Most Educated Indian Cricketer: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅಥವಾ ಎಂಎಸ್ ಧೋನಿ ಅಲ್ಲ! ಭಾರತದ ಅತ್ಯಂತ ವಿದ್ಯಾವಂತ ಕ್ರಿಕೆಟಿಗ ಯಾರು? PhD, MBA, CA ಸೇರಿದಂತೆ ಭಾರತೀಯ ಹಲವು ಡಿಗ್ರಿ ಪಡೆದಿರುವ ಆ ಕ್ರಿಕೆಟಿಗ, ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಸ್ಟಾರ್ ಯಾರು ನೋಡೋಣ.
ಎಂಎಸ್ ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಖಂಡಿತವಾಗಿಯೂ ವಿಶ್ವದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು, ಆದರೆ ಕ್ರಿಕೆಟ್‌ನಲ್ಲಿ ರನ್ ಗಳಿಸುವ ಓಟದಲ್ಲಿ, ಅವರು ಶೈಕ್ಷಣಿಕವಾಗಿ ಹಿಂದುಳಿದಿದ್ದರು. ಆದರೆ ಟೀಮ್ ಇಂಡಿಯಾದ ಈ ಆಟಗಾರ ಕ್ರೀಡೆ ಮತ್ತು ಶೈಕ್ಷಣಿಕ ಎರಡರಲ್ಲೂ ಸೂಪರ್ ಯಾರು ಗೊತ್ತಾ?
26
ವೆಂಕಟೇಶ್ ಅಯ್ಯರ್
ವೆಂಕಟೇಶ್ ಅಯ್ಯರ್ ಭಾರತದ ವಿದ್ಯಾವಂತ ಕ್ರಿಕೆಟರ್. ನಾಲ್ಕು ವರ್ಷಗಳಿಂದ ಟೀಮ್ ಇಂಡಿಯಾ ಸೇರಲು ಪ್ರಯತ್ನಿಸುತ್ತಿರುವ ಶ್ರೇಯಸ್. ದೇಶೀಯ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲಿ ಮಿಂಚುತ್ತಲೇ ಇದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB) ಸತತ ಎರಡನೇ ಚಾಂಪಿಯನ್‌ಶಿಪ್ ಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಇದಲ್ಲದೆ, ಅವರು ಮಧ್ಯಪ್ರದೇಶ ಪರ ಆಲ್‌ರೌಂಡ್ ಪ್ರದರ್ಶನ ನೀಡಿ, ತಂಡವನ್ನು ಹಲವಾರು ಸ್ಮರಣೀಯ ವಿಜಯಗಳಿಗೆ ಕರೆದೊಯ್ದರು.
36
ಕ್ರಿಕೆಟ್ ನಲ್ಲೂ ವಿದ್ಯಾಭ್ಯಾಸದಲ್ಲೂ ಮುಂದು
ಅಯ್ಯರ್ ಕ್ರಿಕೆಟ್ ಮೈದಾನದಲ್ಲಿ ಒಬ್ಬ ಸ್ಟಾರ್, ಅದರ ಜೊತೆಗೆ ಶೀಘ್ರದಲ್ಲಿ ಅವರ ಹೆಸರಿನ ಮುಂದೆ ಡಾಕ್ಟರ್ ಎನ್ನುವ ಬಿರುದು ಸೇರಲಿದೆ.. ಯಾಕಂದ್ರೆ ಕಳೆದ ಕೆಲವು ವರ್ಷಗಳಿಂದ, ಅಯ್ಯರ್ ಡಾಕ್ಟರೇಟ್ ಪದವಿಯನ್ನು ಪಡೆಯುತ್ತಿದ್ದಾರೆ. ಅವರು ಫಿನಾನ್ಸ್ ನಲ್ಲಿ ಪಿಎಚ್‌ಡಿಗೆ ಸೇರಿಕೊಂಡಿದ್ದಾರೆ. ಆದರೆ, ಅವರು ಇನ್ನೂ ಪದವಿಯನ್ನು ಗಳಿಸಿಲ್ಲ.
