ಎಂಎಸ್ ಧೋನಿ ಬಳಿ ಇದೆ 70 ಬೈಕ್, ಈ ಪೈಕಿ ಅತೀ ದುಬಾರಿ ಬೈಕ್ ಬೆಲೆ ಕೇಳಿದರೆ ದಂಗಾಗುವುದು ಖಚಿತ

Published : Aug 04, 2026, 01:03 PM IST

ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಗೆ ಬೈಕ್ ಮೇಲೆ ಪ್ರೀತಿ ಹೆಚ್ಚು. ಹೀಗಾಗಿ ಸೂಪರ್ ಬೈಕ್ ಸೇರಿದಂತೆ ಹಲವು ಬ್ರ್ಯಾಂಡ್ ಬೈಕ್‌ಗಳು ಧೋನಿ ಬಳಿ ಇದೆ. ಬೈಕ್ ಪಾರ್ಕ್ ಮಾಡಲು ಪ್ರತ್ಯೇಕ ಕಟ್ಟಡ ನಿರ್ಮಿಸಿದ್ದಾರೆ. ಧೋನಿ ಬಳಿ ಇರುವ ದುಬಾರಿ ಬೈಕ್ ಬೆಲೆ ಎಷ್ಟು?

PREV
16
ಧೋನಿ ಬಳಿ ಇದೆ 70 ಬೈಕ್

ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಬಳಿ ವಿಂಟೇಜ್ ಸೇರಿದಂತೆ ಬ್ರ್ಯಾಂಡ್ ನ್ಯೂ ಕಾರು ಹಾಗೂ ಬೈಕ್‌ಗಳಿವೆ. ವಾಹನದ ಮೇಲೆ ಧೋನಿಗೆ ಅತೀವ ಪ್ರೀತಿ. ಅದರಲ್ಲೂ ಹಳೇ ವಿಂಟೇಜ್ ವಾಹನಗಳು, ಅಪರೂಪದ ವಾಹನಗಳನ್ನು ಧೋನಿ ಖರೀದಿಸಿ ರಿಸ್ಟೋರ್ ಮಾಡುತ್ತಾರೆ. ಇನ್ನು ಪ್ರತಿ ವಾಹನಗಳನ್ನು ಧೋನಿ ಬಳಕೆ ಮಾಡುತ್ತಾರೆ. ವಿಶೇಷ ಅಂದರೆ ಧೋನಿ ಬಳಿ ಒಟ್ಟು 70 ಬೈಕ್‌ಗಳಿವೆ.

26
ಧೋನಿ ಬಳಿ ಇದೆ ಸೂಪರ್ ಬೈಕ್

ಧೋನಿ ಬಳಿ ಹಲವು ದುಬಾರಿ ಮೌಲ್ಯದ ಬೈಕ್‌ಗಳಿವೆ. ಕವಾಸಕಿ ನಿಂಜಾ, ಹರ್ಲೇ ಡೇವಿಡ್ಸನ್ ಫ್ಯಾಟ್ ಬಾಯ್, ಡುಕಾಟಿ 1098, ಟಿವಿಎಸ್ ಅಪಾಚೆ ಆರ್‌ಆರ್ 310 ಸೇರಿದಂತೆ ಹಲವು ಬೈಕ್‌ಗಳಿವೆ. ವಿಶೇಷ ಅಂದರೆ ಯಮಹಾ RD350, ಹಳೇ ಯೆಜ್ಡಿ ಬೈಕ್ ಸೇರಿದಂತೆ ಹಲವು ಬೈಕ್ ಧೋನಿ ಬಳಿ ಇದೆ. ಧೋನಿ ಮೊದಲು ಬಳಸಿದ ಯೆಜ್ಡಿ ಬೈಕ್ ಈಗಲೂ ಉತ್ತಮ ಕಂಡೀಷನ್‌ನಲ್ಲಿದೆ.

36
ಧೋನಿ ಬಳಿ ಇರುವ ದುಬಾರಿ ಬೈಕ್ ಯಾವುದು?

