ಐಪಿಎಲ್ 2026 ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೊರಬಿದ್ದಿದೆ. 14 ಪಂದ್ಯದಲ್ಲಿ 12 ಅಂಕ ಪಡೆದ ಸಿಎಸ್‌ಕೆ ಗುಜರಾತ್ ವಿರುದ್ದ ಸೋಲು ಕಂಡು ಪ್ಲೇ ಆಫ್ ಕನಸು ನುಚ್ಚು ನೂರಾಗಿದ್ದು ಮಾತ್ರವಲ್ಲ, ಟೂರ್ನಿಯಿಂದಲೇ ಹೊರಬಿದ್ದಿದೆ. ಧೋನಿ ಕತೆ ಏನು?
ಐಪಿಎಲ್ 2026ರ ಪ್ಲೇ ಆಫ್ ಆಸೆ ಜೀವಂತವಾಗಿರಿಸಲು ಕೊನೆಯ ಅವಕಾಶವನ್ನು ಸಿಎಸ್‌ಕೆ ಕೈಚೆಲ್ಲಿದೆ. ಗುಜರಾತ್ ಟೈಟಾನ್ಸ್ ವಿರುದ್ದ ಹೀನಾಯ ಸೋಲು ಕಂಡ ಸಿಎಸ್‌ಕೆ ಐಪಿಎಲ್ 2026 ಟೂರ್ನಿಯಿಂದ ಹೊರಬಿದ್ದಿದೆ. ಈ ಮೂಲಕ ಸಿಎಸ್‌ಕೆಯ ಈ ಬಾರಿಯ ಹೋರಾಟ ಅಂತ್ಯಗೊಂಡಿದೆ. ಸೋಲು, ಧೋನಿ ಅನುಪಸ್ಥಿತಿ ಸೇರಿದಂತೆ ಹಲವು ಕಾರಣಗಳಿಂದ ಈ ಬಾರಿಯ ಸಿಎಸ್‌ಕೆ ಜರ್ನಿ ಅಭಿಮಾನಿಗಳಿಗೆ ಕಹಿ ಅನುಭವವೇ ಹೆಚ್ಚು ನೀಡಿದೆ.
25
ಚೆನ್ನೈಗೆ ಬಿಗ್ ಟಾರ್ಗೆಟ್
ಮೊದಲು ಬ್ಯಾಟ್ ಮಾಡಿದ ಗುಜರಾತ್ ನೀಡಿದ 230 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಚೆನ್ನೈ, 13.4 ಓವರ್‌ಗಳಲ್ಲಿ 140 ರನ್‌ಗಳಿಗೆ ಆಲೌಟ್ ಆಗಿ 89 ರನ್‌ಗಳ ಹೀನಾಯ ಸೋಲು ಕಂಡಿತು. ಸಂಜು ಸ್ಯಾಮ್ಸನ್ ಗೋಲ್ಡನ್ ಡಕ್ ಆದರೆ, 17 ಎಸೆತಗಳಲ್ಲಿ 47 ರನ್ ಚಚ್ಚಿದ ಶಿವಂ ದುಬೆ ಚೆನ್ನೈ ಪರ ಟಾಪ್ ಸ್ಕೋರರ್ ಎನಿಸಿದರು. ಮ್ಯಾಥ್ಯೂ ಶಾರ್ಟ್ 14 ಎಸೆತಗಳಲ್ಲಿ 24 ರನ್ ಗಳಿಸಿದರೆ, ನಾಯಕ ರುತುರಾಜ್ ಗಾಯಕ್ವಾಡ್ 7 ಎಸೆತಗಳಲ್ಲಿ 16 ಮತ್ತು ಅಂಶುಲ್ ಕಾಂಬೋಜ್ 8 ಎಸೆತಗಳಲ್ಲಿ 19 ರನ್ ಗಳಿಸಿದರು.
