ರೋಹಿತ್ ಶರ್ಮಾ ನಿವೃತ್ತಿ ವಿಚಾರ: ಫ್ಯಾನ್ಸ್‌ಗೆ ಗುಡ್‌ ನ್ಯೂಸ್ ಕೊಟ್ಟ ಹಿಟ್‌ಮ್ಯಾನ್ ಬಾಲ್ಯದ ಕೋಚ್!

Published : Oct 27, 2025, 12:51 PM IST

ಮುಂಬೈ: ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿ ಮುಕ್ತಾಯದ ಬಳಿಕ ರೋಹಿತ್ ಶರ್ಮಾ ಕ್ರಿಕೆಟ್ ಭವಿಷ್ಯ ಏನು ಎನ್ನುವ ಕುತೂಹಲ ಜೋರಾಗಿದೆ. ಹೀಗಿರುವಾಗಲೇ ಹಿಟ್‌ಮ್ಯಾನ್ ಬಾಲ್ಯದ ಕೋಚ್ ದಿನೇಶ್ ಲಾಡ್, ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ದಿನೇಶ್ ಲಾಡ್ ಏನಂದ್ರು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್ 

PREV
19
ಕಾಂಗರೂ ನಾಡಲ್ಲಿ ಸರಣಿ ಶ್ರೇಷ್ಠ ಗೆದ್ದ ಹಿಟ್‌ಮ್ಯಾನ್

ಆಸ್ಟ್ರೇಲಿಯಾ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಗರಿಷ್ಠ ರನ್ ಸಿಡಿಸುವ ಮೂಲಕ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಸರಣಿ ಶ್ರೇಷ್ಠ ಪ್ರಶಸ್ತಿ ಜಯಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸುವಲ್ಲಿ ಯಶಸ್ವಿಯಾದರು.

29
ಆಸೀಸ್ ಎದುರು ಅಬ್ಬರಿಸಿದ ರೋಹಿತ್ ಶರ್ಮಾ

ಬಲಿಷ್ಠ ಆಸ್ಟ್ರೇಲಿಯಾ ಎದುರು ರೋಹಿತ್ ಶರ್ಮಾ ಒಂದು ಅಜೇಯ ಶತಕ, ಒಂದು ಅರ್ಧಶತಕ ಸಹಿತ 101ರ ಬ್ಯಾಟಿಂಗ್ ಸರಾಸರಿಯಲ್ಲಿ 202 ರನ್ ಬಾರಿಸಿ ಮಿಂಚಿದ್ದರು. ಈ ಮೂಲಕ ಆಸೀಸ್ ಪ್ರವಾಸವನ್ನು ಸ್ಮರಣೀಯವಾಗಿಸಿಕೊಳ್ಳುವಲ್ಲಿ ರೋಹಿತ್ ಯಶಸ್ವಿಯಾಗಿದ್ದರು.

39
ನಿವೃತ್ತಿ ಗಾಸಿಪ್‌ಗೆ ರೋ-ಕೊ ಜೋಡಿ ಬ್ರೇಕ್

ಆಸ್ಟ್ರೇಲಿಯಾ ಎದುರಿನ ಸರಣಿಗೂ ಮುನ್ನ ರೋಹಿತ್ ಶರ್ಮಾ ಅವರನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಇದರ ಬೆನ್ನಲ್ಲೇ ಆಸೀಸ್ ಪ್ರವಾಸವೇ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಪಾಲಿಗೆ ಕೊನೆಯ ಅಂತಾರಾಷ್ಟ್ರೀಯ ಸರಣಿಯಾಗುವ ಸಾಧ್ಯತೆಯಿದೆ ಎನ್ನುವ ಗಾಸಿಪ್ ಜೋರಾಗಿತ್ತು.

49
ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ರೋಹಿತ್ ಬಾಲ್ಯದ ಕೋಚ್

ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ ಬಗ್ಗೆ ಅವರ ಬಾಲ್ಯದ ಕೋಚ್ ದಿನೇಶ್ ಲಾಡ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ರೋಹಿತ್ 2027ರ ವಿಶ್ವಕಪ್ ಆಡಿದ ಬಳಿಕವೇ ನಿವೃತ್ತಿಯಾಗುತ್ತಾರೆ ಎಂದು ಹೇಳಿದ್ದಾರೆ.