ಎಂಎಸ್ ಧೋನಿ ಗ್ಯಾರೇಜ್‌ನಲ್ಲಿ ಹಲವು ದುಬಾರಿ ಬೈಕ್ ಪೈಕಿ ಹ್ಯಾಲ್ಕಟ್ ಬೈಕ್ ಅತೀ ದುಬಾರಿ ಬೈಕ್ ಆಗಿದೆ. ಹ್ಯಾಲ್ಕಟ್ X132 ಧೋನಿ ಬಳಿ ಇರುವ ಪ್ರೀಮಿಯಂ ಸೂಪರ್ ಬೈಕ್. ಇದರ ಬೆಲೆ ಭಾರತದಲ್ಲಿ 47 ಲಕ್ಷ ರೂಪಾಯಿಯಿಂದ 52 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಹ್ಯಾಲ್ಕಟ್ X132 ಬೈಕ್ ಭಾರತದಲ್ಲಿ ಕೇವಲ ಧೋನಿ ಮಾತ್ರ ಬಳಕೆ ಮಾಡುತ್ತಿದ್ದಾರೆ.

46
ಇತರ ದುಬಾರಿ ಬೈಕ್

ಧೋನಿ ಬಳಿ ಇರುವ ಕವಾಸಕಿ ನಿಂಜಾ ZX-14R ಬೈಕ್ ಬೆಲೆ ಸುಮಾರು 22 ಲಕ್ಷ ರೂಪಾಯಿ. ಡುಕಾಟಿ 1098 ಬೆಲೆ 12 ಲಕ್ಷ ರೂಪಾಯಿ. ಇನ್ನು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಸೇರಿದಂತೆ ಹಲವು ವಿಂಟೇಡ್ ರಾಯಲ್ ಎನ್‌ಫೀಲ್ಡ್ ಬೈಕ್ ಹೊಂದಿದ್ದಾರೆ. ಧೋನಿ ಆರಂಭಿಕ ದಿನಗಳಲ್ಲಿ ಬಳಸಿದ ರಾಜದೂತ್ ಕ್ಲಾಸಿಕ್ ಬೈಕ್ ಉತ್ತಮ ಕಂಡೀಷನ್‌ನಲ್ಲಿದೆ.

56
ಎರಡು ಅಂತಸ್ತಿನ ಗ್ಯಾರೇಜ್

ಧೋನಿ ಬೈಕ್ ಪಾರ್ಕ್ ಮಾಡಲು ಎರಡು ಅಂತಸ್ತಿನ ಕಟ್ಟಡ ಮೀಸಲಿಟ್ಟಿದ್ದಾರೆ. ರಾಂಚಿಯಲ್ಲಿರುವ ಧೋನಿ ಫಾರ್ಮ್ ಹೌಸ್‌ನಲ್ಲಿ ಅತೀ ದೊಡ್ಡ ಕಟ್ಟಡದಲ್ಲಿ ಬೈಕ್ ನಿಲ್ಲಿಸಿದ್ದಾರೆ. ಕೋವಿಡ್ ಸಮಯದಲ್ಲಿ ಹಲವು ಬೈಕ್‌ಗಳು ಬಳಕೆ ಮಾಡಲು ಸಾಧ್ಯವಾಗದೆ ಹಾಳಾಗಿತ್ತು. ಮತ್ತೆ ಎಲ್ಲಾ ಬೈಕ್ ರಿಪೇರ್ ಮಾಡಿ ಸುಸ್ಥಿತಿಯಲ್ಲಿ ಇಡಲಾಗಿದೆ.

66
ವಿಂಟೇಜ್ ವಾಹನಗಳ ಜೊತೆ ಧೋನಿ

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ಧೋನಿ ಸಂಪೂರ್ಣವಾಗಿ ಕುಟುಂಬದ ಜೊತೆ ವಿಶ್ರಾಂತಿಯಲ್ಲಿದ್ದಾರೆ. ಈ ವೇಳೆ ಹಲವು ವಾಹನಗಳಲ್ಲಿ ಧೋನಿ ಸಾರ್ವಜನಿಕವಾಗಿ ಕಾಣಿಸಿಕೊಲ್ಳುತ್ತಿದ್ದಾರೆ. ಕೇವಲ ಐಪಿಎಲ್ ಟೂರ್ನಿಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. 2026ರ ಐಪಿಎಲ್ ಟೂರ್ನಿಯಲ್ಲಿ ಧೋನಿ ಗಾಯದ ಕಾರಣದಿಂದ ಪಾಲ್ಗೊಂಡಿಲ್ಲ. ಇದೀಗ ಮುಂದಿನ ಐಪಿಎಲ್ ಟೂರ್ನಿಯಲ್ಲಿ ಧೋನಿ ಕಾಣಿಸಿಕೊಳ್ಳುತ್ತಾರಾ, ವಿದಾಯ ಹೇಳುತ್ತಾರಾ ಅನ್ನೋ ಕುತೂಹಲ ಹೆಚ್ಚಾಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories