ಯುಪಿ ಟಿ20 ಲೀಗ್‌ನಲ್ಲಿ ರಿಂಕು ಸಿಂಗ್ ಕೇವಲ 45 ಎಸೆತಗಳಲ್ಲಿ ಸ್ಫೋಟಕ ಶತಕ ಬಾರಿಸಿದ್ದಾರೆ. ಈ ಮೂಲಕ ಏಷ್ಯಾಕಪ್ ಟೂರ್ನಿಗೂ ಮುನ್ನ ಫಾರ್ಮ್‌ಗೆ ಮರಳಿದ್ದು ಮಾತ್ರವಲ್ಲದೇ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
ಯುಪಿ ಟಿ20 ಲೀಗ್‌ನಲ್ಲಿ ರಿಂಕು ಸಿಂಗ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 45 ಎಸೆತಗಳಲ್ಲಿ ಶತಕ ಸಿಡಿಸಿ, ತಂಡಕ್ಕೆ ಗೆಲುವು ತಂದುಕೊಟ್ಟರು. ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆದಿರುವ ರಿಂಕು ಟೀಕಾಕಾರರಿಗೆ ಉತ್ತರ ನೀಡಿದ್ದಾರೆ.
25
ರಿಂಕು ಸಿಂಗ್ 48 ಎಸೆತಗಳಲ್ಲಿ 108 ರನ್ ಗಳಿಸಿ ಅಜೇಯರಾಗಿ ಉಳಿದರು. 8 ಸಿಕ್ಸರ್ ಮತ್ತು 7 ಬೌಂಡರಿಗಳೊಂದಿಗೆ ಅಬ್ಬರಿಸಿದರು.
35
ಗೋರಖ್‌ಪುರ್ ಲಯನ್ಸ್ 20 ಓವರ್‌ಗಳಲ್ಲಿ 167/9 ರನ್ ಗಳಿಸಿತು. ಮೀರಟ್ ತಂಡದ ಪರ ರಿಂಕು ಸಿಂಗ್ ಮತ್ತು ಸಾಹಬ್ ಯುವರಾಜ್ 130 ರನ್‌ಗಳ ಜೊತೆಯಾಟ ನೀಡಿದರು. ಯುವರಾಜ್ 22 ಎಸೆತಗಳಲ್ಲಿ 22 ರನ್ ಗಳಿಸಿದರು.
ಮೀರಟ್ ಮಾವರಿಕ್ಸ್ 18.5 ಓವರ್‌ಗಳಲ್ಲಿ ಗೆಲುವಿನ ಗುರಿ ತಲುಪಿತು. ರಿಂಕು ಸಿಂಗ್ ಅಜೇಯರಾಗಿ ಉಳಿದು ತಂಡಕ್ಕೆ ಗೆಲುವು ತಂದುಕೊಟ್ಟರು. ಇದರ ಜತೆಗೆ ಏಷ್ಯಾಕಪ್ ತಂಡದಲ್ಲಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.
55
ಏಷ್ಯಾಕಪ್ 2025ರಲ್ಲಿ 8 ತಂಡಗಳು ಭಾಗವಹಿಸುತ್ತಿವೆ. ಭಾರತ ತಂಡದಲ್ಲಿ ಸೂರ್ಯಕುಮಾರ್ ನಾಯಕರಾಗಿದ್ದು, ಶುಭ್‌ಮನ್ ಗಿಲ್ ಉಪನಾಯಕರಾಗಿದ್ದಾರೆ. ರಿಂಕು ಸಿಂಗ್, ಶಿವಂ ದುಬೆ, ಹರ್ಷಿತ್ ರಾಣಾ ತಂಡದಲ್ಲಿದ್ದಾರೆ.