ಸಚಿನ್, ದ್ರಾವಿಡ್, ಕೊಹ್ಲಿಯಂತ ಕ್ರಿಕೆಟ್ ದಂತಕಥೆಗಳ ಸಾಲಿಗೆ ಸೇರಿದ ರೋಹಿತ್ ಶರ್ಮಾ!

Published : Oct 19, 2025, 04:17 PM IST

ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ತಮ್ಮ 500ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು. ಈ ಮೂಲಕ ಈ ಸಾಧನೆ ಮಾಡಿದ ಐದನೇ ಭಾರತೀಯ ಆಟಗಾರ ಎಂಬ ಇತಿಹಾಸ ನಿರ್ಮಿಸಿದರು.

PREV
16
500 ಪಂದ್ಯಗಳ ಮೈಲಿಗಲ್ಲು ತಲುಪಿದ ರೋಹಿತ್ ಶರ್ಮಾ ದಾಖಲೆ

ಪರ್ತ್‌ನಲ್ಲಿ ಭಾನುವಾರ (ಅಕ್ಟೋಬರ್ 19) ನಡೆದ ಭಾರತ-ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಅಪರೂಪದ ಸಾಧನೆ ಮಾಡಿದ್ದಾರೆ. ಈ ಪಂದ್ಯದ ಮೂಲಕ ಅವರು ತಮ್ಮ 500ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ ಆಟಗಾರರಾದರು. ಈ ಮೂಲಕ ಭಾರತದ ದಿಗ್ಗಜ ಆಟಗಾರರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಎಂಎಸ್ ಧೋನಿ ಮತ್ತು ರಾಹುಲ್ ದ್ರಾವಿಡ್ ಅವರ ಸಾಲಿಗೆ ಸೇರಿದರು.

ರೋಹಿತ್ ಶರ್ಮಾ ತಮ್ಮ 38ನೇ ವಯಸ್ಸಿನಲ್ಲಿ ಈ ಐತಿಹಾಸಿಕ ಮೈಲಿಗಲ್ಲನ್ನು ತಲುಪಿರುವುದು ವಿಶೇಷ. ವಿಶ್ವದಾದ್ಯಂತ, 500 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ 11ನೇ ಆಟಗಾರ ರೋಹಿತ್ ಆಗಿದ್ದಾರೆ.

26
5ನೇ ಭಾರತೀಯ ಆಟಗಾರನಾಗಿ ರೋಹಿತ್ ಶರ್ಮಾ ದಾಖಲೆ

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಐದನೇ ಆಟಗಾರ ರೋಹಿತ್ ಶರ್ಮಾ. ಅವರಿಗಿಂತ ಮೊದಲು ಸಚಿನ್ ತೆಂಡೂಲ್ಕರ್ (664 ಪಂದ್ಯಗಳು), ವಿರಾಟ್ ಕೊಹ್ಲಿ (551*), ಎಂ ಎಸ್ ಧೋನಿ (538), ಮತ್ತು ರಾಹುಲ್ ದ್ರಾವಿಡ್ (509) ಈ ಮೈಲಿಗಲ್ಲನ್ನು ಸಾಧಿಸಿದ್ದಾರೆ.

ರೋಹಿತ್ ತಮ್ಮ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ 274 ಏಕದಿನ, 67 ಟೆಸ್ಟ್ ಮತ್ತು 159 ಟಿ20 ಪಂದ್ಯಗಳನ್ನು ಆಡಿದ್ದಾರೆ. ಭಾರತದ ಪರ ಅತಿ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ ಆಟಗಾರ ಕೂಡ ರೋಹಿತ್ ಶರ್ಮಾ.

36
ರೋಹಿತ್ ಶರ್ಮಾ ಅವರ ಅದ್ಭುತ ದಾಖಲೆಗಳು

500 ಪಂದ್ಯಗಳಲ್ಲಿ ರೋಹಿತ್ ಶರ್ಮಾ ಒಟ್ಟು 19,700 ರನ್ ಗಳಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 42.18, ಇದರಲ್ಲಿ 49 ಶತಕಗಳು ಮತ್ತು 108 ಅರ್ಧಶತಕಗಳು ಸೇರಿವೆ. ಏಕದಿನ ಪಂದ್ಯಗಳಲ್ಲಿ ಹಿಟ್‌ಮ್ಯಾನ್ 11,168 ರನ್ ಗಳಿಸಿದ್ದು, 48.76 ಸರಾಸರಿ ಮತ್ತು 92.80 ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಇನ್ನೂ 54 ರನ್ ಗಳಿಸಿದರೆ, ರೋಹಿತ್ ಶರ್ಮಾ ಮಾಜಿ ನಾಯಕ ಸೌರವ್ ಗಂಗೂಲಿ (11,221) ಅವರನ್ನು ಹಿಂದಿಕ್ಕಿ ಭಾರತದ ಏಕದಿನ ಇತಿಹಾಸದಲ್ಲಿ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗುತ್ತಾರೆ.  

