IPL 2026: ಒಂದ್ವೇಳೆ ಹೀಗಾದ್ರೆ, 18 ಅಂಕ ಗಳಿಸಿದ್ದರೂ ಗುಜರಾತ್ ಟೈಟಾನ್ಸ್ ಟಾಪ್-2 ಪಟ್ಟಿಯಿಂದ ಕುಸಿಯಬಹುದು..!

Published : May 22, 2026, 12:23 PM IST

ಹೈದರಾಬಾದ್: 2026ರ ಐಪಿಎಲ್ ಟೂರ್ನಿಯಲ್ಲಿಂದು ಬಲಿಷ್ಠ ಆರ್‌ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿನ ಫಲಿತಾಂಶ, 18 ಅಂಕ ಗಳಿಸಿರುವ ಗುಜರಾತ್ ಟೈಟಾನ್ಸ್ ತಂಡವನ್ನು ಟಾಪ್-2 ಪಟ್ಟಿಯಿಂದ ಹೊರಬೀಳುವಂತೆ ಮಾಡುವ ಸಾಧ್ಯತೆಯಿದೆ.

PREV
16
ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ಗುಜರಾತ್

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 229 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಇದಾದ ಬಳಿಕ ಐದು ಬಾರಿಯ ಚಾಂಪಿಯನ್ ಸಿಎಸ್‌ಕೆ ತಂಡವನ್ನು 89 ರನ್‌ಗಳಿಂದ ಮಣಿಸಿ ನೆಟ್‌ ರನ್‌ರೇಟ್ ಉತ್ತಮಪಡಿಸಿಕೊಳ್ಳುವುದರ ಜತೆಗೆ ಅಂಕಪಟ್ಟಿಯಲ್ಲಿ 18 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೇರಿದೆ.

26
ಟಾಪ್-2 ಪಟ್ಟಿಯಲ್ಲೇ ಸ್ಥಾನ ಉಳಿಸಿಕೊಳ್ಳುತ್ತಾ ಗುಜರಾತ್?

ಗುಜರಾತ್ ಟೈಟಾನ್ಸ್ ತಂಡವು 14 ಪಂದ್ಯಗಳನ್ನಾಡಿ 9 ಗೆಲುವು ಹಾಗೂ 5 ಸೋಲು ಸಹಿತ 18 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ ಲೀಗ್ ಮುಕ್ತಾಯದ ವೇಳೆಗೂ ಇದೇ ಸ್ಥಾನವನ್ನು ಉಳಿಸಿಕೊಳ್ಳಲಿದೆಯೇ ಇಲ್ಲವೇ ಎನ್ನುವುದನ್ನು ಇಂದು ನಡೆಯಲಿರುವ ಆರ್‌ಸಿಬಿ-ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಮ್ಯಾಚ್ ನಿರ್ಧರಿಸಲಿದೆ.

36
ಒಂದು ವೇಳೆ ಇಂದು ಆರ್‌ಸಿಬಿ ಗೆದ್ದರೇ..?

ಇಂದು ನಡೆಯಲಿರುವ ಸನ್‌ರೈಸರ್ಸ್ ಎದುರಿನ ಮ್ಯಾಚ್‌ನಲ್ಲಿ ಆರ್‌ಸಿಬಿ ಗೆದ್ದರೇ, ಬೆಂಗಳೂರು ತಂಡವು 20 ಅಂಕಗಳೊಂದಿಗೆ ಲೀಗ್‌ನ ಟೇಬಲ್ ಟಾಪರ್ ಆಗಿ ಪ್ಲೇ ಆಫ್ ಪ್ರವೇಶಿಸಲಿದೆ. ಆಗ ಗುಜರಾತ್ ಟೈಟಾನ್ಸ್ ಎರಡನೇ ಸ್ಥಾನದಲ್ಲೇ ಉಳಿಯಲಿದ್ದು, ಆರ್‌ಸಿಬಿ ಜತೆ ಕ್ವಾಲಿಫೈಯರ್-1 ಆಡಲಿದೆ. ಅಲ್ಲಿ ಒಂದು ವೇಳೆ ಸೋತರೂ, ಫೈನಲ್‌ಗೇರಲು ಮತ್ತೊಂದು ಅವಕಾಶ ಸಿಗಲಿದೆ.

