ಶುಭ್‌ಮನ್‌ ಗಿಲ್‌ ಜೊತೆ ಡೀಪ್‌ಫೇಕ್‌ ಫೋಟೋ, ಮೌನ ಮುರಿದ ಸಾರಾ ತೆಂಡುಲ್ಕರ್‌!

Published : Nov 22, 2023, 04:45 PM IST

ಟೀಮ್‌ ಇಂಡಿಯಾ ಬ್ಯಾಟ್ಸ್‌ಮನ್‌ ಶುಭ್‌ಮನ್‌ ಗಿಲ್‌ ಜೊತೆಗಿನ ಡೀಪ್‌ಫೇಕ್‌ ಫೋಟೋ ಬಗ್ಗೆ ಕೊನೆಗೂ ಸಚಿನ್‌ ತೆಂಡುಲ್ಕರ್‌ ಪುತ್ರಿ ಸಾರಾ ತೆಂಡುಲ್ಕರ್‌ ಮೌನ ಮುರಿದಿದ್ದಾರೆ. 

PREV
113
ಶುಭ್‌ಮನ್‌ ಗಿಲ್‌ ಜೊತೆ ಡೀಪ್‌ಫೇಕ್‌ ಫೋಟೋ, ಮೌನ ಮುರಿದ ಸಾರಾ ತೆಂಡುಲ್ಕರ್‌!

ವಿಶ್ವಕಪ್‌ ವೇಳೆ ಶುಭ್‌ಮುನ್‌ ಗಿಲ್‌ ಅವರನ್ನು ಸಾರಾ ತೆಂಡುಲ್ಕರ್‌ ತಬ್ಬಿಕೊಂಡಿರುವ ಫೋಟೋ ಸಖತ್‌ ವೈರಲ್‌ ಆಗಿತ್ತು. ಈ ಡೀಪ್‌ಫೇಕ್‌ ಫೋಟೋ ಬಗ್ಗೆ ಸಾರಾ ತೆಂಡುಲ್ಕರ್‌ ಕೊನೆಗೂ ಮೌನ ಮುರಿದಿದ್ದಾರೆ.

213

ಟೀಮ್‌ ಇಂಡಿಯಾ ಬ್ಯಾಟ್ಸ್‌ಮನ್‌ ಶುಭ್‌ಮನ್‌ ಗಿಲ್‌ ಹಾಗೂ ಸಾರಾ ತೆಂಡುಲ್ಕರ್‌ ನಡುವೆ ಏನೋ ನಡೆಯುತ್ತಿದೆ ಎನ್ನುವ ಅನುಮಾನಗಳಿವೆ. ಇದರ ನಡುವೆ ಅನುಮಾನವೇ ಬರದಂತೆ ಇದ್ದ ಆ ಫೋಟೋವಿನ ಸತ್ಯಾಸತ್ಯತೆ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು.

313

ಸಾರಾ ತೆಂಡುಲ್ಕರ್‌ ತನ್ನ ತಮ್ಮ ಅರ್ಜುನ್‌ ತೆಂಡುಲ್ಕರ್‌ ಅವರನ್ನು ತಬ್ಬಿಕೊಂಡು ಫೋಟೋ ತೆಗೆಸಿಕೊಂಡಿದ್ದರು. ಇದರಲ್ಲಿ ಅರ್ಜುನ್‌ ಮುಖದ ಬದಲು ಶುಭ್‌ಮನ್‌ ಗಿಲ್‌ ಮುಖ ಹಾಕಿ ಫೇಕ್‌ ಫೋಟೋ ಮಾಡಲಾಗಿತ್ತು. ಆದರೆ, ಎಲ್ಲೂ ಇದು ಫೇಕ್‌ ಎನ್ನುವಂತೆ ಇದ್ದಿರಲಿಲ್ಲ.

413

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಪುತ್ರಿ ಸಾರಾ ತೆಂಡುಲ್ಕರ್ ಅವರು ತಮ್ಮ ಡೀಪ್‌ಫೇಕ್ ಫೋಟೋಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

513

ಇನ್ಸ್‌ಟಾಗ್ರಾಮ್‌ ಸ್ಟೋರಿಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಸಾರಾ ತೆಂಡುಲ್ಕರ್‌, ತಮ್ಮ ಹೆಸರಿನಲ್ಲಿಯೇ ಇರುವ ಎಕ್ಸ್‌ ಖಾತೆಯ ಬಗ್ಗೆಯೂ ಅಭಿಮಾನಿಗಳಿಗೆ ಎಚ್ಚರಿಸಿದ್ದಾರೆ.

