ಐಪಿಎಲ್ 2026 ಮಿನಿ ಹರಾಜಿಗೂ ಮುನ್ನ ಈ 5 ಆಟಗಾರರಿಗೆ ಗೇಟ್‌ಪಾಸ್? ಇಲ್ಲಿವೆ ಅಚ್ಚರಿ ಹೆಸರುಗಳು

Published : Aug 23, 2025, 06:21 PM IST

ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು 2025ರ ಐಪಿಎಲ್ ಟೂರ್ನಿಯಲ್ಲಿ ಅಸಾಧಾರಣ ಪ್ರದರ್ಶನ ತೋರುವ ಮೂಲಕ ಫೈನಲ್ ಪ್ರವೇಶಿಸಿತ್ತು. ಆದರೆ ಆರ್‌ಸಿಬಿ ಎದುರು ಸೋತು ರನ್ನರ್ ಅಪ್‌ ಸ್ಥಾನ ಪಡೆಯಿತು. ಮಿನಿ ಹರಾಜಿಗೂ ಮುನ್ನ ಈ 5 ಆಟಗಾರರಿಗೆ ಗೇಟ್‌ಪಾಸ್ ನೀಡಲು ಪಂಜಾಬ್ ಫ್ರಾಂಚೈಸಿ ರೆಡಿಯಾಗಿದೆ

PREV
17

ಇಂಡಿಯನ್ ಪ್ರೀಮಿಯರ್ ಲೀಗ್‌ನ 18ನೇ ಆವೃತ್ತಿ ಪಂಜಾಬ್ ಕಿಂಗ್ಸ್‌ ಪಾಲಿಗೆ ಅದ್ಭುತವಾಗಿತ್ತು. ಶ್ರೇಯಸ್ ಅಯ್ಯರ್ ನಾಯಕತ್ವದ ತಂಡವು ಫೈನಲ್ ತಲುಪಿತು. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಮುಂದಿನ ಬಾರಿ ಶತಾಯಗತಾಯ ಕಪ್ ಗೆಲ್ಲಲು ಪಂಜಾಬ್ ಫ್ರಾಂಚೈಸಿ ರಣತಂತ್ರ ಹೆಣೆಯುತ್ತಿದೆ.

27

ಪ್ರತಿ ಐಪಿಎಲ್ ಸೀಸನ್‌ನಲ್ಲಿ ಹರಾಜು ನಡೆಯುತ್ತದೆ ಮತ್ತು ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗುತ್ತದೆ ಮತ್ತು ಬಿಡುಗಡೆ ಮಾಡಲಾಗುತ್ತದೆ. ಮುಂದಿನ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್‌ನಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ. ತಂಡ ಬಿಡುಗಡೆ ಮಾಡಬಹುದಾದ 5 ಆಟಗಾರರ ಬಗ್ಗೆ ತಿಳಿಸುತ್ತೇವೆ.

37
  1. ಕುಲ್ದೀಪ್ ಸೆನ್:

ಮೊದಲನೇ ಸ್ಥಾನದಲ್ಲಿ ಕುಲದೀಪ್ ಸೇನ್ ಹೆಸರಿರಬಹುದು. ಐಪಿಎಲ್ 2025 ಮೆಗಾ ಹರಾಜಿನಲ್ಲಿ ಈ ಆಟಗಾರನನ್ನು 80 ಲಕ್ಷ ರೂ.ಗೆ ಖರೀದಿಸಲಾಗಿತ್ತು. ಆದರೆ, ಈ ಆಟಗಾರನಿಗೆ ಒಂದೇ ಒಂದು ಪಂದ್ಯವನ್ನೂ ಆಡಲು ಅವಕಾಶ ಸಿಗಲಿಲ್ಲ. ಹೀಗಾಗಿ ಸೆನ್‌ಗೆ ಗೇಟ್‌ಪಾಸ್ ಸಿಗುವ ಸಾಧ್ಯತೆ ದಟ್ಟವಾಗಿದೆ.