46
ಇನ್ನು ಸನ್‌ರೈಸರ್ಸ್ ಹೈದರಾಬಾದ್ ಗೆದ್ದರೇ?

ಇಂದು ನಡೆಯಲಿರುವ ಆರ್‌ಸಿಬಿ ಎದುರಿನ ಮ್ಯಾಚ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಗೆದ್ದರೇ, ಗುಜರಾತ್, ಆರ್‌ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬಳಿ ತಲಾ 18 ಅಂಕ ಗಳಿರಲಿವೆ. ಆರ್‌ಸಿಬಿಯಂತೂ +1.065 ರನ್‌ರೇಟ್ ಹೊಂದಿರುವುದರಿಂದ ಟಾಪ್ 2 ಪಟ್ಟಿಯಲ್ಲೇ ಸ್ಥಾನ ಉಳಿಸಿಕೊಳ್ಳಲಿದೆ. ಹೀಗಾಗಿ ಎರಡನೇ ಸ್ಥಾನಕ್ಕಾಗಿ ಸನ್‌ರೈಸರ್ಸ್ ಹಾಗೂ ಗುಜರಾತ್ ನಡುವೆ ಪೈಪೋಟಿ ಏರ್ಪಡಲಿದೆ.

56
ಸನ್‌ರೈಸರ್ಸ್ ಮೊದಲು ಬ್ಯಾಟ್ ಮಾಡಿದರೆ

ಸದ್ಯದ ಲೆಕ್ಕಾಚಾರದ ಪ್ರಕಾರ ಸನ್‌ರೈಸರ್ಸ್ ಹೈದರಾಬಾದ್ ತಂಡವು ಮೊದಲು ಬ್ಯಾಟ್ ಮಾಡಿ, ಬೃಹತ್ ಮೊತ್ತ ಕಲೆಹಾಕಿ ಆರ್‌ಸಿಬಿಯನ್ನು 87 ರನ್ ಅಂತರದಲ್ಲಿ ಸೋಲಿಸಿದರೆ, ಆಗ ಟಾಪ್-2 ಪಟ್ಟಿಯಿಂದ ಹೊರಬೀಳಲಿದ್ದು, ಸನ್‌ರೈಸರ್ಸ್ ಹೈದರಾಬಾದ್ ಕ್ವಾಲಿಫೈಯರ್-1 ಆಡಲು ಅರ್ಹತೆ ಪಡೆಯಲಿದೆ.

66
ಸನ್‌ರೈಸರ್ಸ್ ಚೇಸಿಂಗ್ ಆಯ್ದುಕೊಂಡರೆ..

ಇನ್ನು ಒಂದು ವೇಳೆ ಸನ್‌ರೈಸರ್ಸ್ ಹೈದರಾಬಾದ್ ತಂಡವು ಚೇಸಿಂಗ್ ಆಯ್ದುಕೊಂಡರೆ, ಆರ್‌ಸಿಬಿ ನೀಡುವ ಗುರಿಯನ್ನು ಕೇವಲ 11.1 ಓವರ್‌ಗಳಲ್ಲಿ ರೀಚ್ ಆಗಬೇಕು. ಹೀಗಾದರೂ ಸಹ ಗುಜರಾತ್ ಟೈಟಾನ್ಸ್ ತಂಡವು 18 ಅಂಕ ಹೊಂದಿದ ಹೊರತಾಗಿಯೂ ಟಾಪ್-2 ಪಟ್ಟಿಯಿಂದ ಹೊರಬೀಳಲಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories