Powerful Temple In Karnataka: ಮಂಗಳೂರಿನಲ್ಲಿ ಸಾಕಷ್ಟು ಶಕ್ತಿಶಾಲಿ ದೇಗುಲಗಳಿವೆ. ಕ್ರಿಕೆಟರ್ ಸೂರ್ಯ ಕುಮಾರ್ ಯಾದವ್ ಅವರಿಗೆ ಕರ್ನಾಟಕದ ಈ ದೇವಸ್ಥಾನದಲ್ಲಿ ನುಡಿದ ಭವಿಷ್ಯ ನಿಜವಾಯ್ತು. ಹಾಗಾದರೆ ಆ ದೇವಸ್ಥಾನ ಯಾವುದು? ಎಲ್ಲಿದೆ?
ಅಂದು ಆ ದೇಗುಲದ ಪ್ರಧಾನ ತಂತ್ರಿಗಳು ಸೂರ್ಯಕುಮಾರ್ ಯಾದವ್ ಅವರಿಗೆ “ನೀನು ಇಂಡಿಯನ್ ಕ್ರಿಕೆಟ್ ಟೀಂನ ಕ್ಯಾಪ್ಟನ್ ಆಗ್ತೀಯಾ” ಎಂದು ಹೇಳಿದ್ದರು. ಆಗ ಸೂರ್ಯ “ಇದೆಲ್ಲ ಆಗೋದಿಲ್ಲ, ನಡೆಯೋದಿಲ್ಲ” ಎಂದು ಹೇಳಿದ್ದರು. ಆಮೇಲೆ ಸೂರ್ಯ ಅವರು ಇಂಡಿಯನ್ ಕ್ಯಾಪ್ಟರ್ ಆದರು.
26
ಸೂರ್ಯ ಕುಮಾರ್ ಯಾದವ್ ಸಾಧನೆಗಳಿವು
ಸೂರ್ಯ ಕುಮಾರ್ ಯಾದವ್ ಅವರು ಬಲಗೈ ಬ್ಯಾಟ್ಸ್‌ಮನ್. ಅವರು ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದಾರೆ, ಟ್ವೆಂಟಿ20 ಅಂತರಾಷ್ಟ್ರೀಯ ತಂಡದ ನಾಯಕರಾಗಿದ್ದರು. 2024ರ ಪುರುಷರ T20 ವಿಶ್ವಕಪ್ ಗೆದ್ದ ರಾಷ್ಟ್ರೀಯ ತಂಡದಲ್ಲಿದ್ದರು. ಅವರು 2025ರಲ್ಲಿ ಏಷ್ಯಾ ಕಪ್ ಗೆದ್ದ ತಂಡವನ್ನು ಮುನ್ನಡೆಸಿದ್ದರು. 2023ರಲ್ಲಿನ ಪ್ರಶಸ್ತಿ ವಿಜೇತ ತಂಡದ ಸದಸ್ಯರಾಗಿದ್ದರು.
36
ಆ ದೇವಸ್ಥಾನ ಯಾವುದು?
ಉಡುಪಿ ಜಿಲ್ಲೆಯ ಕಾಪು ಪಟ್ಟಣವು ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಕಾಪು ಶ್ರೀ ಮಾರಿಯಮ್ಮ ದೇವಸ್ಥಾನ ಫೇಮಸ್ ಆಗಿದೆ. ಇದು ಕೇವಲ ಒಂದು ಪೂಜಾ ಸ್ಥಳವಲ್ಲದೆ, ಸ್ಥಳೀಯ ಸಂಸ್ಕೃತಿ, ಇತಿಹಾಸವನ್ನು ಹೊಂದಿದೆ. ಇಲ್ಲಿನ ತಂತ್ರಿಗಳೇ ಸೂರ್ಯ ಕುಮಾರ್‌ಗೆ ಭವಿಷ್ಯ ನುಡಿದಿದ್ದರು. ಅಂದಹಾಗೆ ಶಿಲ್ಪಾ ಶೆಟ್ಟಿ, ಕಂಗನಾ ರಣಾವತ್ ಕೂಡ ಇಲ್ಲಿಗೆ ಬಂದು ಹೋಗಿದ್ದಾರೆ. ಸೂರ್ಯ ಕುಮಾರ್ ಅವರು ಕಳೆದ ವರ್ಷ ಹರಕೆ ತೀರಿಸಿದ್ದರು.
ಹಲವು ಶತಮಾನಗಳಷ್ಟು ಹಳೆಯದಾಗಿರುವ ಕಾಪು ಮಾರಿಯಮ್ಮ ದೇವಸ್ಥಾನದ ಮೂಲ ಇತಿಹಾಸದ ಬಗ್ಗೆ ಸ್ಪಷ್ಟ ದಾಖಲೆ ಇಲ್ಲ. ಕಾಪು ಅರಮನೆಯ ಇತಿಹಾಸದೊಂದಿಗೆ ಈ ದೇವಾಲಯಕ್ಕೂ ಸಂಬಂಧವಿದೆ ಎನ್ನಲಾಗಿದೆ. ಅರಮನೆಯ ಅಧಿದೇವತೆಯಾಗಿ ಮಾರಿಯಮ್ಮನನ್ನು ಪೂಜಿಸಲಾಗುತ್ತಿತ್ತು.
56
ಜನರು ಪ್ರಾರ್ಥನೆ ಮಾಡೋದು ಏನು?
ಜನರು ತಮ್ಮ ಕಷ್ಟಕಾರ್ಪಣ್ಯಗಳನ್ನು ನಿವಾರಿಸಲು, ಉತ್ತಮ ಆರೋಗ್ಯಕ್ಕಾಗಿ, ಕುಟುಂಬದ ಒಳಿತಿಗಾಗಿ ಈ ದೇವಿ ಮೊರೆ ಹೋಗುತ್ತಾರೆ. ಇಲ್ಲಿ ವಿಶೇಷವಾಗಿ ಮಂಗಳವಾರ, ಶುಕ್ರವಾರದಂದು ಹೆಚ್ಚಿನ ಸಂಖ್ಯೆಯ ಭಕ್ತರು ಬರುತ್ತಾರೆ.
66
ಹೇಗೆ ಹೋಗಬೇಕು?
ಕಾಪು ಮಾರಿಯಮ್ಮ ದೇಗುಲವು ಮಂಗಳೂರು, ಉಡುಪಿ ಮಧ್ಯೆ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಸಮೀಪದಲ್ಲಿದೆ. ಉಡುಪಿಯಿಂದ ಸುಮಾರು 15 ಕಿ.ಮೀ, ಮಂಗಳೂರಿನಿಂದ 45 ಕಿ.ಮೀ ದೂರದಲ್ಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.