಿಕೊಂಡಿದೆ. ಭಾರತ-ಪಾಕಿಸ್ತಾನ ಪಂದ್ಯದ ವೇಳೆ, ಪಾಕ್ ತಂಡದ ಮೆಂಟರ್ ಸರ್ಫರಾಜ್ ಅಹ್ಮದ್ ಮೊಬೈಲ್ ಬಳಸಿದ್ದು ವಿವಾದವಾಗಿದೆ. ಡ್ರೆಸ್ಸಿಂಗ್ ರೂಮ್ ಬಳಿ ಪಂದ್ಯ ನೋಡುತ್ತಿದ್ದಾಗ ಫೋನ್ ಬಳಸುವ ಚಿತ್ರಗಳು ವೈರಲ್ ಆಗಿವೆ.
26
ಐಸಿಸಿ ನಿಯಮಗಳ ಉಲ್ಲಂಘನೆ
ಪಂದ್ಯ ನಡೆಯುತ್ತಿರುವಾಗ ತಂಡದ ಸದಸ್ಯರು, ಸಿಬ್ಬಂದಿ, ಸಪೋರ್ಟ್ ಸ್ಟಾಪ್ ಸೇರಿದಂತೆ ಯಾರೂ ಫೋನ್ ಬಳಕೆ ಮಾಡುವಂತಿಲ್ಲ. ಇದು ಐಸಿಸಿಯ ಕಠಿಣ ಭ್ರಷ್ಟಾಚಾರ ವಿರೋಧಿ ನಿಯಮಗಳ ಉಲ್ಲಂಘನೆಯಾಗಿದೆ. ಇತ್ತ ಪಂದ್ಯ ನಡೆಯುತ್ತಿದ್ದಂತೆ ಡಗೌಟ್‌ನಲ್ಲಿದ್ದ ಮೆಂಟರ್ ಸರ್ಫರಾಜ್ ಅಹ್ಮದ್ ಫೋನ್ ಬಳಕೆ ಮಾಡಿದ್ದಾರೆ. ಐಸಿಸಿ ನಿಯಮದ ಪ್ರಕಾರ, ಪಂದ್ಯದ ವೇಳೆ ಡ್ರೆಸ್ಸಿಂಗ್ ರೂಮ್ ಅಥವಾ ಅದರ ಸುತ್ತಮುತ್ತ ಆಟಗಾರರು ಅಥವಾ ಅಧಿಕಾರಿಗಳು ಸಂವಹನ ಸಾಧನ ಬಳಸುವಂತಿಲ್ಲ. ಆರ್ಟಿಕಲ್ 4.1.1ರಂತೆ ಮೊಬೈಲ್ ಫೋನ್ ಇಟ್ಟುಕೊಳ್ಳುವುದು ಅಥವಾ ಬಳಸುವುದು ನಿಷಿದ್ಧ.
36
ಲ್ಯಾಪ್‌ಟಾಪ್‌ಗೂ ನಿಷೇಧ
ಐಸಿಸಿ ನಿಯಮ ಆರ್ಟಿಕಲ್ 4.2.2 ಲ್ಯಾಪ್‌ಟಾಪ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳಿಗೂ ನಿಷೇಧ ಹೇರುತ್ತದೆ. ಮ್ಯಾಚ್ ಫಿಕ್ಸಿಂಗ್ ತಡೆಯಲು ಈ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. ಆದರೆ ಸರ್ಫರಾಜ್ ಅಹ್ಮದ್ ಇದೀಗ ಫೋನ್ ಬಳಕೆ ಮಾಡಿರುವ ಫೋಟೋಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದು ಐಸಿಸಿ ಕಣ್ಣು ಕೆಂಪಾಗಿಸಿದೆ.
ಸಾಮಾನ್ಯವಾಗಿ ಟೀಮ್ ಮ್ಯಾನೇಜರ್‌ಗೆ ಅಧಿಕೃತ ಕೆಲಸಕ್ಕೆ ಫೋನ್ ಬಳಸಲು ಅನುಮತಿ ಇರುತ್ತದೆ. ಆದರೆ ಮೆಂಟರ್ ಆಗಿರುವ ಸರ್ಫರಾಜ್‌ಗೆ ಈ ವಿನಾಯಿತಿ ಅನ್ವಯಿಸುತ್ತದೆಯೇ ಎಂದು ಐಸಿಸಿ ಪರಿಶೀಲಿಸಲಿದೆ. ಫೋಟೋ ವೈರಲ್ ಆದ ಕಾರಣ ವಿವರಣೆ ಕೇಳಬಹುದು. ಈ ಕುರಿತು ಐಸಿಸಿ ತನಿಖೆಗೆ ಆದೇಶ ನೀಡಲಿದೆ.
56
ಸರ್ಫರಾಜ್‌ಗೆ ದಂಡ ಅಥವಾ ನಿಷೇಧ?
ತಪ್ಪು ಸಾಬೀತಾದರೆ ಸರ್ಫರಾಜ್‌ಗೆ ದಂಡ ಅಥವಾ ನಿಷೇಧ ಹೇರಬಹುದು. ಭಾರತದೆದುರು ಪಾಕಿಸ್ತಾನ ಸೋತ ಬೆನ್ನಲ್ಲೇ ಈ ವಿವಾದ ಪಾಕ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಭ್ರಷ್ಟಾಚಾರ ವಿರೋಧಿ ನೀತಿಯಲ್ಲಿ ಐಸಿಸಿ ಕಠಿಣ ಕ್ರಮ ಕೈಗೊಳ್ಳಲಿದೆ. ಹೀಗಾಗಿ ತಪ್ಪು ಸಾಬೀತಾದರೆ ಸರ್ಫರಾಜ್ ಮೆಂಟರ್ ಕರಿಯರ್ ಅಂತ್ಯಗೊಳ್ಳುವ ಸಾಧ್ಯತೆ ಇದೆ.
66
ಸಾಲ ತೀರಿಸಿದ ಭಾರತೀಯ ಯುವ ಪಡೆ
ಅಂಡರ್ 19 ಏಷ್ಯಾ ಕಪ್ ಫೈನಲ್ ಸೋಲಿಗೆ ಭಾರತ ಈ ಗೆಲುವಿನ ಮೂಲಕ ಸೇಡು ತೀರಿಸಿಕೊಂಡಿದೆ. ಭಾರತದ ಜೊತೆಗೆ ಇಂಗ್ಲೆಂಡ್, ಅಫ್ಘಾನಿಸ್ತಾನ ಮತ್ತು ಆಸ್ಟ್ರೇಲಿಯಾ ಸೆಮಿಫೈನಲ್ ತಲುಪಿವೆ.ಅಂಡರ್ 19 ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು 58 ರನ್‌ಗಳಿಂದ ಸೋಲಿಸಿ ಭಾರತ ಸೆಮಿಫೈನಲ್ ತಲುಪಿದೆ. ಪಾಕಿಸ್ತಾನವು 194 ರನ್‌ಗಳಿಗೆ ಆಲೌಟ್ ಆಗಿ, 58 ರನ್‌ಗಳ ಸೋಲಿನೊಂದಿಗೆ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.