ಒನ್ ಲಾಸ್ಟ್ ಟೈಂ ಎನ್ನುತ್ತಲೇ ನಿವೃತ್ತಿಯ ಸುಳಿವು ನೀಡಿದ್ರಾ ಹಿಟ್ ಮ್ಯಾನ್?, ಸೆನ್ಸೇಶನ್ ಕ್ರಿಯೇಟ್ ಮಾಡಿದ ಪೋಸ್ಟ್

Published : Oct 26, 2025, 09:26 PM IST

Rohit Sharma retirement: ರೋಹಿತ್‌ ಬ್ಯಾಟಿಂಗ್‌ ಎಷ್ಟು ರೋಚಕವಾಗಿತ್ತೋ ಪಂದ್ಯದ ನಂತರ ರೋಹಿತ್ ನೀಡಿದ ಹೇಳಿಕೆ ಸಾಕಷ್ಟು ಸಂಚಲನ ಮೂಡಿಸಿತ್ತು. ಅದರ ಬೆನ್ನಲ್ಲೇ ಈಗ, ತಮ್ಮ ಇನ್ಟ್ಸಾಗ್ರಾಂ ಖಾತೆಯಲ್ಲಿ ನಿಗೂಢ ಪೋಸ್ಟ್‌ನೊಂದಿಗೆ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದ್ದಾರೆ. 

PREV
15
ಹೆಚ್ಚಿದ ಅಭಿಮಾನಿಗಳ ಕುತೂಹಲ

ಆಸ್ಟ್ರೇಲಿಯಾದಲ್ಲಿ ನಡೆದ ODI ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾ ಅದ್ಭುತ ಪ್ರದರ್ಶನ ನೀಡಿದರು. ಅವರು ಎರಡನೇ ಪಂದ್ಯದಲ್ಲಿ ಅರ್ಧಶತಕ ಮತ್ತು ಮೂರನೇ ಪಂದ್ಯದಲ್ಲಿ ಅಜೇಯ ಶತಕ ಗಳಿಸಿದರು. ರೋಹಿತ್ ಅವರ ಅಜೇಯ ಶತಕವು ಭಾರತ ಮೂರನೇ ಪಂದ್ಯವನ್ನು ಒಂಭತ್ತು ವಿಕೆಟ್‌ಗಳಿಂದ ಗೆಲ್ಲಲು ಸಹಕಾರಿಯಾಯಿತು. ರೋಹಿತ್‌ ಬ್ಯಾಟಿಂಗ್‌ ಎಷ್ಟು ರೋಚಕವಾಗಿತ್ತೋ ಪಂದ್ಯದ ನಂತರ ರೋಹಿತ್ ನೀಡಿದ ಹೇಳಿಕೆ ಸಾಕಷ್ಟು ಸಂಚಲನ ಮೂಡಿಸಿತ್ತು. ಅದರ ಬೆನ್ನಲ್ಲೇ ಈಗ, ತಮ್ಮ ಇನ್ಟ್ಸಾಗ್ರಾಂ ಖಾತೆಯಲ್ಲಿ ನಿಗೂಢ ಪೋಸ್ಟ್‌ನೊಂದಿಗೆ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದ್ದಾರೆ.

25
ವಿಮಾನ ನಿಲ್ದಾಣದಿಂದ ನಿರ್ಗಮಿಸುವ ಫೋಟೋ

ರೋಹಿತ್ ಶರ್ಮಾ ಏಕದಿನ ಸರಣಿಯಲ್ಲಿ 202 ರನ್ ಗಳಿಸಿ, ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಪಂದ್ಯದ ನಂತರ ಅವರು ಆಸ್ಟ್ರೇಲಿಯಾಕ್ಕೆ ಧನ್ಯವಾದ ಅರ್ಪಿಸಿದರು. ಭಾನುವಾರ, ರೋಹಿತ್ ಶರ್ಮಾ ವಿಮಾನ ನಿಲ್ದಾಣದಿಂದ ನಿರ್ಗಮಿಸುವ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಲ್ಲದೆ, ಫೋಟೋ ಮೇಲೆ ಬರೆದಿರುವ ಸಾಲು ಅಭಿಮಾನಿಗಳಲ್ಲಿ ಅವರ ನಿವೃತ್ತಿಯ ಬಗ್ಗೆ ಊಹಾಪೋಹಗಳಿಗೆ ಉತ್ತೇಜನ ನೀಡಿದೆ.