47

2. ಕೈಲ್ ಜೇಮಿಸನ್:

ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಹೆಸರು ಕೈಲ್ ಜೇಮಿಸನ್ ಅವರದ್ದು. ಲಾಕಿ ಫರ್ಗುಸನ್ ಬದಲಿಗೆ ಈ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಪಂಜಾಬ್ ತಂಡ ಅವರಿಗೆ 4 ಪಂದ್ಯಗಳಲ್ಲಿ ಆಡಲು ಅವಕಾಶ ನೀಡಿತು. ಆದರೆ, ಅವರು ಕೇವಲ 5 ವಿಕೆಟ್‌ಗಳನ್ನು ಪಡೆದರು. 9.80ರ ಎಕಾನಮಿಯಲ್ಲಿ ರನ್‌ಗಳನ್ನು ನೀಡಿದರು. ಹೀಗಾಗಿ ಜೇಮಿಸನ್ ಅವರನ್ನು ಮಿನಿ ಹರಾಜಿಗೂ ಮುನ್ನ ಗೇಟ್‌ಪಾಸ್ ನೀಡುವ ಸಾಧ್ಯತೆ ದಟ್ಟವಾಗಿದೆ.

57

3. ಜೇವಿಯರ್ ಬಾರ್ಟ್ಲೆಟ್

ಮೂರನೇ ಸ್ಥಾನದಲ್ಲಿ ಮತ್ತೊಬ್ಬ ವಿದೇಶಿ ಆಟಗಾರ ಜೇವಿಯರ್ ಬಾರ್ಟ್ಲೆಟ್ ಹೆಸರಿರಬಹುದು. 80 ಲಕ್ಷ ರೂ.ಗೆ ಪಂಜಾಬ್ ಕಿಂಗ್ಸ್ ಈ ಆಟಗಾರನನ್ನು ಖರೀದಿಸಿತ್ತು. ಈ ವೇಗದ ಬೌಲರ್‌ಗೆ 4 ಪಂದ್ಯಗಳಲ್ಲಿ ಆಡಲು ಅವಕಾಶ ಸಿಕ್ಕಿತು. ಆದರೆ, ಕೇವಲ 4 ವಿಕೆಟ್ ಪಡೆದರು.

67

4. ಯಶ್ ಠಾಕೂರ್

ಪಂಜಾಬ್ ಕಿಂಗ್ಸ್ ಯಶ್ ಠಾಕೂರ್‌ರನ್ನು ಐಪಿಎಲ್ 2025 ಮೆಗಾ ಹರಾಜಿನಲ್ಲಿ 1.60 ಕೋಟಿ ರೂ.ಗೆ ಖರೀದಿಸಿತ್ತು. ಈ ವೇಗದ ಬೌಲರ್‌ಗೆ ಕೇವಲ 2 ಪಂದ್ಯಗಳಲ್ಲಿ ಆಡಲು ಅವಕಾಶ ಸಿಕ್ಕಿತು. ಅವರು 1 ವಿಕೆಟ್ ಪಡೆದರು. ಮುಂದಿನ ಸೀಸನ್‌ನಲ್ಲಿ ಈ ಆಟಗಾರನನ್ನು ಬಿಡುಗಡೆ ಮಾಡಬಹುದು.

77

5. ಗ್ಲೆನ್ ಮ್ಯಾಕ್ಸ್‌ವೆಲ್:

ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್‌ರನ್ನು ಕೂಡ ಮುಂದಿನ ಸೀಸನ್‌ನಲ್ಲಿ ಬಿಡುಗಡೆ ಮಾಡಬಹುದು. 4.2 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ಈ ಆಟಗಾರನನ್ನು ತಂಡದಲ್ಲಿರಿಸಿಕೊಂಡಿದೆ. ಈ ಸೀಸನ್‌ನಲ್ಲಿ ಅವರು ಒಟ್ಟು 7 ಪಂದ್ಯಗಳನ್ನು ಆಡಿ 6 ಇನ್ನಿಂಗ್ಸ್‌ಗಳಲ್ಲಿ ಕೇವಲ 48 ರನ್ ಗಳಿಸಿದ್ದಾರೆ. ಕಳೆದ 2 ಸೀಸನ್‌ಗಳಿಂದ ಅವರ ಬ್ಯಾಟ್ ನಿಶ್ಯಬ್ದವಾಗಿದೆ. ಹೀಗಾಗಿ ಈ ಆಟಗಾರನನ್ನು ಮುಂದಿನ ಸೀಸನ್‌ನಿಂದ ಬಿಡುಗಡೆ ಮಾಡಬಹುದು.

Read more Photos on
click me!

Recommended Stories