ಶತಕ ಸಿಡಿಸಿ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಮೇಲೆ ತಿರುಗಿಬಿದ್ದ ಟೀಂ ಇಂಡಿಯಾ ಮಾಜಿ ನಾಯಕ!

Published : Oct 27, 2025, 12:10 PM IST

ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಇದೀಗ, ಬಿಸಿಸಿಐ ಆಯ್ಕೆ ಸಮಿತಿ ಮೇಲೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇದರ ಜತೆಗೆ ವಯಸ್ಸು ಕೇವಲ ನಂಬರ್ ಅಷ್ಟೇ ಎನ್ನುವ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. 

PREV
19
ರಹಾನೆ ಆಯ್ಕೆ ಸಮಿತಿ ಮೇಲೆ ಅಸಮಾಧಾನ

ಕಳೆದ 2 ವರ್ಷಗಳಿಂದ ಭಾರತ ತಂಡದಿಂದ ಹೊರಗುಳಿದಿರುವ ಹಿರಿಯ ಕ್ರಿಕೆಟಿಗ ಹಾಗೂ ಮಾಜಿ ನಾಯಕ ಅಜಿಂಕ್ಯ ರಹಾನೆ, ತಮ್ಮನ್ನು ತಂಡಕ್ಕೆ ಆಯ್ಕೆ ಮಾಡದಿರುವುದಕ್ಕೆ ಆಯ್ಕೆ ಸಮಿತಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

29
ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ರಹಾನೆ ಭರ್ಜರಿ ಶತಕ

ಛತ್ತೀಸ್‌ಗಢ ವಿರುದ್ಧ ರಣಜಿ ಪಂದ್ಯದಲ್ಲಿ ಮುಂಬೈ ಪರ 159 ರನ್ ಸಿಡಿಸಿದ 37 ವರ್ಷದ ಅಜಿಂಕ್ಯ ರಹಾನೆ, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.

39
ವಯಸ್ಸು ಕೇವಲ ಸಂಖ್ಯೆ ಮಾತ್ರ ಎಂದ ರಹಾನೆ

'ವಯಸ್ಸು ಕೇವಲ ಸಂಖ್ಯೆ ಮಾತ್ರ. ಆಟಗಾರನಾಗಿ ನೀವು ಅನುಭವ ಹೊಂದಿದ್ದರೆ, ಈಗಲೂ ದೇಸಿ ಕ್ರಿಕೆಟ್ ಆಡುತ್ತಿದ್ದರೆ, ಉತ್ತಮ ಪ್ರದರ್ಶನ ನೀಡುತ್ತಿದ್ದರೆ ಆಯ್ಕೆ ಸಮಿತಿ ಪರಿಗಣಿಸಬೇಕು. ಅವರು ನೋಡಬೇಕಿರುವುದು ವಯಸ್ಸನ್ನಲ್ಲ, ಆಟಗಾರರಲ್ಲಿರುವ ಉದ್ದೇಶ, ಅವರ ಕಠಿಣ ಪರಿಶ್ರಮ ಹಾಗೂ ಆಟವನ್ನು' ಎಂದು ತೀಕ್ಷ್ಮವಾಗಿ ಪ್ರತಿಕ್ರಿಯಿಸಿ ದ್ದಾರೆ.

49
ಆಯ್ಕೆ ಸಮಿತಿ ಮೇಲೆ ರಹಾನೆ ಅಸಮಾಧಾನ

'2024-25ರ ಆಸ್ಟ್ರೇಲಿಯಾ ಸರಣಿಯಲ್ಲಿ ಭಾರತಕ್ಕೆ ನನ್ನ ಅಗತ್ಯವಿತ್ತು. ಸರಣಿಗೆ ನಾನು ಸಿದ್ಧನಾಗಿಯೇ ಇದ್ದೆ ಎಂದಿರುವ ಅವರು, ನನ್ನನ್ನು ತಂಡದಿಂದ ಹೊರಗಿಡುವಾಗ ಆಯ್ಕೆ ಸಮಿತಿ ಸರಿಯಾದ ಮಾಹಿತಿ ಕೂಡಾ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

59
2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿ ಸೋತ ಭಾರತ

2024-25ರ ಆಸೀಸ್ ಪ್ರವಾಸದಲ್ಲಿ ಭಾರತ ಹೀನಾಯವಾಗಿ ಸೋಲುವುದರೊಂದಿಗೆ ಬಾರ್ಡರ್-ಗವಾಸ್ಕರ್ ಸರಣಿಯನ್ನು ಕೈಚೆಲ್ಲಿತ್ತು. ಇದರ ಜತೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರುವ ಸುವರ್ಣಾವಕಾಶವನ್ನು ಮಿಸ್ ಮಾಡಿಕೊಂಡಿತ್ತು.

69
ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದುಕೊಟ್ಟ ನಾಯಕ ರಹಾನೆ

2020-21ರ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ, ನಾಯಕನಾಗಿದ್ದ ವಿರಾಟ್ ಕೊಹ್ಲಿ, ಮೊದಲ ಮಗುವಿನ ನಿರೀಕ್ಷೆಯಿಂದಾಗಿ ಮೊದಲ ಪಂದ್ಯದ ಬಳಿಕ ತಂಡವನ್ನು ತೊರೆದಿದ್ದರು. ಆಗ ಹಂಗಾಮಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದ ರಹಾನೆ 2-1 ಅಂತರದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

79
2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ರಹಾನೆ ಕೊನೆ ಆಟ

ಅಜಿಂಕ್ಯ ರಹಾನೆ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಕೊನೆಯ ಬಾರಿಗೆ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ವಿಫಲವಾಗುತ್ತಲೇ ಬಂದಿದ್ದಾರೆ.

89
ಅಜಿತ್ ಅಗರ್ಕರ್ ಅವರಿಂದ ಹಿರಿಯ ಆಟಗಾರರ ಕಡೆಗಣನೆ

ಅಜಿತ್ ಅಗರ್ಕರ್‌, ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥರಾದ ಬಳಿಕ ಹಿರಿಯ ಆಟಗಾರರನ್ನು ಕಡೆಗಣಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಲೇ ಇದೆ. ಅಶ್ವಿನ್, ಪೂಜಾರ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರೇ, ಕೊಹ್ಲಿ-ರೋಹಿತ್ ಟೆಸ್ಟ್ ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

99
ಕಮ್‌ಬ್ಯಾಕ್ ಮಾಡ್ತಾರಾ ರಹಾನೆ?

ಇದೆಲ್ಲದರ ನಡುವೆ ಅಜಿಂಕ್ಯ ರಹಾನೆ ಅವರ ಈ ಅಭಿಪ್ರಾಯ, ಕ್ರಿಕೆಟ್ ವಲಯದಲ್ಲಿ ಸಂಚಲನವನ್ನುಂಟು ಮಾಡಿದೆ. ರಹಾನೆ ಮತ್ತೆ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡ್ತಾರಾ ಕಾದು ನೋಡಬೇಕಿದೆ.

Read more Photos on
click me!

Recommended Stories