ಸಚಿನ್ ತೆಂಡೂಲ್ಕರ್ ಮಗಳು ಸಾರಾ ಡೇಟಂಗ್ ಮಾಡ್ತಿರೋದು ಗಿಲ್ ಜೊತೆ ಅಲ್ವಂತೆ! ಅವ್ನ ಫ್ರೆಂಡ್ ಜೊತೆಯಂತೆ!

First Published | Nov 22, 2023, 1:25 PM IST

ಭಾರತೀಯ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಮಗಳು ಸಾರಾ ತೆಂಡುಲ್ಕರ್ ಹೆಸರು ಕಳೆದ ಕೆಲವು ದಿನಗಳಿಂದ ಶುಭ ಮನ್ ಗಿಲ್ ಜೊತೆ ಥಳಕು ಹಾಕಿ ಕೊಳ್ಳುತ್ತಿದೆ. ಅದರಲ್ಲಿಯೂ ವಿಶ್ವಕಪ್ ಕ್ರಿಕೆಟ್ ಟೈಮಲ್ಲಂತೂ ಗಿಲ್ ಅತ್ಯುತ್ತಮ ಪ್ರದರ್ಶನ ತೋರಿದಾಗಲೆಲ್ಲಾ ಸಾರಾ ರಿಯಾಕ್ಷನ್ ಹೇಗಿತ್ತು ಎಂಬುದನ್ನು ನೋಡುವುದೇ ಎಲ್ಲರಿಗೂಂದು ಸಂಭ್ರಮವಾಗಿತ್ತು. ಅಂಥದ್ರಲ್ಲಿ ಇದೀಗ ಹೊಸದೊಂದು ರೂಮರ್ ಹುಟ್ಟಿಕೊಂಡಿದೆ. ಏನದು?

ಭಾರತೀಯ ಕ್ರಿಕೆಟ್‌ನ ಉದಯನ್ಮುಖ ಆಟಗಾರ ಶುಭ್ ಮನ್ ಗಿಲ್ ಫೋಟೋ ವೊಂದು ಸಚಿನ್ ಮಗಳು ಸಾರಾ ಜೊತೆ ವೈರಲ್ ಆಗಿತ್ತು. ಅಂದಿನಿಂದ ಇವರಿಬ್ಬರ ನಡುವೆ ಏನೋ ಇದೆ ಎಂಬ ಗುಸು ಗುಸು ಹರಿದಾಡಲು ಶುರುವಾಯಿತು. 

ಅದು ಎಷ್ಟರ ಮಟ್ಟಿಗೆ ದೊಡ್ಡದಾಯಿತು ಎಂದರೆ ಸಾರಾ ತನ್ನ ತಮ್ಮ ಅರ್ಜುನ್ ಜೊತೆ ತೆಗೆಸಿಕೊಂಡ ಫೋಟೋವೊಂದಕ್ಕೆ ಗಿಲ್ ಫೋಟೋ ಹಾಕಿ ಈ ಸಂಬಂಧ ಪಕ್ಕಾವೆಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತು. 

Tap to resize

ಅಲ್ಲದೇ ಇತ್ತೀಚೆಗೆ ಕಾಫಿ ವಿಥ್ ಕರಣ್ ಶೋನಲ್ಲಿ ಸೈಫ್ ಆಲಿ ಖಾನ್ ಮಗಳು ಸಾರಾ ತಾವು ಗಿಲ್ ಜೊತೆ ಡೇಟಿಂಗ್ ಮಾಡುತ್ತಿಲ್ಲವೆಂಬುದನ್ನು ಕನ್ಫರ್ಮ್ ಮಾಡಿದರು.

ಸರಿ, ಸೈಫ್ ಮಗಳು ಸಾರಾ ಅಲ್ಲವೆಂದರೆ, ತೆಂಡುಲ್ಕರ್ ಮಗಳು ಸಾರಾ ಜೊತೆ ಗಿಲ್ ಡೇಟಿಂಗ್ ಪಕ್ಕಾವೆಂದು ಗುಸು ಗುಸು ಹರಿದಾಡುತ್ತಿರುವಾಗಲೇ ಈಗೊಂದು ಹೊಸ ಗಾಸಿಪ್ ಹುಟ್ಟಿಕೊಂಡಿದೆ.

