ಟೀಂ ಇಂಡಿಯಾ ಮಹಿಳಾ ತಂಡದ ಸ್ಟಾರ್ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧನಾ, ನ್ಯಾಶನಲ್ ಕ್ರಶ್ ಆಗಿ ಗಮನಸೆಳೆದಿದ್ದಾರೆ. ಒಂದೆಡೆ ಸ್ಫೋಟಕ ಬ್ಯಾಟಿಂಗ್ ಮೂಲಕ ಮತ್ತೊಂದೆಡೆ ಆಕರ್ಷಕ ನೋಟದ ಮೂಲಕ ಹಲವರ ನೆಚ್ಚಿನ ಕ್ರಿಕೆಟ್ ಆಟಗಾರ್ತಿಯಾಗಿದ್ದಾರೆ. ಕಳೆದ ಹಲವು ದಿನಗಳಿಂದ ಸ್ಮೃತಿ ಮಂಧನಾ ಡೇಟಿಂಗ್ ಕುರಿತು ಸುದ್ದಿಗಳು ಹರಿದಾಡಿತ್ತು. ಇದೀಗ ಸ್ಮೃತಿ ಮಂಧನಾ ಕೈಹಿಡಿಯಲಿರುವ ಹುಡುಗ ಮದುವೆ ಖಚಿತಪಡಿಸಿದ್ದಾರೆ.
26
ಮದುವೆ ಖಚಿತಪಡಿದ ಪಲಾಶ್
ಮದುವೆ ಖಚಿತಪಡಿದ ಪಲಾಶ್
ಸ್ಮೃತಿ ಮಂಧನಾ ಮುದುವೆಯಾಗುತ್ತಿರುವ ಹುಡುಗ, ಮ್ಯೂಸಿಕ್ ಡೈರೆಕ್ಟರ್ ಪಲಾಶ್ ಮುಚಲ್. ಬಾಲಿವುಡ್ ಸಿನಿಮಾಗಳ ಮ್ಯೂಸಿಕ್ ಡೈರೆಕ್ಟರ್ ಆಗಿ ಹೆಸರು ಮಾಡಿರುವ ಪಲಾಶ್ , ಸ್ಮೃತಿ ಮಂಧನಾ ಜೊತೆ ಮದುವೆ ಖಚಿತಪಡಿಸಿದ್ದಾರೆ. ಶೀಘ್ರದಲ್ಲೇ ಸ್ಮೃತಿ ಮಂಧನಾ ಇಂದೋರ್ ಸೊಸೆಯಾಗಲಿದ್ದಾಳೆ ಎಂದಿದ್ದಾರೆ.
36
ಹಲವು ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದ ಜೋಡಿ
ಹಲವು ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದ ಜೋಡಿ
ಸ್ಮೃತಿ ಮಂಧನಾ ಹಾಗೂ ಪಲಾಶ್ ಹಲವು ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ರೆಸ್ಟೋರೆಂಟ್, ಕಾರ್ಯಕ್ರಮ, ಕ್ರಿಕೆಟ್ ಹೀಗೆ ಹಲವು ಕಡೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇದರೆ ಈ ಜೋಡಿ ಡೇಟಿಂಗ್ ಕುರಿತು ಯಾವುದೇ ಸುಳಿವು ನೀಡಿರಲಿಲ್ಲ. ಇದೀಗ ಪಲಾಶ್ ತಮ್ಮ ಮದುವೆ ಖಚಿತಪಡಿಸಿದ್ದಾರೆ.
ಪ್ರೆಸ್ ಕ್ಲಬ್‌ನಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪಲಾಶ‌್‌ಗೆ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧನಾ ಜೊತೆಗಿನ ಡೇಟಿಂಗ್ ಕುರಿತು ಪ್ರಶ್ನಿಸಲಾಗಿತ್ತು. ಈ ವೇಳೆ ಪ್ರತಿಕ್ರಿಯಿಸಿದ ಪಲಾಶ್, ಶೀಘ್ರದಲ್ಲೇ ಸ್ಮೃತಿ ಮಂಧನಾ ಇಂದೋರ್ ಸೊಸೆಯಾಗಲಿದ್ದಾಳೆ. ನಾನು ಈಗ ಇಷ್ಟೇ ಹೇಳಬಲ್ಲೆ ಎಂದು ನಕ್ಕಿದ್ದಾರೆ. ಇದರ ಜೊತೆಗೆ ನಾನು ನಿಮಗೆ ಹೆಡ್‌ಲೈನ್ ನೀಡಿದ್ದೇನೆ ಎಂದು ಹಾಸ್ಯ ಮಾಡಿದ್ದಾರೆ.
56
ಬಾಲಿವುಡ್‌ನಲ್ಲಿ ಖ್ಯಾತ ಡೈರೆಕ್ಟರ್ ಆಗಿ ಮಿಂಚುತ್ತಿದ್ದಾರೆ ಪಲಾಶ್
ಬಾಲಿವುಡ್‌ನಲ್ಲಿ ಖ್ಯಾತ ಡೈರೆಕ್ಟರ್ ಆಗಿ ಮಿಂಚುತ್ತಿದ್ದಾರೆ ಪಲಾಶ್
ಪಲಾಶ್ ಹಲವು ಬಾಲಿವುಡ್ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಬಾಲಿವುಡ್ ಸಿನಿಮಾದಲ್ಲೂ ನಟಿಸಿದ್ದಾರೆ. ಬೂತನಾಥ್ ರಿಟರ್ನ್, ದಿಶಿಕಿಯೋನ್ ಸೇರಿದಂತೆ ಹಲವು ಸಿನಿಮಾಗಳಿಗೆ ಮ್ಯೂಸಿಕ್ ಡೈರೆಕ್ಟ್ ಮಾಡಿದ್ದಾರೆ. ಕೆಲಿನ್ ಹಮ್ ಜೀ ಜಾನ್ ಸೇ ಹಿಂದಿ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್, ದೀಪಿಕಾ ಪಡುಕೋಣೆ ಜೊತೆ ನಟಿಸಿದ್ದಾರೆ.
66
ವಿಶ್ವಕಪ್ ಟೂರ್ನಿಯಲ್ಲಿರುವ ಮಂಧನಾ
ವಿಶ್ವಕಪ್ ಟೂರ್ನಿಯಲ್ಲಿರುವ ಮಂಧನಾ
ಸದ್ಯ ಸ್ಮೃತಿ ಮಂಧನಾ ಐಸಿಸಿ ಏಕದಿನ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿದ್ದಾರೆ. ಪ್ರೆಸ್ ಮೀಟ್ ವೇಳೆ ಪಲಾಶ್ ಟೀಂ ಇಂಡಿಯಾ ಮಹಿಳಾ ತಂಡಕ್ಕೆ ಶುಭಕೋರಿದ್ದಾರೆ. ನಾಯಕಿ ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧನಾ ಸೇರಿದಂತೆ ಇಡೀ ತಂಡ ಉತ್ತಮ ಪ್ರದರ್ಶನ ನೀಡಲಿ ಎಂದು ಹಾರೈಸಿದ್ದಾರೆ.