IPL ವೇಳೆಯಲ್ಲಿ ಬೆತ್ತಲೆ ಫೋಟೋ ಶೇರ್‌ ಮಾಡಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಪೂನಂ ಪಾಂಡೆ..!

Published : Feb 03, 2024, 02:50 PM ISTUpdated : Feb 03, 2024, 04:48 PM IST

ಪೂನಂ ಪಾಂಡೆ ಪಡ್ಡೆ ಹುಡುಗರ ಪಾಲಿನ ಹಾಟ್‌ ಫೇವರೇಟ್ ನಟಿ. ಸಾವು-ಬದುಕಿನ ಆಟದಲ್ಲಿ ಇದೀಗ ಹೊಸ ಶಾಕ್ ನೀಡಿದ್ದಾರೆ. ಪೂನಂ ಪಾಂಡೆ ಸತ್ತಿಲ್ಲ, ಬದುಕಿದ್ದಾರೆ ಎನ್ನುವುದನ್ನು ಸ್ವತಃ ಕಾನ್ಪುರ ಮೂಲದ ನಟಿ ಸ್ಪಷ್ಟಪಡಿಸಿದ್ದಾರೆ. ಇನ್ನು ಐಪಿಎಲ್ ಟೂರ್ನಿಯ ವೇಳೆ ಪೂನಂ ಪಾಂಡೆ ಬೆತ್ತಲೆ ಫೋಟೋವನ್ನು ಶೇರ್ ಮಾಡಿ ಪಡ್ಡೆಹುಡುಗರ ನಿದ್ದೆಗೆಡಿಸಿದ್ದರು.  

PREV
18
IPL ವೇಳೆಯಲ್ಲಿ ಬೆತ್ತಲೆ ಫೋಟೋ ಶೇರ್‌ ಮಾಡಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಪೂನಂ ಪಾಂಡೆ..!

ಪೂನಂ ಪಾಂಡೆ ಸರ್ವಿಕಲ್ ಕ್ಯಾನ್ಸರ್(ಗರ್ಭಕಂಠದ ಕ್ಯಾನ್ಸರ್)ನಿಂದ ಕೊನೆಯುಸಿರೆಳೆದಿದ್ದಾರೆ ಎನ್ನುವ ಸುದ್ದಿ ಫೆಬ್ರವರಿ 02ರಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಂಚಲವನ್ನೇ ಮೂಡಿಸಿತ್ತು.

28

ಆದರೆ ಇದೀಗ ಈ ಕಹಾನಿಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ತಾವು ಸತ್ತಿಲ್ಲ, ಗರ್ಭಕಂಠ ಕ್ಯಾನ್ಸರ್ ಕುರಿತಂತೆ ಜಾಗೃತಿ ಮೂಡಿಸುವ ಸಲುವಾಗಿ ತಾವು ಹೀಗೆ ಡ್ರಾಮಾ ಮಾಡಿದ್ದಾಗಿ ಪೂನಂ ಪಾಂಡೆ ವಿಡಿಯೋ ಪೋಸ್ಟ್ ಮಾಡಿದ್ದಾರೆ.  

38

ಪೂನಂ ಪಾಂಡೆ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿದ್ದು, 32 ವರ್ಷದ ಮಾದಕ ಮಾಡೆಲ್ ಗುರುವಾರ ಅವರ ಪೇಜ್‌ನಲ್ಲಿ ಪೂನಂ ಪಾಂಡೆ ಇನ್ನಿಲ್ಲ ಎನ್ನುವ ಸುದ್ದಿ ಸಾಕಷ್ಟು ವೈರಲ್ ಆಗಿತ್ತು.

48

ಉತ್ತರ ಪ್ರದೇಶದ ಕಾನ್ಪುರ ಮೂಲದ ಪೂನಂ, 2015ರಲ್ಲಿ ‘ನಶಾ’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. ಅದಾದ ಬಳಿಕ ಅನೇಕ ಚಿತ್ರಗಳಲ್ಲಿ ಅವರು ನಟಿಸಿದ್ದರು.

58

2011ರ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಭಾರತವು ಗೆಲುವು ಸಾಧಿಸಿದರೆ ತಾನು ಬೆತ್ತಲಾಗಿ ಕಾಣಿಸಿಕೊಳ್ಳುತ್ತೇನೆ ಎಂಬ ವಿಚಿತ್ರ ಹೇಳಿಕೆ ನೀಡಿದ್ದ ಪೂನಂ ಆಗಾಗ ತಮ್ಮ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಾಗಿದ್ದರು.

68

2011ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆದರೆ ಪೂನಂ ಪಾಂಡೆ ತಾವು ಹೇಳಿದಂತೆ ಬೆತ್ತಲಾಗಿರಲಿಲ್ಲ. ಬಿಸಿಸಿಐ ಅವರಿಗೆ ಅನುಮತಿ ನೀಡಿರಲಿಲ್ಲ.

78

ಇದಾದ ಬಳಿಕ 2012ರ ಐಪಿಎಲ್ ಟೂರ್ನಿಯ ವೇಳೆಯ ಸಂದರ್ಭದಲ್ಲಿಯೂ ಮತ್ತೆ ಪೂನಂ ಪಾಂಡೆ ಇಂಥದ್ದೇ ವಿಚಾರಕ್ಕೆ ಸುದ್ದಿಯಾಗಿದ್ದರು. ಐಪಿಎಲ್‌ ಫೈನಲಿಸ್ಟ್‌ ತಂಡಕ್ಕಾಗಿ ಬಟ್ಟೆಬಿಚ್ಚಿ ಸುದ್ದಿಯಾಗಿದ್ದರು.

88

2012ರಲ್ಲಿ ಗೌತಮ್ ಗಂಭೀರ್ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಚಾಂಪಿಯನ್ ಆಗುತ್ತಿದ್ದಂತೆಯೇ ಆ ಖುಷಿಯಲ್ಲಿ ಪೂನಂ ಪಾಂಡೆ ಟ್ವಿಟರ್‌ನಲ್ಲಿ ತಮ್ಮ ಬೆತ್ತಲೆ ಫೋಟೋವನ್ನು ಶೇರ್ ಮಾಡಿ ಸುದ್ದಿಯಾಗಿದ್ದರು.

Read more Photos on
click me!

Recommended Stories