ಸಾರಾರ ಕೆಲವು ಫೋಟೋಗಳು ಹಾಗೂ ರೀಲ್ಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲಿ ಅವರು ಗಿಲ್ ಸ್ನೇಹಿತ ಖುಷ್‌ಪ್ರೀತ್ ಜೊತೆಯ ರೀಲ್‌ಗೆ ಖುದ್ದು ಗಿಲ್ ಮತ್ತು ಬಾಲಿವುಡ್ ಸೆಲೆಬ್ರಿಟಿಗಳೊಂದಿಗೆ ಸದಾ ಕಾಣಿಸಿಕೊಳ್ಳುವ ಉರಿ ರಿಯಾಕ್ಟ್ ಮಾಡಿದ್ದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. 

ಗಿಲ್ ಜೊತೆ ಆತ್ಮೀಯರಾಗಿರುವ ಖುಷ್ ಹಾಗೂ ಗಿಲ್ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಶೇರ್ ಆಗುತ್ತೆ. ನೋಡಿದರೆ ಇವರಿಬ್ಬರು ತುಂಬಾ ಆತ್ಮೀಯರು ಎಂಬುವುದು ಅಂತ ಗೊತ್ತಾಗುತ್ತೆ. 

ಆ ಕಾರಣದಿಂದಲೇ ಇರಬೇಕು ಸಾರಾ ಹಲವು ಸಾರಿ ಈ ಖುಷ್ ಜೊತೆ ಕಾಣಿಸಿಕೊಂಡಿದ್ದೂ ಇದೆ. ಇದೀಗ ಇಬ್ಬರ ರೀಲ್ಸ್ ಸಹ ಸಾಕಷ್ಟು ಸದ್ದು ಮಾಡುತ್ತಿದ್ದು, ಗಿಲ್ ಜೊತೆ ಅಲ್ಲ ಸಾರಾ, ಡೇಟಿಂಗ್ ಮಾಡುತ್ತಿರುವುದು ಅವನು ಫ್ರೆಂಡ್ ಜೊತೆ ಅನ್ನೋ ಹೊಸ ರೂಮರ್ ಹುಟ್ಟು ಕೊಳ್ಳಲು ಕಾರಣವಾಗಿದೆ. 

ಈ ರೀಲ್ಸ್‌ಗೆ Orry ಸಹ ರಿಯಾಕ್ಟ್ ಮಾಡಿದ್ದಕ್ಕೆ, ಸಾರಾ ಹಾಗೂ ಖುಷ್ ಜೊತೆ ಅನೋ ಕುಚ್ ಕುಚ್ ಇರೋದು ಹೌದೆಂದೇ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. 

ಗಿಲ್ ಸಹ ರೀಲ್ಸ್ ಲೈಕ್ ಮಾಡಿದ್ರಿಂದ ಇವನೇಗೇನು ಬಂದಿದೆ ರೋಗವೆಂದೂ ಕೆಲವು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಖುಷ್-ಸಾರಾ ರೀಲ್ಸ್ ಸೋಷಿಯಲ್ ಮೀಡಿಯಾದಲ್ಲಿ ಹಂಗಾಮಾ ಎಬ್ಬಿಸಿದೆ.

UAE ಕ್ರಿಕೆಟಿಗ ಚಿರಾಗ್ ಸೂರಿ ಸಂದರ್ಶನವೊಂದರ ವೇಳೆ ಗಿಲ್ ಸಾರಾ ಜೊತೆ ಡೇಟಿಂಗ್ ಮಾಡುತ್ತಿದ್ದು, ಇವರಿಬ್ಬರು ಬೇಗ ಮದ್ವೆಯಾಗಬೇಕೆಂದು ಬಯಸುತ್ತೇನೆಂದು ಹೇಳಿದ್ದು ದೊಡ್ಡ ಹುಲ್ಲೆಬ್ಬುವಂತೆ ಮಾಡಿತ್ತು. 

ಸೂರಿ ಮಾತಿನ ಜೊತೆಗೆ ಸಾರಾ-ಗಿಲ್ ಕೆಲವು ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ರಿಂದ ಇವನನ್ನು ತೆಂಡುಲ್ಕರ್ ಭಾವೀ ಅಳಯನೆಂದೇ ಕರೆಯಲು ಆರಂಭಿಸಿದರು. 

Latest Videos

click me!