35
ಸಂಚಲನ ಸೃಷ್ಟಿಸಿದ ರೋಹಿತ್ ಪೋಸ್ಟ್

ರೋಹಿತ್ ಶರ್ಮಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಮಾನ ನಿಲ್ದಾಣದಿಂದ ಹೊರಬರುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದು, ಫೋಟೋಕ್ಕಾಗಿ ಹಿಂದಿನಿಂದ ಪೋಸ್ ನೀಡಿದ್ದಾರೆ. ಅದರಲ್ಲಿ ಅವರು ವಿದಾಯದ ಸಿಗ್ನಲ್ ತೋರಿಸುತ್ತಾ ಕೈ ಎತ್ತುತ್ತಿರುವುದು ಕಂಡುಬರುತ್ತದೆ. ಹಾಗೆಯೇ ತಮ್ಮ ಪೋಸ್ಟ್‌ನಲ್ಲಿ "ಕೊನೆಯ ಬಾರಿಗೆ ಸಿಡ್ನಿಗೆ ವಿದಾಯ ಹೇಳುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

45
ಮಾಜಿ ನಾಯಕನ ಕೊನೆಯ ಪ್ರವಾಸ

ಅವರ ಇನ್‌ಸ್ಟಾಗ್ರಾಂ ಸ್ಟೋರಿಯು ಇದು ಭಾರತದ ಮಾಜಿ ನಾಯಕನ ಕ್ರಿಕೆಟ್‌ ಜೀವನದ ಕೊನೆಯ ಆಸ್ಟ್ರೇಲಿಯಾ ಪ್ರವಾಸ ಎಂದು ಸ್ಪಷ್ಟಪಡಿಸಿದೆ. ಆದರೆ, ತಮ್ಮ ಕ್ರಿಕೆಟ್‌ ಜೀವನ ಇನ್ನೂ ಮುಗಿದಿಲ್ಲ ಎಂದು ತಮ್ಮ ಆಟದ ಮೂಲಕ ತೋರಿಸಿರುವ ರೋಹಿತ್ ಶರ್ಮಾ, ಸದ್ಯಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವುದಿಲ್ಲ ಎಂದು ಪರೋಕ್ಷವಾಗಿ ಘೋಷಿಸಿದ್ದಾರೆ. ಮೈದಾನದಲ್ಲಿ ಸಾಕಷ್ಟು ಫಿಟ್ ಆಗಿ ಕಾಣಿಸಿಕೊಂಡಿರುವ ರೋಹಿತ್‌, ತೂಕ ಇಳಿಸಿಕೊಂಡಿದ್ದಾರೆ. ಜತೆಗೆ ಹಿಂದಿನ ಲಯದಲ್ಲಿಯೇ ಏಕದಿನ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.

55
ರೋಹಿತ್‌ ಅದ್ಭುತ ಪ್ರದರ್ಶನ

ಆಸ್ಟ್ರೇಲಿಯಾ ಪ್ರವಾಸದ ನಂತರ ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಪಿಟಿಐ ವರದಿ ಪ್ರಕಾರ, ರೋಹಿತ್ ಶರ್ಮಾ ಅವರ ಬಾಲ್ಯದ ತರಬೇತುದಾರ 2027ರ ಏಕದಿನ ವಿಶ್ವಕಪ್ ನಂತರವೇ ನಿವೃತ್ತಿ ಹೊಂದುವ ಉದ್ದೇಶ ಹೊಂದಿದ್ದಾರೆ ಎಂದು ದೃಢಪಡಿಸಿದ್ದಾರೆ ಎಂದು ತಿಳಿಸಲಾಗಿದೆ. ಆಸ್ಟ್ರೇಲಿಯಾ ಪ್ರವಾಸದ ಮೂರು ಪಂದ್ಯಗಳಲ್ಲಿ ರೋಹಿತ್ ಶರ್ಮಾ ತಮ್ಮ ಬ್ಯಾಟ್‌ ಮೂಲಕ ಕ್ರಮವಾಗಿ 8, 73 ಮತ್ತು ಔಟಾಗದೆ 121 ರನ್‌ಗಳನ್ನು ಸಿಡಿಸಿದ್ದಾರೆ. ಅವರ ಈ ಪ್ರದರ್ಶನವು 2027ರ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ ಎಂಬುದನ್ನು ತೋರಿಸಿದೆ.

Read more Photos on
click me!

Recommended Stories