ಪರ್ತ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ಮಳೆರಾಯ ಪದೇ ಪದೇ ಅಡ್ಡಿಯಾಗುತ್ತಿದ್ದು, ಮತ್ತೆ ಮ್ಯಾಚ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಇದೀಗ ಓವರ್ ರೂಲ್ಸ್‌ನಲ್ಲಿ ಮತ್ತೊಮ್ಮೆ ಬದಲಾವಣೆ ಮಾಡಲಾಗಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟರ್‌ಗಳು ರನ್ ಗಳಿಸಲು ಪರದಾಡುತ್ತಿದ್ದರೇ, ಮಳೆರಾಯ ಪದೇ ಪದೇ ಪಂದ್ಯಕ್ಕೆ ಅಡ್ಡಿ ಪಡಿಸುತ್ತಿದ್ದಾನೆ.
28
ಒಂದು ಕಡೆ ಆಸ್ಟ್ರೇಲಿಯಾ ಬೌಲರ್‌ಗಳು ಶಿಸ್ತುಬದ್ದ ದಾಳಿ ನಡೆಸುವ ಮೂಲಕ ಟೀಂ ಇಂಡಿಯಾ ಬ್ಯಾಟರ್‌ಗಳನ್ನು ಕಾಡುತ್ತಿದ್ದಾರೆ. ಇನ್ನೊಂದೆಡೆ ಮಳೆ ಮತ್ತೆ ಮತ್ತೆ ಪಂದ್ಯಕ್ಕೆ ಅಡ್ಡಿಯಾಗುತ್ತಿದೆ.
38
ಮೊದಲ ಬಾರಿಗೆ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದಾಗ ಒಂದು ಓವರ್ ಕಡಿತಗೊಳಿಸಿ ಪಂದ್ಯವನ್ನು ಪುನರಾರಂಭ ಮಾಡಲಾಯಿತು. ಇದಾದ ಬಳಿಕ ಮತ್ತೆ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿತು.
ಹೀಗಾಗಿ ಮ್ಯಾಚ್ ರೆಫ್ರಿ ಹಾಗೂ ಮ್ಯಾಚ್ ಸಿಬ್ಬಂದಿ ಮಳೆ ನಿಂತ ಬಳಿಕ 35 ಓವರ್‌ಗಳ ಪಂದ್ಯ ಮುಂದುವರೆಸಲು ತೀರ್ಮಾನಿಸಲಾಯಿತು. ಇದಾಗಿ ಒಂದು ಓವರ್ ಕಳೆಯುತ್ತಿದ್ದಂತೆಯೇ ಮತ್ತೆ ಮಳೆ ಅಡ್ಡಿ ಪಡಿಸಿತು.
58
ನಂತರ ಆಯೋಜಕರು 32 ಓವರ್‌ಗಳಿಗೆ ಪಂದ್ಯವನ್ನು ಸೀಮಿತಗೊಳಿಸಲಾಯಿತು. ಇಬ್ಬರು ಗರಿಷ್ಠ 7 ಓವರ್ ಹಾಗೂ ಮೂರು ಬೌಲರ್‌ಗಳು ಗರಿಷ್ಠ ಆರು ಓವರ್ ಬೌಲಿಂಗ್ ಮಾಡಲು ಅವಕಾಶ ನೀಡಲಾಯಿತು.
68
ಇದಾಗಿ ಎರಡು ಓವರ್ ಕಳೆಯುತ್ತಿದ್ದಂತೆಯೇ ಇದೀಗ ಮತ್ತೊಮ್ಮೆ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿದ್ದು, ಇದೀಗ ಪಂದ್ಯವನ್ನು 26 ಓವರ್‌ಗಳಿಗೆ ನಿಗದಿ ಪಡಿಸಲಾಗಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆಗೆ ಮ್ಯಾಚ್ ಪುನರಾರಂಭವಾಗಲಿದೆ.
78
ಸದ್ಯ ಭಾರತ ತಂಡವು 16.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 52 ರನ್ ಬಾರಿಸಿದ್ದು, ಆಲ್ರೌಂಡರ್ ಅಕ್ಷರ್ ಪಟೇಲ್ 14 ಹಾಗೂ ಕೆ ಎಲ್ ರಾಹುಲ್ 3 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
88
ಇನ್ನುಳಿದ 9.2 ಓವರ್‌ಗಳಲ್ಲಿ ಭಾರತ ತಂಡವು ಆಸ್ಟ್ರೇಲಿಯಾಗೆ ಎಷ್ಟು ರನ್ ಟಾರ್ಗೆಟ್ ನೀಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.