ಅಯ್ಯರ್ ಈ ಹಿಂದೆ ಫಿನಾನ್ಸ್ ನಲ್ಲಿ ಎಂಬಿಎ ಮುಗಿಸಿದ್ದರು. ಎಂಬಿಎ ನಂತರ, ಅವರಿಗೆ ಪ್ರತಿಷ್ಠಿತ ಡೆಲಾಯ್ಟ್ ಕಂಪನಿಯಲ್ಲಿ ಉದ್ಯೋಗದ ಅವಕಾಶ ಸಿಕ್ಕಿತ್ತು, ಆದರೆ ಅವರು ಕ್ರಿಕೆಟ್‌ನಲ್ಲಿ ಕರಿಯರ್ ಮುಂದುವರಿಸುವ ಸಲುವಾಗಿ ಕೆಲಸದಿಂದ ಹಿಂದೆ ಸರಿದರು. ಅಷ್ಟೇ ಅಲ್ಲ ಇವರು CA ಪರೀಕ್ಷೆ ಕೂಡ ಕ್ಲಿಯರ್ ಮಾಡಿದ್ದಾರೆ.
56
ಐಪಿಎಲ್‌ನ ಅತ್ಯಂತ ದುಬಾರಿ ಆಟಗಾರರಲ್ಲಿ ಒಬ್ಬರು
ಅಯ್ಯರ್ 2021 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು, ಕೇವಲ ₹20 ಲಕ್ಷ ಮೂಲ ಬೆಲೆಗೆ ತಂಡವನ್ನು ಸೇರಿದರು. ಅವರು ತಮ್ಮ ಮೊದಲ ಸೀಸನ್ ನಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು, ಕೆಕೆಆರ್ ಅನ್ನು ಫೈನಲ್‌ಗೆ ಕರೆದೊಯ್ದರು. ಮುಂದಿನ ವರ್ಷ, ಫ್ರಾಂಚೈಸಿ ಅವರ ವೇತನವನ್ನು ₹20 ಲಕ್ಷದಿಂದ ₹8 ಕೋಟಿಗೆ ಹೆಚ್ಚಿಸಿತು, ಇದು 3,900% ಹೆಚ್ಚಳವಾಗಿದೆ.
66
ಐಪಿಎಲ್ ನಿಂದ ಅಯ್ಯರ್ ಇಲ್ಲಿಯವರೆಗೆ ಗಳಿಸಿದ್ದೆಷ್ಟು?
2025 ರಲ್ಲಿ ವೆಂಕಟೇಶ್ ಅಯ್ಯರ್ ಐಪಿಎಲ್ ಮೆಗಾ ಹರಾಜಿಗೆ ಪ್ರವೇಶಿಸಿದಾಗ, ಹಲವಾರು ಫ್ರಾಂಚೈಸಿಗಳು ಅವರನ್ನು ಸಹಿ ಮಾಡಲು ಪೈಪೋಟಿ ನಡೆಸುತ್ತಿದ್ದವು. ಈ ಬಾರಿ, ಅವರನ್ನು ₹23.75 ಲಕ್ಷಕ್ಕೆ ಮಾರಾಟ ಮಾಡಲಾಯಿತು, ಇದು ಅವರ ಹಿಂದಿನ ಬೆಲೆಗಿಂತ ಸುಮಾರು ಮೂರು ಪಟ್ಟು ಹೆಚ್ಚು ಆದರೆ, ಕೆಕೆಆರ್ ಅವರನ್ನು 2026 ರ ಸೀಸನ್ ಗೆ ಮೊದಲು ರಿಲೀಸ್ ಮಾಡಿತು ಮತ್ತು ಅವರು ₹7 ಕೋಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸೇರಿದರು. ಅವರು ಇಲ್ಲಿಯವರೆಗೆ ಐಪಿಎಲ್ ನಿಂದ ₹55 ಕೋಟಿ ಗಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.