ವಿಶ್ವಕಪ್ ಸೋಲಿನಿಂದ ಟೀಂ ಇಂಡಿಯಾ ಕ್ರಿಕೆಟಿಗರ ಮನಸ್ಸು ಭಾರವಾಗಿದೆ. ಸೋಲಿನ ನೋವು ಕಣ್ಣೀರಾಗಿ ಜಿನುಗಿದೆ. ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂ ತೆರಳಿದ ಪ್ರಧಾನಿ ಮೋದಿ ತಂಡದ ಪ್ರತಿಯೊಬ್ಬ ಆಟಗಾರನ ಸಂತೈಸಿದ್ದಾರೆ.
ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟ್ರೋಫಿ ಕೈಚೆಲ್ಲಿದ ಕಾರಣದಿಂದ ಆಘಾತಗೊಂಡಿದ್ದರು. ಆದರೆ ಮೋದಿ ಇಬ್ಬರ ಹೈಹಿಡಿದು ಮಾತನಾಡಿಸಿದ್ದಾರೆ.
ರೋಹಿತ್ ಶರ್ಮಾ ಹಾಗೂ ಕೊಹ್ಲಿ ಕೈಹಿಡಿದು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಮೋದಿ ಮಾತಿನಿಂದ ಭಾವುಕರಾಗಿದ್ದ ರೋಹಿತ್ ಹಾಗೂ ಕೊಹ್ಲಿ ಮುಖದಲ್ಲಿ ನಗು ಕಾಣಿಸಿತ್ತು.
ಸೋಲಿನ ಆಘಾತದಲ್ಲಿ ಕುಳಿತಿದ್ದ ಟೀಂ ಇಂಡಿಯಾ ಆಟಗಾರರ ಜೊತೆ ಮೋದಿ ಮಾತನಾಡಿದ್ದಾರೆ. ಇಡೀ ದೇಶವೇ ನಿಮ್ಮ ಜೊತೆಗಿದೆ. ಟೂರ್ನಿಯಲ್ಲಿ ನೀವು ತೋರಿದ ಪ್ರದರ್ಶನಕ್ಕೆ ಹೆಮ್ಮೆ ಇದೆ ಎಂದು ಮೋದಿ ಹೇಳಿದ್ದಾರೆ.
ಇತ್ತ ಭಾವುಕರಾಗಿದ್ದ ಮೊಹಮ್ಮದ್ ಶಮಿಯನ್ನು ತಬ್ಬಿಕೊಂಡು ಮೋದಿ ಸಂತೈಸಿದ್ದಾರೆ. ಅಗ್ರೆಸ್ಸೀವ್ ಬೌಲಿಂಗ್ ದಾಳಿ ಮೂಲಕ ಇತಿಹಾಸ ರಚಿಸಿದ್ದೀರಿ. ಅಭಿನಂದನೆಗಳನ್ನು ತಿಳಿಸಿದ್ದಾರೆ.
ರವೀಂದ್ರ ಜಡೇಜಾ ಸೇರಿದಂತೆ ಎಲ್ಲಾ ಕ್ರಿಕೆಟಿಗರನ್ನು ಮೋದಿ ಸಂತೈಸಿದ್ದಾರೆ. ಮೋದಿ ಮಾತಿನಿಂದ ಟೀಂ ಇಂಡಿಯಾ ಕ್ರಿಕೆಟಿಗರು ಸಮಾಧಾನಗೊಂಡಿದ್ದಾರೆ.
ಐಸಿಸಿ ವಿಶ್ವಕಪ್ ಟೂರ್ನಿಯ ಲೀಗ್ ಹಂತದ 9 ಪಂದ್ಯ ಗೆದ್ದ ಭಾರತ, ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಅದ್ಭುತ ಗೆಲುವು ದಾಖಲಿಸಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಮುಗ್ಗರಿಸಿತ್ತು.
ಭಾರತ ಮುಗ್ಗರಿಸಿದರೂ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದೆ. ಅದ್ಭುತ ಪ್ರದರ್ಶನದ ಮೂಲಕ ಹೊಸ ಇತಿಹಾಸ ರಚಿಸಿದೆ. ಇದೀಗ ಟೀಂ ಇಂಡಿಯಾ ಐಸಿಸಿ ಚಾಂಪಿಯನ್ಸ್ ಟ್ರೋಫಿಯತ್ತ ಚಿತ್ತ ನೆಟ್ಟಿದೆ.