35
140 ರನ್‌ಗೆ ಸಿಎಸ್‌ಕೆ ಆಲೌಟ್
ಗುಜರಾತ್ ಪರ ಮೊಹಮ್ಮದ್ ಸಿರಾಜ್, ಕಗಿಸೊ ರಬಾಡ ಮತ್ತು ರಶೀದ್ ಖಾನ್ ತಲಾ 3 ವಿಕೆಟ್ ಪಡೆದು ಮಿಂಚಿದರು. ಈ ಸೋಲಿನೊಂದಿಗೆ ಚೆನ್ನೈ 14 ಪಂದ್ಯಗಳಲ್ಲಿ 6 ಗೆಲುವು, 8 ಸೋಲುಗಳೊಂದಿಗೆ 12 ಅಂಕ ಪಡೆದು ಏಳನೇ ಸ್ಥಾನದಲ್ಲಿ ಸೀಸನ್ ಮುಗಿಸಿತು. ಇತ್ತ 18 ಅಂಕಗಳೊಂದಿಗೆ ಗುಜರಾತ್ ಮೊದಲ ಕ್ವಾಲಿಫೈಯರ್‌ಗೆ ಬಹುತೇಕ ಅರ್ಹತೆ ಪಡೆದಿದೆ. ಐಪಿಎಲ್ ಇತಿಹಾಸದಲ್ಲಿ ರನ್‌ಗಳ ಅಂತರದಲ್ಲಿ ಚೆನ್ನೈ ತಂಡದ ಅತ್ಯಂತ ದೊಡ್ಡ ಸೋಲು ಇದಾಗಿದೆ. ಸ್ಕೋರ್: ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 229-4, ಚೆನ್ನೈ ಸೂಪರ್ ಕಿಂಗ್ಸ್ 13.4 ಓವರ್‌ಗಳಲ್ಲಿ 140ಕ್ಕೆ ಆಲೌಟ್.
ಐಪಿಎಲ್ 2026 ಟೂರ್ನಿಯಲ್ಲಿ ಧೋನಿ ಒಂದು ಪಂದ್ಯ ಆಡಿಲ್ಲ. ಇಂಜುರಿ ಕಾರಣದಿಂದ ಹೊರಗುಳಿದ ಧೋನಿ ಚೇತರಿಸಿಕೊಳ್ಳಲೇ ಇಲ್ಲ. ಅಭಿಮಾನಿಗಳು ಧೋನಿ ಇಂದು ಕಣಕ್ಕಿಳೀತಾರೆ, ನಾಳೆ ಕಣಕ್ಕಿಳಿತಾರೆ ಎಂದು ಕಾಯುತ್ತಾ ಕುಳಿತಿದ್ದೇ ಬಂತು. ಟೂರ್ನಿಯಿಂದಲೇ ಸಿಎಸ್‌ಕೆ ಹೊರಬಿದ್ದಿದೆ.
55
ಧೋನಿ ವಿದಾಯ?
ಈ ಐಪಿಎಲ್ ಟೂರ್ನಿಯಲ್ಲೇ ಧೋನಿ ಇಂಜುರಿ, ಫಿಟ್ನೆಸ್ ಕಾರಣದಿಂದ ಆಡಲು ಸಾಧ್ಯವಾಗಿಲ್ಲ. ಮುಂದಿನ ವರ್ಷ ಅಂದರೆ 45ನೇ ವಯಸ್ಸಿನಲ್ಲಿ ಧೋನಿ ಇದಕ್ಕಿಂತ ಉತ್ತಮ ಫಿಟ್ನೆಸ್ ಹಾಗೂ ಇಂಜುರಿ ಫ್ರಿಯಾಗಿ ಆಡಲು ಸಾಧ್ಯವಿಲ್ಲ. ಹೀಗಾಗಿ ಇದು ಧೋನಿಯ ಕೊನೆಯ ಐಪಿಎಲ್ ಟೂರ್ನಿ ಆದರೂ ಅಚ್ಚರಿ ಇಲ್ಲ. ಇಷ್ಟೇ ಅಲ್ಲ ಧೋನಿ ಸಂಪ್ರದಾಯದಂತೆ ಸೈಲೆಂಟ್ ಆಗಿ ಐಪಿಎಲ್ ಟೂರ್ನಿಯಿಂದ ಶೀಘ್ರದಲ್ಲೇ ವಿದಾಯ ಹೇಳಳಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.