59
ಟೀಕಾಕಾರರ ಬಾಯಿ ಮುಚ್ಚಿಸಿದ ರೋಹಿತ್ ಇನ್ನಿಂಗ್ಸ್

ಈ ಬಗ್ಗೆ ಮಾತನಾಡಿರುವ ಅವರು, ಆಸೀಸ್ ಎದುರು ರೋಹಿತ್ ಶರ್ಮಾ ಬಾರಿಸಿದ ಅಜೇಯ 121 ರನ್‌ಗಳ ಸ್ಪೆಷಲ್ ಇನ್ನಿಂಗ್ಸ್ ಎಲ್ಲಾ ಟೀಕಾಕಾರರಿಗೆ ಬಾಯಿ ಮುಚ್ಚಿಸುವಂತೆ ಮಾಡಿದೆ. ಅವರು 2027ರ ಐಸಿಸಿ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಲಾಡ್ ಹೇಳಿದ್ದಾರೆ.

69
ರೋಹಿತ್ ಗುರಿ 2027ರ ವಿಶ್ವಕಪ್ ಆಡೋದು

ರೋಹಿತ್ ಶರ್ಮಾ ಅವರ ಯಶಸ್ಸಿನ ಮಂತ್ರ ಅವರಲ್ಲಿರುವ ಆತ್ಮವಿಶ್ವಾಸ. ಅದಕ್ಕಾಗಿಯೇ ಅವರು ಇನ್ನೂ ನಿವೃತ್ತಿಯಾಗಿಲ್ಲ. ಅವರು 2027ರ ಏಕದಿನ ವಿಶ್ವಕಪ್ ಆಡಲು ಬಯಸುತ್ತಿದ್ದಾರೆ. ಇದಾದ ನಂತರವೇ ಅವರು ನಿವೃತ್ತಿಯಾಗುತ್ತಾರೆ. ವಿಶ್ವಕಪ್‌ಗಾಗಿ ಅವರು ತಯಾರಿ ನಡೆಸುತ್ತಿದ್ದಾರೆ ಎಂದು ದಿನೇಶ್ ಲಾಡ್ ಹೇಳಿದ್ದಾರೆ.

79
ಇನ್ನೂ ಏಕದಿನ ವಿಶ್ವಕಪ್ ಗೆಲ್ಲದ ರೋಹಿತ್ ಶರ್ಮಾ

ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಈಗಾಗಲೇ ಐಸಿಸಿ ಟಿ20 ವಿಶ್ವಕಪ್, ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಎರಡೆರಡು ಬಾರಿ ಜಯಿಸಿದ್ದಾರೆ. ಆದರೆ ಐಸಿಸಿ ಏಕದಿನ ವಿಶ್ವಕಪ್ ಗೆಲ್ಲಲು ಅವರಿಗೆ ಸಾಧ್ಯವಾಗಿಲ್ಲ.

89
2023ರ ವಿಶ್ವಕಪ್ ಫೈನಲ್ ಸೋತ ರೋಹಿತ್ ಪಡೆ

2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಫೈನಲ್ ಪ್ರವೇಶಿಸಿತ್ತಾದರೂ, ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿತ್ತು. ರೋಹಿತ್ ಶರ್ಮಾ ಶತಾಯಗತಾಯ 2027ರ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದು, ಇದಕ್ಕಾಗಿ ಫಿಟ್ನೆಸ್ ಕಡೆಯೂ ಗಮನ ಹರಿಸಿದ್ದಾರೆ.

99
ರೋಹಿತ್ ಶರ್ಮಾ ಮುಂದಿದೆ ದೊಡ್ಡ ಸವಾಲು

ಸದ್ಯ ರೋಹಿತ್ ಶರ್ಮಾ ಅವರಿಗೆ 38 ವರ್ಷ. 2027ರ ಏಕದಿನ ವಿಶ್ವಕಪ್ ಟೂರ್ನಿ ವೇಳೆಗೆ ಹಿಟ್‌ಮ್ಯಾನ್‌ಗೆ 40 ವರ್ಷವಾಗಿರಲಿದೆ. ಅಲ್ಲಿಯವರೆಗೂ ಫಾರ್ಮ್‌ ಹಾಗೂ ಫಿಟ್ನೆಸ್ ಕಾಯ್ದುಕೊಳ್ಳುವುದು ರೋಹಿತ್ ಶರ್ಮಾ ಅವರ ಮುಂದಿರುವ ದೊಡ್ಡ ಸವಾಲಾಗಿದೆ.

Read more Photos on
click me!

Recommended Stories