613

ಎಕ್ಸ್‌ನಲ್ಲಿ ಸಾರಾ ತೆಂಡುಲ್ಕರ್‌ ಹೆಸರಿನಲ್ಲಿಯೇ ಇರುವ ಆ ಖಾತೆಗೆ ಬ್ಲ್ಯೂ ಟಿಕ್‌ ಕೂಡ ಇದೆ. ಆದರೆ, ಅದೇ ಅಕೌಂಟ್‌ನಲ್ಲಿ ಈ ಖಾತೆ ಪರೋಡಿ ಎಂದೂ ದಾಖಲು ಮಾಡಲಾಗಿದೆ.

713

ನಮ್ಮೆಲ್ಲರಿಗೂ ನಮ್ಮ ಸಂತೋಷ, ದುಃಖ ಮತ್ತು ದೈನಂದಿನ ಚಟುವಟಿಕೆಗಳನ್ನು ಹಂಚಿಕೊಳ್ಳಲು ಸಾಮಾಜಿಕ ಮಾಧ್ಯಮವು ಅದ್ಭುತ ಸ್ಥಳವಾಗಿದೆ ಎಂದು ಅವರು ಬರೆದಿದ್ದಾರೆ.

813

ಹಾಗಿದ್ದರೂ, ಇಂಟರ್ನೆಟ್‌ನ ಸತ್ಯ ಮತ್ತು ಸತ್ಯಾಸತ್ಯತೆಯಿಂದ ತಂತ್ರಜ್ಞಾನದ ದುರುಪಯೋಗವನ್ನು ನೋಡುವುದು ಬೇಸರ ಉಂಟು ಮಾಡುತ್ತದೆ ಎಂದು ತಮ್ಮ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

913

ವಾಸ್ತವದಿಂದ ಸಾಕಷ್ಟು ದೂರವಿರುವ ನನ್ನ ಕೆಲವು ಡೀಪ್‌ಫೇಕ್ ಫೋಟೋಗಳನ್ನು ನಾನು ನೋಡಿದ್ದೇನೆ, ”ಎಂದು ಅವರು ಬರೆದುಕೊಂಡಿದ್ದಾರೆ.

1013

ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಕೆಲವು ಖಾತೆಗಳನ್ನು ಸ್ಪಷ್ಟವಾಗಿ ನನ್ನ ರೀತಿಯಲ್ಲೇ ಇರುವ, ಮತ್ತು ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದ ರಚಿಸಲಾಗಿದೆ

1113

ಎಕ್ಸ್‌ನಲ್ಲಿ ನನ್ನ ಖಾತೆ ಇಲ್ಲ, ಮತ್ತು ಎಕ್ಸ್‌ ಅಂತಹ ಖಾತೆಗಳನ್ನು ಪರಿಶೀಲಿಸುತ್ತದೆ ಮತ್ತು ಅವುಗಳನ್ನು ಅಮಾನತುಗೊಳಿಸುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಅವರು ತಿಳಿಸಿದ್ದಾರೆ.

1213

ಅದಲ್ಲದೆ, ಎಕ್ಸ್‌ ಕೂಡ ಇಂಥ ಫೇಕ್‌ ಖಾತೆಗಳ ಬಗ್ಗೆ ಅಗತ್ಯವಾಗ ಕ್ರಮ ಕೈಗೊಳ್ಳಬೇಕೂ ಎಂದೂ ಸಾರಾ ತೆಂಡುಲ್ಕರ್‌ ತಮ್ಮ ಪೋಸ್ಟ್‌ನಲ್ಲಿ ಒತ್ತಾಯ ಮಾಡಿದ್ದಾರೆ.

ಶುಭ್‌ಮನ್‌ ಗಿಲ್‌ ದ್ವಿಶತಕಕ್ಕೆ ಟ್ರೆಂಡ್‌ ಆದ್ರು ಸಚಿನ್‌ ಪುತ್ರಿ ಸಾರಾ ತೆಂಡುಲ್ಕರ್!

1313
Sara Tendulkar

"ಮನೋರಂಜನೆಯು ಸತ್ಯದ ವೆಚ್ಚದಲ್ಲಿ ಎಂದಿಗೂ ಬರಬಾರದು. ನಂಬಿಕೆ ಮತ್ತು ವಾಸ್ತವತೆಯ ಆಧಾರದ ಮೇಲೆ ಸಂವಹನವನ್ನು ಪ್ರೋತ್ಸಾಹಿಸೋಣ" ಎಂದು ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Sara Tendulkar ಸಚಿನ್ ಮಗಳ ಸ್ಟೈಲಿಷ್ ಲುಕ್, ಮಿನಿ ಡ್ರೆಸ್ ಬೆಲೆ ಮಾತ್ರ ದುಬಾರಿ

Read more Photos on
click me!

Recommended Stories