46
50ನೇ ಶತಕದತ್ತ ರೋಹಿತ್ ಶರ್ಮಾ

ಪ್ರಸ್ತುತ ರೋಹಿತ್ ಶರ್ಮಾ 49 ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದ್ದಾರೆ. ಇನ್ನೊಂದು ಶತಕದೊಂದಿಗೆ, ಅವರು 50 ಶತಕಗಳನ್ನು ಗಳಿಸಿದ ಆಟಗಾರರಾಗುತ್ತಾರೆ. ವಿಶ್ವದಾದ್ಯಂತ ಇಲ್ಲಿಯವರೆಗೆ ಕೇವಲ ಒಂಬತ್ತು ಆಟಗಾರರು ಮಾತ್ರ ಈ ಸಾಧನೆ ಮಾಡಿದ್ದಾರೆ. ಭಾರತೀಯ ಆಟಗಾರರಲ್ಲಿ ಸಚಿನ್ ತೆಂಡೂಲ್ಕರ್ (100) ಮತ್ತು ವಿರಾಟ್ ಕೊಹ್ಲಿ (82) ಮಾತ್ರ ಈ ಪಟ್ಟಿಯಲ್ಲಿದ್ದಾರೆ.

56
ಆಸ್ಟ್ರೇಲಿಯಾದಲ್ಲಿ ಅದ್ಭುತ ದಾಖಲೆ, ಹೊಸ ಗುರಿ

ಆಸ್ಟ್ರೇಲಿಯಾದಲ್ಲಿ ರೋಹಿತ್ ಶರ್ಮಾ ಇದುವರೆಗೆ 19 ಪಂದ್ಯಗಳಲ್ಲಿ 990 ರನ್ ಗಳಿಸಿದ್ದಾರೆ. ಅವರ ಸರಾಸರಿ 58.23. ಇದರಲ್ಲಿ ನಾಲ್ಕು ಶತಕಗಳು ಮತ್ತು ಎರಡು ಅರ್ಧಶತಕಗಳು ಸೇರಿವೆ. ಈ ಸರಣಿಯಲ್ಲಿ ಇನ್ನೂ 10 ರನ್ ಗಳಿಸಿದರೆ, ಆಸ್ಟ್ರೇಲಿಯಾ ನೆಲದಲ್ಲಿ 1,000 ರನ್ ಗಳಿಸಿದ ಮೊದಲ ಭಾರತೀಯ ಆಟಗಾರರಾಗುತ್ತಾರೆ.

ಹಾಗೆಯೇ, ಅವರು 344 ಸಿಕ್ಸರ್‌ಗಳೊಂದಿಗೆ ಏಕದಿನ ಪಂದ್ಯಗಳಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಶಾಹಿದ್ ಅಫ್ರಿದಿ (351) ಅವರ ದಾಖಲೆಯನ್ನು ಮುರಿಯಲು ಕೇವಲ ಎಂಟು ಸಿಕ್ಸರ್‌ಗಳು ಬೇಕಾಗಿವೆ.

66
ರೋಹಿತ್ ನಾಯಕತ್ವದ ಯಶಸ್ಸು

ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ 2024ರಲ್ಲಿ ಟಿ20 ವಿಶ್ವಕಪ್ ಗೆದ್ದಿತು. ಆ ನಂತರ ಅವರು ಟಿ20 ಮಾದರಿಯಿಂದ ನಿವೃತ್ತರಾದರು. 2025ರಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು. ಆ ನಂತರ ಟೆಸ್ಟ್‌ಗೆ ವಿದಾಯ ಹೇಳಿ ಸದ್ಯ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಮುಂದುವರೆಯುತ್ತಿದ್ದಾರೆ.

223 ದಿನಗಳ ವಿರಾಮದ ನಂತರ ಪರ್ತ್‌ನಲ್ಲಿ ಏಕದಿನ ಪಂದ್ಯಕ್ಕೆ ಮರಳಿದ ಅವರು, ಅದೇ ಪಂದ್ಯದಲ್ಲಿ 500ನೇ ಪಂದ್ಯದೊಂದಿಗೆ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದರು. ಈ ಮೂಲಕ ಹಿಟ್‌ಮ್ಯಾನ್ ಭಾರತೀಯ ಕ್ರಿಕೆಟ್‌ನಲ್ಲಿ ಮತ್ತೊಂದು ಸುವರ್ಣ ಪುಟವನ್ನು ಬರೆದರು.

Read more Photos on
click me!

Recommended Stories